

ನವದೆಹಲಿ: ಕೊವಿಡ್-19ಗೆ ಹೈದರಾಬಾದ್ನ ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೊವಾಕ್ಸಿನ್ ಲಸಿಕೆಯ ಕ್ಲಿನಿಕಲ್ ಪ್ರಯೋಗ ದೇಶದ ವಿವಿಧ ವೈದ್ಯಕೀಯ ಸಂಸ್ಥೆಗಳಲ್ಲಿ ಈಗಾಗಲೇ ಪ್ರಾರಂಭವಾಗಿದೆ.
ಹಾಗೇ ರೋಹ್ಟಕ್ನ ಪಿಜಿಐನಲ್ಲೂ ಕೂಡ ಕೊವಾಕ್ಸಿನ್ ಕ್ಲಿನಿಕ್ ಟೆಸ್ಟ್ ಶುರುಮಾಡಲಾಗಿತ್ತು. ಇದೀಗ ಬಂದ ವರದಿಯ ಪ್ರಕಾರ, ರೋಹ್ಟಕ್ನ ಪೋಸ್ಟ್ ಗ್ರಾಜ್ಯುಯೇಟ್ ಆಫ್ ಮೆಡಿಕಲ್ ಸೈನ್ಸ್ ಇನ್ಸ್ಟಿಟ್ಯೂಟ್ನಲ್ಲಿ ಕೊವಾಕ್ಸಿನ್ ಲಸಿಕೆಯ ಪ್ರಥಮ ಹಂತದ ಮೊದಲ ಭಾಗದ ಕ್ಲಿನಿಕಲ್ ಪ್ರಯೋಗ ಮುಕ್ತಾಯಗೊಂಡಿದೆ ಎನ್ನಲಾಗಿದೆ. ಇದನ್ನೂ ಓದಿ: ‘ಲಾಠಿ ಅಜ್ಜಿ’ಯ ಧೈರ್ಯಕ್ಕೆ ಮನಸೋತ ಸಚಿವರಿಂದ ಒಂದು ಲಕ್ಷ ಬಹುಮಾನ
ಲಸಿಕೆ ಪ್ರಯೋಗ ತಂಡದ ಪ್ರಿನ್ಸಿಪಲ್ ಇನ್ವೆಸ್ಟಿಗೇಟರ್ ಆಗಿರುವ ಡಾ. ಸವಿತಾ ವರ್ಮಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮೊದಲನೇ ಹಂತದ ಎರಡನೇ ಭಾಗದ ಪ್ರಯೋಗ ಈಗಾಗಲೇ ಪ್ರಾರಂಭಗೊಂಡಿದ್ದು, ಆರು ಮಂದಿಗೆ ಲಸಿಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಸಂಸ್ಥೆಯಲ್ಲಿ ಜು.17ರಿಂದ ಮಾನವರ ಮೇಲಿನ ಪ್ರಯೋಗ ಶುರುವಾಗಿದೆ. ಮೊದಲು ಮೂರು ಜನರಿಗೆ ನೀಡಲಾಗಿತ್ತು.
ಇನ್ನು ದೆಹಲಿಯ ಏಮ್ಸ್ನಲ್ಲೂ ಕೂಡ ಪ್ರಯೋಗ ಪ್ರಾರಂಭವಾಗಿದೆ. 30 ವರ್ಷದ ವ್ಯಕ್ತಿಗೆ ಕೊವಾಕ್ಸಿನ್ ಮೊದಲ ಡೋಸ್ ನೀಡಲಾಗಿದೆ. ಎರಡನೇ ಡೋಸ್ನ್ನು ಎರಡು ವಾರ ಬಿಟ್ಟು ನೀಡಲಾಗುವುದು ಎಂದು ಶುಕ್ರವಾರ ಏಮ್ಸ್ ತಿಳಿಸಿದೆ. (ಏಜೆನ್ಸೀಸ್)