ಕೋವಿಡ್ ಕಾರಣ: ದಸರಾ ಹಬ್ಬಕ್ಕೆ ಮಾರ್ಗದರ್ಶಿ

Dasara
Published on

ನವದೆಹಲಿ: ಮುಂಬರುವ ದುರ್ಗಾ ಪೂಜೆ ಮತ್ತು ದಸರಾ ಹಿನ್ನೆಲೆಯಲ್ಲಿ ಪಾಲಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತೂ ಕೇಂದ್ರ ಎಸ್​ಒಪಿ ಬಿಡುಗಡೆ ಮಾಡಿದೆ.

* ಹೆಚ್ಚು ವಿಶಾಲವಾದ ಸ್ಥಳಗಳಲ್ಲಿ ಕಾರ್ಯಕ್ರಮ ಆಯೋಜಿಸಬೇಕು. ಮಾಸ್ಕ್, ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ. ಶಂಕಿತರನ್ನು ಪ್ರತ್ಯೇಕವಾಗಿಡಲು ಸ್ಥಳಾವಕಾಶ ಮಾಡಿರಬೇಕು.

* ಮೆರವಣಿಗೆ ಸಮಯದಲ್ಲಿ ಕನಿಷ್ಠ 6 ಅಡಿ ದೈಹಿಕ ಅಂತರ ಕಾಯ್ದುಕೊಳ್ಳಬೇಕು. ಕಡಿಮೆ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳಬೇಕು.

* ಎಲ್ಲರೂ ಆರೋಗ್ಯ ಸೇತು ಆಪ್ ಬಳಸುವುದು ಕಡ್ಡಾಯ. ಸಾರ್ವಜನಿಕ ಸ್ಥಳದಲ್ಲಿ ಉಗುಳುವುದು ನಿಷೇಧ.

* ಪ್ರತಿಮೆಗಳು, ಪವಿತ್ರ ಪುಸ್ತಕಗಳು ಇತ್ಯಾದಿಗಳನ್ನು ರ್ಸ³ಸಲು ಅನುಮತಿ ಇಲ್ಲ. ರೆಕಾರ್ಡ್ ಮಾಡಲಾದ ಭಕ್ತಿ ಗೀತೆಗಳನ್ನು ಪ್ರಸಾರ ಮಾಡಬೇಕು.

* ಪ್ರಸಾದ ವಿತರಿಸುವಾಗ ಹಾಗೂ ತಯಾರಿಸುವಾಗ ಮುಂಜಾಗ್ರತಾ ಕ್ರಮಗಳ ಪಾಲನೆ ಕಡ್ಡಾಯ

* ಕಾರ್ಯಕ್ರಮದ ಸ್ಥಳದಲ್ಲಿ ಬಳಸುವ ವಸ್ತುಗಳು, ವಾಷ್ ರೂಮ್ಳು ಹಾಗೂ ಇನ್ನಿತರ ಸ್ಥಳಗಳನ್ನು ಶುಚಿಯಾಗಿಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net