ಬೆಂಗಳೂರು: ಕರೋನಾ ಕೋವಿಡ್ 19 ವೈರಸ್ ಸೋಂಕು ಪೀಡಿತರ ಸಂಖ್ಯೆ ಒಟ್ಟು 7734 ಆಗಿದ್ದು, ನಿನ್ನೆ ಸಂಜೆ 5ರಿಂದ ಇಂದು ಸಂಜೆ 5 ಗಂಟೆ ತನಕದ ಅವಧಿಯಲ್ಲಿ ಒಟ್ಟು 204 ಹೊಸ ಕೇಸ್ಗಳು ದೃಢಪಟ್ಟಿವೆ. ಬೆಂಗಳೂರು ನಗರದಲ್ಲೇ ಗರಿಷ್ಠ 55 ಪ್ರಕರಣ ಖಚಿತವಾದರೆ, ಯಾದಗಿರಿ 37, ಬಳ್ಳಾರಿ 29, ಕಲಬುರಗಿ 19, ಬೀದರ್ 12 ಕೇಸ್ಗಳೊಂದಿಗೆ ಟಾಪ್ 5ರ ಪಟ್ಟಿಯಲ್ಲಿವೆ.
ಸದರಿ 24 ಗಂಟೆಯ ಅವಧಿಯಲ್ಲಿ 348 ಸೋಂಕು ಪೀಡಿತರು ಸೋಂಕು ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸಕ್ರಿಯವಾಗಿರುವ ಕೋವಿಡ್ ಪ್ರಕರಣಗಳ ಸಂಖ್ಯೆ 2824 ಆಗಿದ್ದು, ಈ ದಿನ ಮೃತಪಟ್ಟವರ ಸಂಖ್ಯೆ 8. ಇದರೊಂದಿಗೆ ಕೋವಿಡ್ 19 ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 102 ತಲುಪಿದೆ. ಈ ಪೈಕಿ ನಾಲ್ಕು ಪ್ರಕರಣಗಳಲ್ಲಿ ಸೋಂಕು ಪೀಡಿತರು ಅನ್ಯಕಾರಣಗಳಿಗೆ ಪ್ರಾಣ ಕಳೆದುಕೊಂಡಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 72.
ಇದನ್ನೂ ಓದಿ: ಪಾಕಿಗಳಿಗಿಂತ ಅನಕ್ಷರಸ್ಥರಿಲ್ಲ- ಪಾಕ್ ಸಚಿವೆಯ ಆಕ್ರೋಶ
ಜಿಲ್ಲೆಗಳಲ್ಲಿನ ಪ್ರಕರಣಗಳನ್ನು ಗಮನಿಸಿದರೆ, ಉಡುಪಿ ಜಿಲ್ಲೆಯಲ್ಲಿ ಗರಿಷ್ಠ 1039 ಪ್ರಕರಣಗಳಿದ್ದರೆ, ಕಲುಬರಗಿಯಲ್ಲಿ 1026, ಯಾದಗಿರಿ 865, ಬೆಂಗಳೂರು ನಗರ 827, ರಾಯಚೂರು 410 ಕೇಸ್ಗಳೊಂದಿಗೆ ಟಾಪ್ 5 ರ ಪಟ್ಟಿಯಲ್ಲಿವೆ. ಪೂರ್ತಿ ವಿವರಗಳಿಗೆ ಕೆಳಗಿರುವ ಗ್ಯಾಲರಿಯಲ್ಲಿ ದಿನದ ವರದಿಯನ್ನು ಗಮನಿಸಬಹುದು.