More

    ಬಿಹಾರ ಫಲಿತಾಂಶ ಆಶಾವಾದ, ಆಶೋತ್ತರದ ವಿಜಯ

    ಬಿಹಾರ ಫಲಿತಾಂಶ ಆಶಾವಾದ, ಆಶೋತ್ತರದ ವಿಜಯಬಿಹಾರದ ಜನರು ಮತ್ತೆ ಎನ್​ಡಿಎ ಸರ್ಕಾರದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚುನಾವಣೆಯಲ್ಲಿ ನಡೆದ ಜಿದ್ದಾಜಿದ್ದಿನ ಹೋರಾಟದ ಬಗ್ಗೆ ಎಷ್ಟೇ ಚರ್ಚೆ ನಡೆಸಬಹುದು; ಆದರೆ ಎನ್​ಡಿಎ(ಬಿಜೆಪಿ, ಜೆಡಿಯು, ಎಚ್​ಎಎಂ ಹಾಗೂ ವಿಐಪಿ ಪಕ್ಷಗಳು) ಸ್ಪಷ್ಟ ಬಹುಮತ ಪಡೆದಿದೆ ಎನ್ನುವುದು ವಾಸ್ತವ.

    ಕೆಲವು ಕ್ಷೇತ್ರಗಳಲ್ಲಿ ಅತಿ ಕಡಿಮೆ ಮತಗಳ ಅಂತರದಿಂದ ಎನ್​ಡಿಎ ಪರಾಭವಗೊಂಡಿದೆ. ಅಲ್ಲಿಯೂ ಗೆದ್ದಿದ್ದ್ದೆ 135ಕ್ಕೂ ಹೆಚ್ಚು ಸ್ಥಾನಗಳು ಬರುತ್ತಿದ್ದವು. ಚಿರಾಗ್ ಪಾಸ್ವಾನ್​ರ ಲೋಕ ಜನಶಕ್ತಿ ಪಾರ್ಟಿ (ಎಲ್​ಜೆಪಿ) ಎನ್​ಡಿಎ ಅವಕಾಶ ಹಾಳು ಮಾಡುವ ಕೆಲಸ ಮಾಡಿತು. ಈ ಎಲ್ಲ ವಿಚಾರಗಳ ಹೊರತಾಗಿಯೂ ಮೈತ್ರಿಕೂಟ ಸ್ಪಷ್ಟ ಬಹುಮತ ಗಳಿಸಿದೆ. ಈ ಹಿನ್ನೆಲೆಯಲ್ಲಿ ಬಿಹಾರ ಮತದಾರರ ಪರಿಪಕ್ವತೆಯನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸುವುದು ಅಗತ್ಯ.

    ಇದೊಂದು ಆಶಾವಾದದ ಸ್ಪಷ್ಟ ವಿಜಯ. ಚುನಾವಣಾ ಪ್ರಚಾರದಲ್ಲಿ ನಿರುದ್ಯೋಗ ಸಮಸ್ಯೆ ಮತ್ತು ಇತರ ಅಭಿವೃಧಿ ವಿಚಾರಗಳ ಚರ್ಚೆ ನಡೆದಿತ್ತು. ಆದರೆ ನಿಜವಾಗಿಯೂ ಸಮಸ್ಯೆಗಳನ್ನು ಬಗೆಹರಿಸುವ ಸಾಮರ್ಥ್ಯ ಯಾರಿಗಿದೆ ಎನ್ನುವುದನ್ನು ಮತ ಚಲಾಯಿಸುವ ಮುನ್ನ ಬಿಹಾರ ಜನರು ನಿರ್ಧರಿಸಿದ್ದರು.

    ನಾನು ಬಿಹಾರ ರಾಜ್ಯಕ್ಕೆ ಸೇರಿದವನು. ವಿದ್ಯಾರ್ಥಿ ದೆಸೆಯಿಂದಲೂ ಕಾರ್ಯಕರ್ತನಾಗಿ ಅಲ್ಲಿನ ಸ್ಥಿತಿಯನ್ನು ಚೆನ್ನಾಗಿ ಬಲ್ಲೆ. ಬರಗಾಲ ಮತ್ತು ಪ್ರವಾಹದಂಥ ಪ್ರಕೃತಿ ವಿಕೋಪಗಳ ಸಂದರ್ಭಗಳಲ್ಲಿ ಮಾತ್ರ ಜನರಿಗೆ ಅಲ್ಪಸ್ವಲ್ಪ ಪರಿಹಾರ ದಕ್ಕುತ್ತಿದ್ದವು. ಹೀಗಾಗಿ ಇಲ್ಲಿ ವಿದ್ಯುತ್ ಮತ್ತು ರಸ್ತೆ ವಿಚಾರ ಪ್ರಮುಖವಾಗುತ್ತದೆ. ರಸ್ತೆ ಮೂಲಸೌಕರ್ಯ ಮತ್ತು ವಿದ್ಯುತ್ ಜಾಲವನ್ನು ಹಳ್ಳಿಗಳವರೆಗೂ ವಿಸ್ತರಿಸಿದ ಶ್ರೇಯಸ್ಸು ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರಕ್ಕೆ ಸಲ್ಲುತ್ತದೆ. ನಿತೀಶ್ ಕುಮಾರ್ ಸರ್ಕಾರ ಅದಕ್ಕೆ ಸೂಕ್ತ ಬೆಂಬಲ ನೀಡಿತು. ಇದರಿಂದ ಆದ ಬದಲಾವಣೆಯನ್ನು ಜನರು ಸರಿಯಾಗಿಯೇ ಗುರುತಿಸಿದ್ದಾರೆ.

    ಬಿಹಾರದಲ್ಲಿ ಪ್ರಸ್ತುತ ಎರಡು ಕೇಂದ್ರೀಯ ವಿಶ್ವವಿದ್ಯಾಲಯಗಳು. ಒಂದು ಪಾಟ್ನಾದಲ್ಲಿನ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್್ಸ). ಇನ್ನೊಂದು ಏಮ್್ಸ ದರ್ಭಾಂಗದಲ್ಲಿ ತಲೆಯೆತ್ತಲಿದೆ. ಎಂಟು ವೈದ್ಯಕೀಯ ಕಾಲೇಜ್​ಗಳಿವೆ. ಗಂಗಾ ನದಿ ಮೇಲೆ ಐದು ಸೇತುವೆಗಳನ್ನು ನಿರ್ವಿುಸಲಾಗುತ್ತಿದೆ. ಚಾಣಕ್ಯ ಕಾನೂನು ಕಾಲೇಜ್, ಎನ್​ಐಎಫ್​ಟಿ, ಐಐಟಿ, ಐಐಎಂ, ಬಿಪಿಒ ಕೇಂದ್ರಗಳು, ಟಿಸಿಎಸ್ ಕೇಂದ್ರ ಹೀಗೆ ಮಹತ್ವದ ಬೆಳವಣಿಗೆಗಳಾಗಿದ್ದು ಜನರಲ್ಲಿ ವಿಶ್ವಾಸ ಮೂಡಿಸಿವೆ.

    ಏನಿದ್ದರೂ ಒಳಗೊಳ್ಳುವಿಕೆಯ ಬೆಳವಣಿಗೆ ರಾಜ್ಯದಲ್ಲಿ ಆದ ದೊಡ್ಡ ಪರಿವರ್ತನೆಯಾಗಿದೆ. ಅದರಲ್ಲೂ ಮಹಿಳೆಯರು ವಿಶೇಷವಾದ ಫಲಾನುಭವಿಗಳಾಗಿದ್ದಾರೆ. ಉಜ್ವಲ ಯೋಜನೆಯಡಿ ಅನಿಲ್ ಸಿಲಿಂಡರ್, ಮಹಿಳೆಯರು ಮತ್ತು ಇತರರಿಗೆ ನೇರ ಲಾಭ ವರ್ಗಾವಣೆ ಮುಂತಾದವು ನಿಯಮಿತ ಆರ್ಥಿಕ ನೆರವಿನೊಂದಿಗೆ ಸಬಲೀಕರಣಕ್ಕೆ ಸಹಾಯಕವಾದವು. ರೈತರು ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಾಗಿದ್ದಾರೆ. ವರ್ಷಕ್ಕೆ -ಠಿ; 6000 ನೇರವಾಗಿ ಅವರ ಖಾತೆಗಳಿಗೆ ಜಮೆಯಾಗುತ್ತಿದೆ. ಪಿಎಂ ಕಿಸಾನ್ ಮಾನಧನ್ ಯೋಜನೆಯನ್ವಯ ಪಿಂಚಣಿ ಸಿಗುತ್ತಿದೆ. ಸುಕನ್ಯ ಸಮೃದ್ಧಿ ಯೋಜನೆ, ಪಂಚಾಯತ್​ಗಳಲ್ಲಿ ಹಾಗೂ ಸರ್ಕಾರಿ ನೌಕರಿಯಲ್ಲಿ ಮಹಿಳೆಯರಿಗೆ ಮೀಸಲಾತಿಯ ನಿತೀಶ್ ಸರ್ಕಾರದ ಅಭೂತಪೂರ್ವ ಉಪಕ್ರಮ, ಪಿಎಂ ಆವಾಸ್ ಯೋಜನೆ, ಪಿಎಂ ಗರೀಬ್ ಕಲ್ಯಾಣ್ ಪ್ಯಾಕೇಜ್, ಪ್ರತಿ ಹಳ್ಳಿಯಲ್ಲಿ ಶೌಚಗೃಹ ಮತ್ತು ಶುದ್ಧ ಕುಡಿಯುವ ನೀರಿನ ಸೌಕರ್ಯ ಬಿಹಾರದ ಚಿತ್ರಣವನ್ನೇ ಬದಲಾಯಿಸಿವೆ. ಇವೆಲ್ಲ ಜನಜೀವನದ ಗುಣಮಟ್ಟ ಸುಧಾರಿಸಿ ಹೊಸ ಆಶಾವಾದ ಸೃಷ್ಟಿಸಿದೆ.

    ಹೀಗಾಗಿ, ಈ ಚುನಾವಣೆಯಲ್ಲಿ ಮಹಿಳೆಯರು, ಶೋಷಿತ ವರ್ಗದ ಜನರು ಮೌನ ಮತದಾರರಾಗಿದ್ದು, ಎನ್​ಡಿಎಗೆ ಆದ್ಯತೆ ನೀಡಿದರು. ಕೇಂದ್ರ ಸರ್ಕಾರದ ನೆರವು, ರಾಜ್ಯ ಸರ್ಕಾರದ ಕೆಲಸಗಳೇ ಇದಕ್ಕೆ ಆಧಾರ. ಪ್ರಧಾನಿಯವರ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಮಂತ್ರ ದೊಡ್ಡ ಪರಿಣಾಮ ಬೀರಿದೆ.

    ಬಿಹಾರ ಅಭಿವೃದ್ಧಿಯಾಗದೆ ಭಾರತದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಪ್ರಧಾನಿ ಸದಾ ಪ್ರತಿಪಾದಿಸುತ್ತಿರುತ್ತಾರೆ. ಅದಕ್ಕೆ ತಕ್ಕಂತೆ ಕೆಲಸಗಳೂ ನಡೆದಿವೆ. ಹೀಗಾಗಿ ಯಾರು ಹೆಚ್ಚು ಸಾಧನೆ ಮಾಡುತ್ತಾರೋ ಯಾರು ಬೆಳವಣಿಗೆಯ ಪಥವನ್ನು ಮುಂದುವರಿಸುತ್ತಾರೋ ಅವರಿಗೇ ವಿಜಯ ಕಟ್ಟಿಟ್ಟ ಬುತ್ತಿ ಎನ್ನುವುದು ಸರಳ ಸಂದೇಶವಾಗಿದೆ. ಈ ಪ್ರಕ್ರಿಯೆಯಲ್ಲಿ ಬಿಹಾರದ ಮೌನ ಮತದಾರರು ರಾಜ್ಯದಲ್ಲಿ ನಿತೀಶ್ ನಾಯಕತ್ವದಲ್ಲಿ ಎನ್​ಡಿಎಯನ್ನು ನೆಚ್ಚಿಕೊಂಡರು. ಪ್ರಧಾನಿಯವರನ್ನು ಬೆಳವಣಿಗೆ ಯಂತ್ರದ ಡಬಲ್ ಇಂಜಿನ್ ಸಾಧನವಾಗಿ ಗುರುತಿಸಿದರು.

    ರಾಜ್ಯದ ವಿವಿಧ ಭಾಗಗಳಲ್ಲಿ ವ್ಯಾಪಕ ಪ್ರಚಾರ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ಮುಂದುವರಿದ ಜನಪ್ರಿಯತೆ ನಿಸ್ಸಂಶಯವಾಗಿಯೂ ಮತಗಳು ಎನ್​ಡಿಎ ಪರವಾಗಿ ಬರುವುದಕ್ಕೆ ನೆರವಾಗಿದೆ. ಬಿಹಾರ ಜನರು ನಮ್ಮಲ್ಲಿ ವಿಶ್ವಾಸವಿರಿಸಿದ್ದಾರೆ. ನಾವು ಕೆಲಸ ಮಾಡಿ ತೋರಿಸುತ್ತೇವೆ.

    (ಲೇಖಕರು ಕೇಂದ್ರ ಕಾನೂನು ಸಚಿವರು)

    ಜಮ್ಮು-ಕಾಶ್ಮೀರದ 33 ರಾಜಕಾರಣಿಗಳ ವಿದೇಶ ಪ್ರವಾಸಕ್ಕೆ ನಿಷೇಧ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts