ಬಸ್​ ನಿಲ್ದಾಣದಲ್ಲಿ ಕೋವಿಡ್​ ಆರೈಕೆ ಕೇಂದ್ರ, ಸಾರಿಗೆ ಸಿಬ್ಬಂದಿಗೆ ಉಚಿತ ಚಿಕಿತ್ಸೆ

bus ambulence 1
Published on

ಬೆಂಗಳೂರು: ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಸಾರಿಗೆ ಬಸ್​ ನಿಲ್ದಾಣದಲ್ಲಿ ಕೋವಿಡ್​ ಆರೈಕೆ ಕೇಂದ್ರ ತೆರೆಯಲಾಗಿದೆ.

ಪೀಣ್ಯದಲ್ಲಿನ ಬಸವೇಶ್ವರ ಬಸ್​ ನಿಲ್ದಾಣದಲ್ಲಿ ಸಿದ್ಧಪಡಿಸಿರುವ ಕೋವಿಡ್​ ಆರೈಕೆ ಕೇಂದ್ರ ಗುರುವಾರ(ಆ.6) ಕಾರ್ಯಾರಂಭ ಮಾಡಲಿದ್ದು, ಸಾರಿಗೆ ಸಿಬ್ಬಂದಿ ಮತ್ತು ಕುಟುಂಬದವರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ.

ಪೀಣ್ಯದ ಬಸವೇಶ್ವರ ಬಸ್​ ನಿಲ್ದಾಣದ ಕೆಳ ಮತ್ತು ಮೊದಲ ಮಹಡಿಯಲ್ಲಿ ಸೋಂಕಿತರ ಆರೈಕೆಗಾಗಿ 200 ಹಾಸಿಗೆಗಳನ್ನು ಹಾಕಲಾಗಿದೆ. ಅದರಲ್ಲಿ ಶೇ.50 ಹಾಸಿಗೆಗಳನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿ ಮತ್ತು ಕುಟುಂಬದವರಿಗೆ ಉಚಿತವಾಗಿ ಚಿಕಿತ್ಸೆ ನೀಡಲು ಮೀಸಲಿಡಲಾಗಿದೆ. ಉಳಿದ ಹಾಸಿಗೆಗಳ ಪೈಕಿ ಶೇ.10 ಅನ್ನು ರೋಟರಿ ಮತ್ತು ಟೈಟಾನ್​ನಿಂದ ಉಲ್ಲೇಖಿಸಲಾದ ರೋಗಿಗಳಿಗಾಗಿ ಕಾಯ್ದಿರಿಸಲಾಗಿದೆ. ಸೋಂಕಿತರ ಸಂಖ್ಯೆ ಹೆಚ್ಚಾದರೆ ಇನ್ನೂ 100 ಹಾಸಿಗೆಗಳನ್ನು ಅಳವಡಿಸುವ ಸಾಧ್ಯತೆ ಇದೆ.

ಈ ಹಿಂದೆ ಕರೊನಾ ಸೋಂಕಿತರ ಆರೈಕೆಗಾಗಿ ಬಸ್​ಗಳನ್ನು ಐಸೋಲೇಷನ್​ ವಾರ್ಡ್​ಗಳನ್ನಾಗಿ ಪರಿವರ್ತಿಸಲಾಗಿತ್ತು. ಆದರೀಗ ಕೆಎಸ್ಸಾಟಿರ್ಸಿ ತನ್ನಲ್ಲಿರುವ ಮಿಡಿ ಬಸ್​ ಅನ್ನು ಆಂಬುಲೆನ್ಸ್ ಆಗಿ ಪರಿವರ್ತಿಸಿದೆ. ಬಸವೇಶ್ವರ ಬಸ್​ ನಿಲ್ದಾಣದ ಕೋವಿಡ್​ ಆರೈಕೆ ಕೇಂದ್ರದಲ್ಲಿನ ರೋಗಿಗಳ ಅನುಕೂಲಕ್ಕಾಗಿ ಇದನ್ನು ಮೀಸಲಿಟ್ಟಿದ್ದು, ಬಸ್​ ಆಂಬುಲೆನ್ಸ್​ನಲ್ಲಿ 2 ಸ್ಟ್ರೆಚರ್​, ಪ್ರಥಮ ಚಿಕಿತ್ಸಾ ಕಿಟ್​ ಇರಲಿದೆ.

ಪೀಣ್ಯ ಬಸವೇಶ್ವರ ಬಸ್​ ನಿಲ್ದಾಣದ ಕೋವಿಡ್​ ಆರೈಕೆ ಕೇಂದ್ರವನ್ನು ಸಾರಿಗೆ ಸಚಿವ ಲಕ್ಷ್ಮಣ ಸವದಿ ಬುಧವಾರ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net