ಬಂಧಿತ ಪಾಕಿಗೆ ಕೋವಿಡ್ ಪರೀಕ್ಷೆ

covid kavach
Published on

ಜಮ್ಮು :  ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಬಂಧಿಸಲ್ಪಟ್ಟ 28 ವರ್ಷದ, ಪಾಕ್ ಆಡಳಿತ ಕಾಶ್ಮಿರ (PaK) ದ ವ್ಯಕ್ತಿಯನ್ನು ಗುರುವಾರ ಕೋವಿಡ್-19 ಗೆ ಪರೀಕ್ಷೆಗೊಳಪಡಿಸಲಾಗಿದೆ.

ಪಾಕಿಸ್ತಾನ ಆಡಳಿತದ ಕಾಶ್ಮೀರದ ನಕ್ಯಾಲ್ ನಿವಾಸಿ ಅಬ್ದುಲ್ ರೆಹಮಾನ್ ನನ್ನು ಮೆಂಧರ್ ಉಪವಿಭಾಗದ ಬಾಲಕೋಟೆ ಸೆಕ್ಟರ್‌ನ ಬುರ್ತಿ ಗ್ರಾಮದಲ್ಲಿ ಬುಧವಾರ ಬಂಧಿಸಲಾಗಿದೆ.

ಆ ವ್ಯಕ್ತಿಯನ್ನು ಈಗ ಕ್ವಾರಂಟೈನ್​​​ ಕೇಂದ್ರದಲ್ಲಿಡಲಾಗಿದ್ದು, ಆ ಸ್ಥಳಕ್ಕೆ ವಿಶೇಷ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ ಎಂದು ಮೆಂಧರ್ ಎಸ್‌ಡಿಪಿಒ ನೀರಜ್ ಪಡಿಯಾರ್ ತಿಳಿಸಿದ್ದಾರೆಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಕೋವಿಡ್ -19 ಪರೀಕ್ಷೆಗಾಗಿ ಮಾದರಿಯನ್ನು ತೆಗೆದುಕೊಳ್ಳಲಾಗಿದ್ದು, ಫಲಿತಾಂಶವನ್ನು ಇನ್ನೂ ನಿರೀಕ್ಷಿಸಲಾಗುತ್ತಿದೆ ಎಂದು ಕ್ಷೇತ್ರ ವೈದ್ಯಾಧಿಕಾರಿ, ಡಾ. ಪರ್ವಿಯಾಜ್ ಅಹ್ಮದ್ ಖಾನ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net