More

    ಅಪ್ಪ ಶಾಲೆಗಾಗಿ ಇಟ್ಟಿದ್ದ 1 ಕೋಟಿ ರೂ. ಎಗರಿಸಲು ತಾನೇ ಕಿಡ್ನ್ಯಾಪ್​ ಆದ ಮಗಳು; ಒಂದು ಸಣ್ಣ ತಪ್ಪು ಮಾಡಿ ಸಿಕ್ಕಿಬಿದ್ದಳು

    ಆಗ್ರಾ: ಅಪ್ಪನಿಂದ 1 ಕೋಟಿ ರೂ. ಪಡೆಯಲು ತನ್ನನ್ನು ತಾನೇ ಕಿಡ್ನ್ಯಾಪ್​ ಮಾಡಿಕೊಂಡ 19 ವರ್ಷದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಇಂಥದ್ದೊಂದು ವಿಚಿತ್ರ ಘಟನೆ ನಡೆದಿದ್ದು ಉತ್ತರ ಪ್ರದೇಶದ ಇಟಾ ಜಿಲ್ಲೆಯಲ್ಲಿ. ಇದರಲ್ಲಿ ಯುವತಿಗೆ ಪ್ರಿಯಕರನೂ ಶಾಮೀಲಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ನಾಗಲಾ ಭಜ್ನಾ ಗ್ರಾಮದ ಯುವತಿ ಗುರುವಾರ ರಾತ್ರಿಯಿಂದ ನಾಪತ್ತೆಯಾಗಿದ್ದಳು. ನಂತರ ಬೇರೆ ಧ್ವನಿಯಲ್ಲಿ, ಹರಿಯಾಣವಿ ಭಾಷೆಯಲ್ಲಿ ತನ್ನ ಪಾಲಕರಿಗೆ ಫೋನ್​ ಮಾಡಿದ್ದಾಳೆ. ನಿಮ್ಮ ಮಗಳನ್ನು ಅಪಹರಣ ಮಾಡಿದ್ದೇನೆ…ಅವಳು ಬೇಕೆಂದರೆ 1 ಲಕ್ಷ ರೂ.ಹಣ ಕೊಡಿ ಎಂದು ಹೇಳಿದ್ದಾಳೆ. ಮಗಳು ನಾಟಕವಾಡುತ್ತಿದ್ದಾಳೆ ಎಂದರಿಯದ ಪಾಲಕರು ತೀವ್ರ ಆತಂಕಗೊಂಡು ಪೊಲೀಸರಿಗೆ ತಿಳಿಸಿದ್ದಾರೆ.

    ಹಣಕ್ಕಾಗಿ ಬೇಡಿಕೆಯಿಟ್ಟು ಬರುತ್ತಿರುವ ಕರೆಗಳ ಜಾಡು ಹಿಡಿಯಲು ಪೊಲೀಸರು ಸನ್ನದ್ಧರಾದರು. ನಾಪತ್ತೆಯಾದ ಯುವತಿಯನ್ನು ಹುಡುಕಲು ಕಾರ್ಯಾಚರಣೆ ಕೈಗೊಂಡರು. ಯಾರೋ ವೃತ್ತಿಪರ ಅಪಹರಣಕಾರರೇ ಈ ಕೆಲಸ ಮಾಡಿದ್ದಾರೆ ಎಂದೂ ಶಂಕೆ ವ್ಯಕ್ತಪಡಿಸಿದ್ದರು.

    ಆದರೆ ಆಕೆ ಎಡವಿದ್ದು ಎಲ್ಲಿ ಎಂದರೆ, ತನ್ನದೇ ಮೊಬೈಲ್​ ಸಂಖ್ಯೆಯಿಂದ ಮನೆಗೆ ಫೋನ್​ ಮಾಡುತ್ತಿದ್ದಳು. ಯುವತಿ ನಾಪತ್ತೆಯಾಗಿದ್ದರಿಂದ ಆಕೆಯ ಫೋನ್​ ನಂಬರ್​​ನ್ನು ಕಣ್ಗಾವಲಿನಡಿ ಇಡಲಾಗಿತ್ತು. ಟ್ರ್ಯಾಕ್​ ಮಾಡಲಾಗುತ್ತಿತ್ತು. ಅದೇ ನಂಬರ್​​ನಿಂದ ನಿರಂತರ ಕರೆಗಳು ಹೋಗುತ್ತಿರುವುದು ಮತ್ತು ಸುದೀರ್ಘ ಸಮಯಗಳವರೆಗೆ ಮಾತುಕತೆ ನಡೆಯುವುದು ಪೊಲೀಸರಿಗೆ ಗೊತ್ತಾಗುತ್ತಿತ್ತು. ಅಷ್ಟೇ ಅಲ್ಲ, ಆ ಮೊಬೈಲ್​ ನಂಬರ್​ ಯುವತಿಯ ಮನೆಯಿಂದ 2 ಕಿ.ಮೀ.ದೂರದಲ್ಲಷ್ಟೇ ಇದೆ ಎಂದು ಗೊತ್ತಾಯಿತು. ಜಾಡು ಹಿಡಿದು ಹೊರಟ ಪೊಲೀಸರ ಕೈಯಲ್ಲಿ ಯುವತಿ ಮತ್ತು ಆಕೆಯ ಬಾಯ್​ಫ್ರೆಂಡ್​ ಸಿಕ್ಕಿಬಿದ್ದರು. ಇದನ್ನೂ ಓದಿ: ಸೇನಾ ಆಸ್ಪತ್ರೆಗೆ 20 ಲಕ್ಷ ರೂ. ದೇಣಿಗೆ ನೀಡಿದ ರಾಷ್ಟ್ರಪತಿ ರಾಮನಾಥ ಕೋವಿಂದ…

    ಯುವತಿ ಹಾಗೂ ಆಕೆಯ ಪ್ರಿಯಕರ ನೆರೆಹೊರೆಯವರು. ಸುಮಾರು 2 ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಇದಕ್ಕೆ ಹುಡುಗಿ ಮನೆಯವರ ವಿರೋಧವೂ ಇತ್ತು. ಯುವತಿಯ ಮನೆಯವರು ಸ್ವಲ್ಪ ಶ್ರೀಮಂತರಾಗಿದ್ದು ಶೀಘ್ರದಲ್ಲೇ 1 ಕೋಟಿ ರೂ. ಹೂಡಿಕೆ ಮಾಡಿ, ಶಾಲೆಯೊಂದನ್ನು ತೆರೆಯಲು ಯೋಜನೆ ಹಾಕಿದ್ದರು. ಆ ಹಣವನ್ನು ಹೇಗಾದರೂ ಎಗರಿಸಿ, ಇಬ್ಬರೂ ಓಡಿಹೋಗುವ ಪ್ಲ್ಯಾನ್​ ಈ ಪ್ರೇಮಿಗಳದ್ದಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಪೊಲೀಸರು ಆಕೆಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ಅವಳ ಪ್ರಿಯಕರ ಪರಾರಿಯಾಗಿದ್ದಾನೆ. ಆತನನ್ನೂ ಹುಡುಕುತ್ತೇವೆ ಎಂದು ಸ್ಥಳೀಯ ಎಸ್​ಪಿ ತಿಳಿಸಿದ್ದಾರೆ. (ಏಜೆನ್ಸೀಸ್​)

    ರಾಜಧಾನಿಯಲ್ಲೇಕೆ ನಿಯಂತ್ರಣಕ್ಕೆ ಸಿಗುತ್ತಿಲ್ಲ ಕೋವಿಡ್​? ತಜ್ಞರು ಹೇಳೋದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts