ತಿರುಪತಿ ದರ್ಶನಕ್ಕೆ ಕೋವಿಡ್ ಟೆಸ್ಟ್ ಕಡ್ಡಾಯ

sdfsfsdad
Published on

ತಿರುಪತಿ: ತಿರುಮಲದ ವೆಂಕಟೇಶ್ವರಸ್ವಾಮಿಯ ದರ್ಶನಕ್ಕೆ ಬರುವ ಭಕ್ತರಿಗೆ ಕೋವಿಡ್ ನೆಗಟಿವ್ ವರದಿಯನ್ನು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಮತ್ತೆ ಕಡ್ಡಾಯ ಮಾಡಿದೆ. ದರ್ಶನಕ್ಕೆ ಬರುವವರು ಎರಡೂ ಡೋಸ್ ಲಸಿಕೆ ಪಡೆದಿರಬೇಕು ಮತ್ತು 48 ತಾಸು ಮುಂಚೆ ಕೋವಿಡ್ ಆರ್​ಟಿ-ಪಿಸಿಆರ್ ಟೆಸ್ಟ್ ಮಾಡಿಸಿಕೊಂಡು ನೆಗಟಿವ್ ವರದಿ ಹೊಂದಿರಬೇಕು. ಇವೆರಡೂ ಪ್ರಮಾಣ ಪತ್ರಗಳನ್ನು ತಮ್ಮ ಸಂಗಡ ತರುವುದು ಕಡ್ಡಾಯ ಎಂದು ಟಿಟಿಡಿ ಹೇಳಿದೆ.

ಕೋಟಿ ರೂ. ಬೆಲೆಯ 530 ಸೇವಾ ಟಿಕೆಟ್: ತಿರುಮಲದಲ್ಲಿ ಮಾರಾಟವಾಗದೆ ಉಳಿದಿರುವ ಉದಯಾಸ್ತಾಮಾನ ಆರ್ಜಿತ ಸೇವಾ ಟಿಕೆಟ್​ಗಳನ್ನು ಭಕ್ತರಿಗೆ ಮಾರಾಟ ಮಾಡಲು ಟಿಟಿಡಿ ನಿರ್ಧರಿಸಿದೆ. ಒಂದು ಕೋಟಿ ರೂಪಾಯಿಯ ಈ ಸೇವಾ ಟಿಕೆಟ್​ಗಳು ಆನ್​ಲೈನ್ ಮತ್ತು ಆಫ್​ಲೈನ್​ನಲ್ಲಿ ಲಭ್ಯವಿದೆ. ಶುಕ್ರವಾರ ಮಾತ್ರ ಈ ಟಿಕೆಟ್ ದರ 1.50 ಕೋಟಿ ರೂಪಾಯಿ ಆಗಿರುತ್ತದೆ.

ಈ ಟಿಕೆಟ್ ಮಾರಾಟದ ಮೂಲಕ ಮೂರು ಪ್ರಮುಖ ಯೋಜನೆಗಳಿಗೆ 600 ಕೋಟಿ ರೂಪಾಯಿಯ ನಿಧಿ ಸಂಗ್ರಹಿಸಲು ಟಿಟಿಡಿ ಉದ್ದೇಶಿಸಿದೆ. ತಿರುಪತಿಯಲ್ಲಿ ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕೂಡ ಈ ಮೂರು ಯೋಜನೆಯಲ್ಲಿ ಸೇರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net