More

    ಆರು ತಿಂಗಳ ಬಳಿಕ ಇಸ್ಕಾನ್​ ದೇವಾಲಯ ಭಕ್ತರಿಗೆ ಮುಕ್ತ, ದರ್ಶನ ಸಮಯ ಹೀಗಿದೆ

    ಬೆಂಗಳೂರು: ಆರು ತಿಂಗಳ ಬಳಿಕ ಭಕ್ತರ ಪ್ರವೇಶಕ್ಕೆ ಇಸ್ಕಾನ್​ ದೇವಾಲಯ ತೆರೆದುಕೊಳ್ಳುತ್ತಿದೆ.

    ಕರೊನಾ ಸೋಂಕು ಹರಡುವಿಕೆ ನಿಯಂತ್ರಿಸಲು ನಿಟ್ಟಿನಲ್ಲಿ ಜಾರಿಯಾದ ಲಾಕ್​ಡೌನ್​ನಿಂದಾಗಿ ಬೆಂಗಳೂರಿನ ಇಸ್ಕಾನ್​ ದೇವಸ್ಥಾನ ಬಂದ್​ ಮಾಡಲಾಗಿತ್ತು. ಇದೀಗ ಕೇಂದ್ರ ಸರ್ಕಾರ ಅನ್​ಲಾಕ್​(4.0) ಮಾರ್ಗಸೂಚಿ ಪ್ರಕಾರ ಧಾರ್ಮಿಕ ಕಾರ್ಯಕಲಾಪಗಳ ಮೇಲೆ ವಿಧಿಸಿದ್ದ ನಿರ್ಬಂಧಗಳನ್ನು ತೆರವುಗೊಳಿಸಿರುವ ಹಿನ್ನೆಲೆಯಲ್ಲಿ ದೇವಾಲಯವನ್ನು ತೆರೆಯಲಾಗುತ್ತಿದ್ದು, ಅ.5ರಿಂದ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ವಾರದ ದಿನಗಳಲ್ಲಿ ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30 ಹಾಗೂ ಸಂಜೆ 4ರಿಂದ ರಾತ್ರಿ 8ರವರೆಗೆ, ವಾರಾಂತ್ಯಗಳಲ್ಲಿ ಬೆಳಗ್ಗೆ 9.30ರಿಂದ ರಾತ್ರಿ 8ರವರೆಗೆ ದೇಗುಲಕ್ಕೆ ಭಕ್ತರು ಭೇಟಿ ನೀಡಬಹುದು.

    ದೇವಾಲಯಕ್ಕೆ ಆಗಮಿಸುವ ಪ್ರತಿಯೊಬ್ಬರೂ ಮಾಸ್ಕ್​ ಧರಿಸುವುದು ಕಡ್ಡಾಯ. ದೇವಾಲಯದ ಆವರಣದಲ್ಲಿ ಪ್ರತಿ ಸಂದರ್ಶಕರೂ ಕೈ-ಕಾಲು ತೊಳೆದುಕೊಂಡು, ಸೋಂಕು ನಿವಾರಕ ದ್ರಾವಣ ಸಿಂಪಡಣೆ, ಥರ್ಮಲ್​ ಪರೀಕ್ಷೆಗೆ ಒಳಗಾಗಬೇಕು. ಅವಶ್ಯಕತೆ ಇರುವವರು ಮಾತ್ರವೇ ಲ್ಟಿಫ್ಟ್​ ಬಳಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮುನ್ನೆಚ್ಚರಿಕೆ ಕ್ರಮವಾಗಿ ಹಾಗೂ ಸುರಕ್ಷತೆಯ ದೃಷ್ಟಿಯಿಂದ 10 ವರ್ಷದೊಳಗಿನ ಮಕ್ಕಳು ಹಾಗೂ 65 ವರ್ಷ ಮೇಲ್ಪಟ್ಟ ಹಿರಿಯರು, ಗಭಿರ್ಣಿಯರು ದೇವಸ್ಥಾನಕ್ಕೆ ಭೇಟಿ ನೀಡದಿರಲು ಸೂಚಿಸಲಾಗಿದೆ.

    ದೇವಸ್ಥಾನದ ಕಲ್ಯಾಣ ಮಂಟಪ ಕೂಡ ಮುಂಗಡವಾಗಿ ಕಾಯ್ದಿರಿಸಲು ಅವಕಾಶವಿದೆ. ಮಂದಿರದ ವೆಬ್​ಸೈಟ್​ https://www.iskconbangalore.org/ ಮೂಲಕ ದೇವಾಲಯದಲ್ಲಿ ನಿತ್ಯ ದೇವರ ದರ್ಶನ ಪಡೆಯಲು, ಶ್ರೀಭಗವದ್ಗೀತೆ ಮತ್ತು ಭಾಗವತ ಪ್ರವಚನದಲ್ಲಿ ಪಾಲ್ಗೊಳ್ಳಬಹುದು ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ.

    ತೀರ್ಥೋದ್ಭವಕ್ಕೆ ದಿನಗಣನೆ, ತಲಕಾವೇರಿಗೆ ಹೋಗುವ ಮುನ್ನ ಇದನ್ನು ಮರೆಯದಿರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts