ಆಲ್ಫಾ, ಡೆಲ್ಟಾ ರೂಪಾಂತರಿಗಳ ಮೇಲೆ ಕೋವಾಕ್ಸಿನ್​ ಪರಿಣಾಮಕಾರಿ

covaxin
Published on

ವಾಷಿಂಗ್ಟನ್ : ಭಾರತದ ಕೋವಾಕ್ಸಿನ್​ ಕರೊನಾ ಲಸಿಕೆಯು, ಕರೊನಾ ವೈರಸ್​​ನ ಆಲ್ಫಾ ಮತ್ತು ಡೆಲ್ಟಾ ರೂಪಾಂತರಿಗಳನ್ನು ಪರಿಣಾಮಕಾರಿಯಾಗಿ ನ್ಯೂಟ್ರಲೈಸ್​ ಮಾಡುತ್ತದೆ ಎಂದು ಅಮೆರಿಕದ ನಾಷನಲ್ ಇನ್ಸ್​ಟಿಟ್ಯೂಟ್ ಆಫ್ ಹೆಲ್ತ್​(ಎನ್​ಐಎಚ್) ಹೇಳಿದೆ.

ಇಂಡಿಯನ್ ಕೌನ್ಸಿಲ್ ಆಫ್​ ಮೆಡಿಕಲ್ ರಿಸರ್ಚ್​ನ ಸಹಯೋಗದೊಂದಿಗೆ ಭಾರತ್​ ಬಯೋಟೆಕ್​ ಕಂಪೆನಿ ರೂಪಿಸಿರುವ ಕೋವಾಕ್ಸಿನ್​ ಲಸಿಕೆಯನ್ನು, ಭಾರತದಲ್ಲಿ ಮತ್ತು ಕೆಲವು ಅನ್ಯದೇಶಗಳಲ್ಲಿ, ಈವರೆಗೆ ಸುಮಾರು 25 ಮಿಲಿಯನ್​ ಜನರಿಗೆ ನೀಡಲಾಗಿದೆ.

ಮೊದಲು ಇಂಗ್ಲೆಂಡಿನಲ್ಲಿ ಗುರುತಿಸಲ್ಪಟ್ಟ ಬಿ.1.1.7 (ಆಲ್ಫಾ) ರೂಪಾಂತರಿ ಮತ್ತು ಮೊದಲು ಭಾರತದಲ್ಲಿ ಗುರುತಿಸಲ್ಪಟ್ಟ ಬಿ.1.617 (ಡೆಲ್ಟಾ) ರೂಪಾಂತರಿ ಎರಡನ್ನೂ ಪರಿಣಾಮಕಾರಿಯಾಗಿ ನ್ಯೂಟ್ರಲೈಸ್​ ಮಾಡಬಲ್ಲ ಆ್ಯಂಟಿಬಾಡಿಗಳನ್ನು ಕೋವಾಕ್ಸಿನ್ ಲಸಿಕೆ ಉತ್ಪಾದಿಸುತ್ತದೆ. ಈ ಮಾಹಿತಿಯು ಕೋವಾಕ್ಸಿನ್ ಪಡೆದ ಜನರ ಬ್ಲಡ್​ ಸೀರಮ್​ನ ಮೇಲೆ ನಡೆಸಿದ ಎರಡು ಅಧ್ಯಯನಗಳ ಮೂಲಕ ತಿಳಿದುಬಂದಿದೆ ಎಂದು ಎನ್​ಐಎಚ್ ಸಂಸ್ಥೆ ಹೇಳಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net