ಕೋವಿಡ್ ಪರೀಕ್ಷೆ: ದರ ಪರಿಷ್ಕರಿಸಿದ ರಾಜ್ಯ ಸರ್ಕಾರ

China- corona vaccine
Published on

ಬೆಂಗಳೂರು: ಖಾಸಗಿ ಪ್ರಯೋಗಾಲಯಗಳಲ್ಲಿ ನಡೆಸುವ ವಿವಿಧ ಮಾದರಿಯ ಕೋವಿಡ್ ಪರೀಕ್ಷೆಗಳ ದರ ಪರಿಷ್ಕರಣೆ ಮಾಡಲಾಗಿದೆ. ಕೋವಿಡ್ ಕಾರ್ಯಪಡೆ ಸಲಹೆ ಮೇರೆಗೆ ಆರ್​ಟಿ-ಪಿಸಿಆರ್ ಪರೀಕ್ಷೆಗಾಗಿ ಖಾಸಗಿ ಪ್ರಯೋಗಾಲಯಗಳಿಗೆ ಕಳಿಸುವ ಪ್ರತಿ ಮಾದರಿಗೆ 800 ರೂ. ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್​ನಿಂದ (ಐಸಿಎಂಆರ್) ಮಾನ್ಯತೆ ಪಡೆದ ರಾಜ್ಯದ ಪ್ರಯೋಗಾಲಯಗಳಿಗೆ ಮಾತ್ರ ಈ ನೂತನ ದರ ಅನ್ವಯವಾಗಲಿದೆ.

ತಪಾಸಣೆ ಹಾಗೂ ದೃಢೀಕರಣ ಪರೀಕ್ಷೆಗಳ ಶುಲ್ಕ, ಪಿಪಿಇ ಕಿಟ್ ವೆಚ್ಚ ಕೂಡ ನಿಗದಿತ ದರದಲ್ಲಿಯೇ ಸೇರಿಸಲಾಗಿದೆ. ಹೆಚ್ಚುವರಿ ಶುಲ್ಕ ವಿಧಿಸುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸೋಂಕು ಶಂಕಿತರ ಪ್ರತಿ ಮಾದರಿ ಸಂಗ್ರಹಣೆ ಹಾಗೂ ಪ್ರಯೋಗಾಲಯಗಳಿಗೆ ರವಾನೆ ಮಾಡುವುದಕ್ಕೆ 400 ರೂ. ನಿಗದಿಪಡಿಸಲಾಗಿದೆ. ನೇರವಾಗಿ ಪ್ರಯೋಗಾಲಯಕ್ಕೆ ತೆರಳುವವರಿಗೆ ಆರ್​ಟಿ-ಪಿಸಿಆರ್ ಪರೀಕ್ಷೆ ಶುಲ್ಕವನ್ನು 1,200ಕ್ಕೆ ಇಳಿಕೆ ಮಾಡಲಾಗಿದೆ. ಖಾಸಗಿ ಪ್ರಯೋಗಾಲಯದವರೇ ಸ್ಥಳೀಯವಾಗಿ ಮಾದರಿ ಸಂಗ್ರಹಿಸಿ, ಆರ್​ಟಿ-ಪಿಸಿಆರ್ ಪರೀಕ್ಷೆ ನಡೆಸಿದಲ್ಲಿ 1,600 ರೂ. ಪಾವತಿಸಬೇಕು ಎಂದು ಆದೇಶದಲ್ಲಿ ಹೇಳಿದೆ. Top rated essay writing services

ವ್ಯಕ್ತಿ ನೇರವಾಗಿ ಪ್ರಯೋಗಾಲಯಕ್ಕೆ ತೆರಳಿ ಮಾಡಿಸಿಕೊಳ್ಳುವ ಟ್ರೂನ್ಯಾಟ್ ಪರೀಕ್ಷೆಗೆ 2,220 ರೂ. ಹಾಗೂ ಪ್ರಯೋಗಾಲಯದವರೇ ಮನೆಗೆ ಬಂದು ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಿದಲ್ಲಿ 2,600 ರೂ. ದರ ನಿಗದಿ ಮಾಡಲಾಗಿದೆ. ಸಿಬಿ ನ್ಯಾಟ್ ಪರೀಕ್ಷೆ ದರವನ್ನೂ ಪರಿಷ್ಕರಣೆ ಮಾಡಲಾಗಿದ್ದು, ಪ್ರಯೋಗಾಲಯಕ್ಕೆ ತೆರಳಿ ಪರೀಕ್ಷೆ ಮಾಡಿಸಿಕೊಂಡಲ್ಲಿ 3,800 ರೂ. ಹಾಗೂ ಪ್ರಯೋಗಾಲಯದವರು ಮನೆಗೆ ಬಂದು ಮಾದರಿ ಸಂಗ್ರಹಿಸಿ ನಡೆಸುವ ಪರೀಕ್ಷೆಗೆ 4,200 ರೂ., ರ್ಯಾಪಿಡ್ ಆಂಟಿಬಾಡಿ ಪರೀಕ್ಷೆಗೆ 500 ರೂ. ಹಾಗೂ ರ್ಯಾಪಿಡ್ ಆಂಟಿಜೆನ್ ಪರೀಕ್ಷೆಗೆ 700 ರೂ. ನಿಗದಿಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net