ಬೆಂಗಳೂರಲ್ಲೂ ಪತ್ತೆಯಾಯಿತು ರೂಪಾಂತರಿ ಕೋವಿಡ್​ !

Covid -19
Published on

ಬೆಂಗಳೂರು: ಬೆಂಗಳೂರಿನ ಮೂವರು ಸೇರಿ ದೇಶದಲ್ಲಿ ಒಟ್ಟು 6 ಜನರಲ್ಲಿ ರೂಪಾಂತರಿ ಕೋವಿಡ್ ಸೋಂಕು ದೃಢಪಟ್ಟಿದೆ. ಇವರೆಲ್ಲರೂ ಬ್ರಿಟನ್​ನಿಂದ ಹಿಂದಿರುಗಿದವರು ಎಂದು ಕೇಂದ್ರ ಆರೋಗ್ಯ ಸಚಿವಾಲಯ ದೃಢಪಡಿಸಿದ್ದಾಗಿ ಎಎನ್​ಐ ವರದಿ ಮಾಡಿದೆ.

ಬ್ರಿಟನ್​ನಿಂದ ಹಿಂದಿರುಗಿದವರ ಪೈಕಿ ಮೂವರ ಕೋವಿಡ್ 19 ಟೆಸ್ಟ್ ರಿಪೋರ್ಟ್ ಪಾಸಿಟಿವ್ ಬಂದಿತ್ತು. ಅವರ ಸ್ಯಾಂಪಲ್ಸ್ ಅನ್ನು ಬೆಂಬಳೂರಿನ ನಿಮ್ಹಾನ್ಸ್​ಗೆ ಕಳುಹಿಸಲಾಗಿತ್ತು. ಅಲ್ಲಿ ಬ್ರಿಟನ್​ನಲ್ಲಿ ಪತ್ತೆಯಾಗಿದ್ದ ರೂಪಾಂತರಿ ಕರೊನಾ ವೈರಸ್​ನ ಸೋಂಕು ಇರುವುದನ್ನು ಆಸ್ಪತ್ರೆ ದೃಢೀಕರಿಸಿದೆ. ಇನ್ನಿಬ್ಬರು ಮಾದರಿ ಹೈದರಾಬಾದ್​ನ ಸೆಲ್ಯುಲಾರ್​ ಆ್ಯಂಡ್ ಮಾಲಿಕ್ಯುಲಾರ್ ಬಯಾಲಜಿ ಸೆಂಟರ್​ಗೆ ಕಳಹಿಸಿದ್ದು, ಅಲ್ಲಿ ರೂಪಾಂತರಿ ಕರೊನಾ ವೈರಸ್ ಸೋಂಕು ದೃಢಪಟ್ಟಿದೆ. ಇದೇ ರೀತಿ ಇನ್ನೊಂದು ಕೇಸ್ ಪುಣೆಯ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ದೃಢಪಟ್ಟಿದೆ.

ನವೆಂಬರ್ 25 ಮತ್ತು ಡಿಸೆಂಬರ್ 23ರ ನಡುವೆ ಬ್ರಿಟನ್​ನಿಂದ ಒಟ್ಟು 33,000 ಪ್ರಯಾಣಿಕರು ಭಾರತದ ವಿವಿಧ ವಿಮಾನ ನಿಲ್ದಾಣದ ಮೂಲಕ ಬಂದಿದ್ದಾರೆ. ಅವರೆಲ್ಲರನ್ನೂ ಪತ್ತೆ ಹಚ್ಚಿ, ಆರ್​ಟಿ-ಪಿಸಿಆರ್ ಟೆಸ್ಟ್​ಗೆ ಒಳಪಡಿಸುವ ಕೆಲಸ ಆಯಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳು ಮಾಡಿವೆ. ಅವರಲ್ಲಿ ಇದುವರಗೆ 114 ಜನರಿಗೆ ಕೋವಿಡ್​ 19 ಪಾಸಿಟಿವ್ ಟೆಸ್ಟ್ ದೃಢಪಟ್ಟಿದೆ ಎಂದು ಸಚಿವಾಲಯ ತಿಳಿಸಿದೆ. (ಏಜೆನ್ಸೀಸ್)

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net