More

    ಬಿಹಾರ ಚುನಾವಣೆ: ಯುಪಿಎ ಮೈತ್ರಿಕೂಟದ ಸೀಟುಹಂಚಿಕೆ ಫೈನಲ್​, ಯಾರಿಗೆಷ್ಟು, ಸಿಎಂ ಅಭ್ಯರ್ಥಿ ಯಾರು?

    ಪಟನಾ: ಬಿಹಾರದ ವಿಧಾನಸಭೆ ಚುನಾವಣೆಯ ಸೀಟು ಹಂಚಿಕೆಯನ್ನು ಯುಪಿಎ ಪೂರ್ಣಗೊಳಿಸಿದೆ. ಈ ವಿಷಯವನ್ನು ಮೈತ್ರಿಕೂಟದ ನಾಯಕರು ಇಂದು ಪ್ರಕಟಿಸಿದ್ದಾರೆ. ಬಿಹಾರ ಚುನಾವಣೆಯನ್ನು ಒಗ್ಗಟ್ಟಾಗಿ ಎದುರಿಸುವುದಕ್ಕೆ ಯುಪಿಎ ನಾಯಕರು ತೀರ್ಮಾನಿಸಿದ್ದು, ಭಿನ್ನಮತ ಭುಗಿಲೇಳದಂತೆ ನೋಡಿಕೊಳ್ಳಲು ಪ್ರಯತ್ನಿಸಿದ್ದಾರೆ. ತೇಜಸ್ವಿಯಾದವ್ ಇಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.

    ಸೀಟುಹಂಚಿಕೆ ವಿಚಾರ ಪ್ರಕಟಿಸಿದ ಆರ್​ಜೆಡಿ ನಾಯಕ ತೇಜಸ್ವಿ ಯಾದವ್, ಸಿಪಿಐ(ಎಂ) 4, ಸಿಪಿಐ 6, ಸಿಪಿಐ (ಎಂಎಲ್​) 19, ಕಾಂಗ್ರೆಸ್ 70, ಆರ್​ಜೆಡಿ 144 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ವಾಲ್ಮೀಕಿ ನಗರ ಲೋಕಸಭಾ ಉಪಚುನಾವಣೆಯ ಹೊರತಾಗಿ ಈ ಸೀಟು ಹಂಚಿಕೆ ನಡೆದಿರುವುದು ಎಂದು ಸ್ಪಷ್ಟಪಡಿಸಿದ್ದಾರೆ.

    ಇದನ್ನೂ ಓದಿ: ಪರಸ್ಪರರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಕೆ.ಕಲ್ಯಾಣ್​ ದಂಪತಿ; ಶೀಘ್ರದಲ್ಲೇ ವಿಡಿಯೋ ಬಿಡುಗಡೆ ಮಾಡ್ತಾರಂತೆ…!

    ಬಿಹಾರ ವಿಧಾನಸಭಾ ಚುನಾವಣೆಯನ್ನು ಯುಪಿಎ ಮೈತ್ರಿಕೂಟದ ಪಕ್ಷಗಳೆಲ್ಲವೂ ಒಟ್ಟಾಗಿ ಎದುರಿಸಲಿವೆ. ಕಾಂಗ್ರೆಸ್​, ಆರ್​ಜೆಡಿ, ಸಿಪಿಐ, ಸಿಪಿಎಂಗಳ ಜತೆಗೆ ವಿಕಾಸ್​ಶೀಲ್ ಇನ್ಸಾನ್ ಪಾರ್ಟಿ ಕೂಡ ಮೈತ್ರಿಕೂಟ ಸೇರ್ಪಡೆಗೊಂಡಿದೆ. ಬಿಹಾರದಲ್ಲಿ ಯುಪಿಎ ಮೈತ್ರಿಕೂಟಕ್ಕೆ ಆರ್​ಜೆಡಿಯದ್ದೇ ನಾಯಕತ್ವ ಎಂದು ಕಾಂಗ್ರೆಸ್​ ನಾಯಕ ಅವಿನಾಶ್ ಪಾಂಡೆ ಹೇಳಿದ್ದಾರೆ. (ಏಜೆನ್ಸೀಸ್)

    ‘ರಾಹುಲ್ ಗಾಂಧಿ ಡ್ರಾಮಾ ಮಾಡೋಕೆ ನಾಳೆ ಪಂಜಾಬ್​ಗೆ ಬರ್ತಿದ್ದಾರೆ’!!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts