More

    ಡ್ರಗ್ಸ್ ಅತಿ ಸೇವನೆಯಿಂದ ದೇಶದಲ್ಲಿ 2,300 ಸಾವು: 2ನೇ ಸ್ಥಾನದಲ್ಲಿ ಕರ್ನಾಟಕ

    ನವದೆಹಲಿ: ದೇಶದಲ್ಲಿ 2017-19ರ ಅವಧಿಯಲ್ಲಿ ಅಧಿಕ ಮಾದಕದ್ರವ್ಯ ಸೇವನೆಯಿಂದಾಗಿ (ಡ್ರಗ್ ಓವರ್​ಡೋಸ್) 2,300ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯೂರೊ (ಎನ್​ಸಿಆರ್​ಬಿ) ತಿಳಿಸಿದೆ. ಡ್ರಗ್ ಓವರ್​ಡೋಸ್​ನಿಂದ 2017ರಲ್ಲಿ 745, 2018ರಲ್ಲಿ 875 ಮತ್ತು 2019ರಲ್ಲಿ 704 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

    ಅತಿಯಾಗಿ ಡ್ರಗ್ಸ್ ಸೇವನೆಯಿಂದ ಸಾವು ದಾಖಲಾದ ರಾಜ್ಯಗಳಲ್ಲಿ ಕರ್ನಾಟಕ (238) ಎರಡನೇ ಸ್ಥಾನದಲ್ಲಿದೆ. ರಾಜಸ್ಥಾನದಲ್ಲಿ 338 ಜನರು ಮೃತಪಟ್ಟು ಮೊದಲ ಸ್ಥಾನ, 236 ಸಾವು ದಾಖಲಾದ ಉತ್ತರಪ್ರದೇಶ ಮೂರನೇ ಸ್ಥಾನದಲ್ಲಿದೆ.

    30ರಿಂದ 45 ವರ್ಷ ವಯೋಮಿತಿಯ ಜನರಲ್ಲಿ ಅಧಿಕ ಸಾವು (784) ಸಂಭವಿಸಿದ್ದು, 14 ವರ್ಷಕ್ಕಿಂತ ಕೆಳಗಿನ 55 ಮಕ್ಕಳು, 14ರಿಂದ 18 ವಯೋಗುಂಪಿನ 70 ಮಕ್ಕಳ ಅಸುನೀಗಿದ್ದಾರೆ. 18ರಿಂದ 30 ವಯೋಗುಂಪಿನ ಒಟ್ಟು 624 ಜನರು ಈ ಕಾರಣದಿಂದ ಸಾವಿನ ಕದ ತಟ್ಟಿದ್ದಾರೆ. 60 ಹಾಗೂ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರ ಸಾವಿನ ಸಂಖ್ಯೆ 241 ಎಂದು ಎಂದು ಎನ್​ಸಿಆರ್​ಬಿ ಅಂಕಿಅಂಶ ತಿಳಿಸಿದೆ.

    ನಶಾಮುಕ್ತಿ ಅಭಿಯಾನ: ಮಾದಕದ್ರವ್ಯ ಸೇವನೆ ನಿಯಂತ್ರಿಸಲು ಕೇಂದ್ರ ಸರ್ಕಾರ 272 ಜಿಲ್ಲೆಗಳಲ್ಲಿ ‘ನಶಾಮುಕ್ತಿ ಭಾರತ್ ಅಭಿಯಾನ’ ಆರಂಭಿಸಿದೆ. ಮಾದಕವಸ್ತು ನಿಯಂತ್ರಣ ದಳದ (ಎನ್​ಸಿಬಿ) ಪತ್ತೆ ಕಾರ್ಯಾಚರಣೆ, ಸಾಮಾಜಿಕ ನ್ಯಾಯ ಸಚಿವಾಲಯದಿಂದ ಅರಿವು ಮೂಡಿಸುವಿಕೆ ಹಾಗೂ ಆರೋಗ್ಯ ಸಚಿವಾಲಯದಿಂದ ಚಿಕಿತ್ಸೆ ಮೂಲಕ ಸಮಸ್ಯೆಯನ್ನು ಎದುರಿಸಲು ಮೂರಂಶದ ಪ್ರಕ್ರಿಯೆಯನ್ನು ಈ ಅಭಿಯಾನದಲ್ಲಿ ಅಳವಡಿಸಿಕೊಳ್ಳಲಾಗಿದೆ.

    ಶೇ.67 ಹಿಂದೂಗಳು
    ದೇಶದಾದ್ಯಂತ ಸೆರೆಮನೆ ಗಳಲ್ಲಿ ಒಟ್ಟು 4,78,600 ಕೈದಿಗಳಿದ್ದಾರೆ. ಆ ಪೈಕಿ ಶೇಕಡ 67ಕ್ಕೂ ಅಧಿಕ ಕೈದಿಗಳು ಹಿಂದೂಗಳು, ಶೇ.18 ಮಂದಿ ಮುಸ್ಲಿಮರಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಎನ್​ಸಿಆರ್​ಬಿ 2019 ಡಿಸೆಂಬರ್ 31ರವರೆಗೆ ಅಪ್​ಡೇಟ್ ಮಾಡಿದ ವರದಿ ಆಧಾರದಲ್ಲಿ ಗೃಹ ಖಾತೆ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಕಳೆದ ವಾರ ಸಂಸತ್ತಿಗೆ ಈ ಮಾಹಿತಿ ನೀಡಿದ್ದಾರೆ.

    • ಒಟ್ಟು ಕೈದಿಗಳು: 4,78,600
    • ಹಿಂದೂಗಳು: 3,21,155 (ಶೇ. 67.10)
    • ಮುಸ್ಲಿಮರು: 85,307 (ಶೇ. 17.82)
    • ಸಿಖ್ಖರು: 18,001 (ಶೇ. 3.76)
    • ಕ್ರೈಸ್ತರು: 13,782 (ಶೇ. 2.87)
    • ಇತರ ವರ್ಗದವರು: 3,557 (ಶೇ. 0.74)
    • ಅನಕ್ಷರಸ್ಥರು: 1,32,729 (ಶೇ.27.37)
    • 10ನೇ ತರಗತಿವರೆಗೆ ವ್ಯಾಸಂಗ: 1,98,872 (ಶೇ.41.55)
    • 10ನೇ ತರಗತಿಗಿಂತ ಹೆಚ್ಚು, ಪದವಿಗಿಂತ ಕಡಿಮೆ: 1,03,036 (ಶೇ. 21.52)
    • ಪದವೀಧರರು: 30,201 (ಶೇ.6.31)
    • ತಾಂತ್ರಿಕ ಶಿಕ್ಷಣದ ಪದವೀಧರರು: 5,677 (ಶೇ. 1.18)
    • ಸ್ನಾತಕೋತರ ಶಿಕ್ಷಣ: 8.085 (ಶೇ. 1.68)

    ಮಗಳ ಮದ್ವೆ ಸ್ಪೆಷಲ್: ಕ್ಷೇತ್ರದ ಜನ್ರಿಗೆ ದುಬಾರಿ ಗಿಫ್ಟ್​ ಕೊಟ್ಟ ಡಿಕೆಶಿ! ಪ್ರತಿ ಮನೆ-ಮನೆಗೂ ತಲುಪಿಸಿದ್ರು

    ತಹಸೀಲ್ದಾರ್​ ಕಚೇರಿ ಬಳಿ ಹಾವಿನ ಜತೆ ಆಟವಾಡುತ್ತಿದ್ದ ವೃದ್ಧ ಕ್ಷಣಾರ್ಧದಲ್ಲೇ ಪ್ರಾಣಬಿಟ್ಟ!

    ಭಾವಿ ಪತಿಗೆ ತನ್ನ ಮನೆಯಲ್ಲೇ ಮಲಗಲು ಜಾಗ ಕೊಟ್ಟ ಯುವತಿ, ಬೆಳಗ್ಗೆ ಎದ್ದಾಗ ಅಲ್ಲೋಲ-ಕಲ್ಲೋಲ್ಲ​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts