ಪರಸ್ಪರರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಕೆ.ಕಲ್ಯಾಣ್​ ದಂಪತಿ; ಶೀಘ್ರದಲ್ಲೇ ವಿಡಿಯೋ ಬಿಡುಗಡೆ ಮಾಡ್ತಾರಂತೆ...!

K
Published on

ಬೆಳಗಾವಿ: ಖ್ಯಾತ ಸಂಗೀತ ನಿರ್ದೇಶಕ ಕೆ.ಕಲ್ಯಾಣ್​ ಕುಟುಂಬದಲ್ಲಿ ಬಿರುಕು ಮೂಡಿದೆ. 15 ವರ್ಷಗಳ ಹಿಂದೆ ಮದುವೆಯಾಗಿದ್ದ ಕಲ್ಯಾಣ್​ ಮತ್ತು ಐಶ್ವರ್ಯಾ ಇದೀಗ ಪರಸ್ಪರರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

ಕಳೆದ ಆರು ತಿಂಗಳ ಹಿಂದೆಯೇ ಇವರಿಬ್ಬರೂ ಬೇರೆಯಾಗಿದ್ದಾರೆ. ಬೆಳಗಾವಿಯ ತನ್ನ ತವರು ಮನೆಗೆ ತೆರಳಿರುವ ಐಶ್ವರ್ಯಾ ಪತಿಯ ವಿರುದ್ಧ ಜೂನ್​ ತಿಂಗಳಲ್ಲಿಯೇ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಮಾನಸಿಕ, ದೈಹಿಕ ಹಿಂಸೆ ನೀಡುತ್ತಾರೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದರು.

ಅದಕ್ಕೆ ಪ್ರತಿಯಾಗಿ ಈಗ ಕೆ.ಕಲ್ಯಾಣ್​ ಕೂಡ ಮಾಳಮಾರುತಿ ಠಾಣೆಯಲ್ಲಿ ಕಳೆದ ಒಂದು ವಾರದ ಹಿಂದೆ ದೂರು ನೀಡಿದ್ದಾರೆ. ಪತ್ನಿ ಐಶ್ವರ್ಯಾ ನನಗೆ ಗೊತ್ತಿಲ್ಲದೆ ಅವರ ಸಂಬಂಧಿಗೆ 28 ಲಕ್ಷ ರೂ. ನೀಡಿದ್ದಾರೆ ಎಂಬುದನ್ನೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅದಕ್ಕೆ ಸಂಬಂಧಪಟ್ಟಂತೆ ಇಂದು ಪೊಲೀಸರು ಐಶ್ವರ್ಯಾರನ್ನು ವಿಚಾರಣೆಗೆ ಕರೆದಿದ್ದರು. ಅವರೂ ಕೂಡ ಕುಟುಂಬ ಸಮೇತ ವಿಚಾರಣೆಗೆ ಆಗಮಿಸಿದ್ದರು.

ಏನು ಹೇಳ್ತಾರೆ ಕಲ್ಯಾಣ್​?

ಇನ್ನು ತಮ್ಮ ಮತ್ತು ಪತ್ನಿಯ ನಡುವಿನ ಭಿನ್ನಾಭಿಪ್ರಾಯದ ಬಗ್ಗೆ ದಿಗ್ವಿಜಯ ನ್ಯೂಸ್ ಜತೆ ಮಾತನಾಡಿದ ಕೆ.ಕಲ್ಯಾಣ್​, ನಾನೂ ವಾರದ ಹಿಂದೆಯೇ ಬೆಳಗಾವಿಗೆ ಆಗಮಿಸಿದ್ದೇನೆ. ಸದ್ಯ ನನ್ನ ಪತ್ನಿಯ ಸಂಬಂಧಿಗಳೊಂದಿಗೇ ಇದ್ದೇನೆ. ಕೆಲವು ವಿಚಾರಗಳನ್ನು ಸ್ಪಷ್ಟಪಡಿಸಿಕೊಂಡ ನಂತರ ಒಂದು ವಿಡಿಯೋ ಮೂಲಕ ಎಲ್ಲವನ್ನೂ ತಿಳಿಸುತ್ತೇನೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net