ಗುಜರಾತ್ ಸಿಎಂಗೆ ಕೋವಿಡ್-19 ದೃಢ

Vijay Rupani
Published on

ವಡೋದರಾ: ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ.

ಭಾನುವಾರ ಸಂಜೆ ವಡೋದರದಲ್ಲಿ ನಡೆದಿದ್ದ ಚುನಾವಣಾ ರಾಲಿಯಲ್ಲಿ ಭಾಗಿಯಾಗಿ ಮಾತನಾಡುತ್ತಿದ್ದಾಗ ವಿಜಯ್ ರೂಪಾನಿ ಅವರು ಅನಾರೋಗ್ಯದಿಂದ ಕುಸಿದು ಬಿದ್ದಿದ್ದರು. ತಕ್ಷಣವೇ ಅವರನ್ನು ವಡೋದರಾದ ಯುಎನ್ ಮೆಹತಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸೋಮವಾರ ಬೆಳಿಗ್ಗೆ ರೂಪಾನಿ ಅವರನ್ನು ಕೋವಿಡ್ ತಪಾಸಣೆಗೆ ಒಳಪಡಿಸಿದಾಗ ಅವರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸಣ್ಣ ಪ್ರಮಾಣದ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ಆಸ್ಪತ್ರೆಯ ಹೆಲ್ತ್ ಬುಲಿಟಿನ್​ನಲ್ಲಿ ತಿಳಿಸಿದ್ದಾರೆ.

ಇಸಿಜಿ, 2ಡಿ ಇಕೋ ಹಾಗೂ ರಕ್ತ ಪರೀಕ್ಷೆ ಫಲಿತಾಂಶ ಸಾಮಾನ್ಯವಾಗಿದ್ದು, ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ನಿರ್ದೇಶಕ ಆರ್​ ಕೆ ಪಟೇಲ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net