More

    ಕರೊನಾ 3ನೇ ಅಲೆ: ಈ ಎರಡು ಸಮಸ್ಯೆ ಇರೋ ಮಕ್ಕಳ ಬಗ್ಗೆ ಇರಲಿ ಎಚ್ಚರ!

    ಬೆಂಗಳೂರು : ಕರೊನಾ ವೈರಸ್​​ನ ಡೆಲ್ಟಾ ರೂಪಾಂತರಿಯೊಂದಿಗೆ ಡೆಲ್ಟಾ ಪ್ಲಸ್​ನ ಆಕ್ರಮಣವೂ ಆರಂಭವಾಗಿರುವ ಈ ಸಮಯದಲ್ಲಿ, ಮೂರನೇ ಅಲೆಯ ಬಗ್ಗೆ ಜಾಗರೂಕತೆ ವಹಿಸುವ ಅವಶ್ಯಕತೆ ಹೆಚ್ಚಿದೆ. ಹೀಗಿರುವಾಗ ಮಕ್ಕಳಿಗೆ ಯಾವ ರೀತಿಯಲ್ಲಿ ಸೋಂಕು ತಗುಲಬಹುದು? ಯಾವ ಯಾವ ಮಕ್ಕಳಲ್ಲಿ ಸೋಂಕಿನ ತೀವ್ರತೆ ಹೆಚ್ಚಿರುತ್ತೆ? ಎಂಬುದು ಪಾಲಕರ ಪ್ರಶ್ನೆಗಳಾಗಿವೆ.

    ಪಾಲಕರ ಆತಂಕಕ್ಕೆ ಉತ್ತರ ನೀಡಿರುವ ಮಕ್ಕಳ ತಜ್ಞ ಡಾ.‌ಶ್ರೀಕಂಠ ಜೆ.ಟಿ. ಅವರು, ಒಬೇಸಿಟಿ‌ ಹಾಗೂ ಟೈಪ್ 1 ಡಯಾಬಿಟಿಸ್ ಇರುವ ಮಕ್ಕಳ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುವುದು ಅಗತ್ಯ ಎಂದಿದ್ದಾರೆ. ಕರೊನಾ ಮೊದಲ ಅಲೆ ಹಾಗೂ ಎರಡನೇ ಅಲೆಯಲ್ಲಿ ಹೆಚ್ಚು ಆಸ್ಪತ್ರೆಗೆ ದಾಖಲಾಗಿರುವವರು ಈ ಮಕ್ಕಳೇ. ಈ ಎರಡು ಸಮಸ್ಯೆಗಳಿರುವ ಮಕ್ಕಳಿಗೆ ಸೋಂಕು ತಗುಲಿದರೆ ತೀವ್ರತೆ ಜಾಸ್ತಿ ಇರತ್ತೆ. ಆದ್ದರಿಂದ ಹೆಚ್ಚಿನ ಕಾಳಜಿ ವಹಿಸಬೇಕಿದೆ ಎಂದಿದ್ದಾರೆ.

    ಇದನ್ನೂ ಓದಿ: “ಶಾಲೆಗಳು ತೆರೆಯಬೇಕೆಂದರೆ ಮಕ್ಕಳಿಗೆ ಕರೊನಾ ಲಸಿಕೆ ಲಭ್ಯವಾಗಬೇಕು”

    ಸ್ಥೂಲಕಾಯ ಅಥವಾ ಒಬೆಸಿಟಿ ಸಮಸ್ಯೆ ಇರುವ ಮಕ್ಕಳಲ್ಲಿ ACE 2 ರಿಸೆಪ್ಟರ್ ಹೆಚ್ಚಿರುತ್ತೆ. ವೈರಸ್ಸನ್ನು ಜೀವಕೋಶದೊಳಕ್ಕೆ ಎಳೆದುಕೊಳ್ಳುವ ಕಾರ್ಯ ಮಾಡುವುದೇ ಈ ACE 2 ರಿಸೆಪ್ಟರ್​ಗಳು. ಹೀಗಾಗಿ ಒಬೇಸಿಟಿ ಇರುವ ಮಕ್ಕಳಿಗೆ ಸೋಂಕಿನ ತೀವ್ರತೆ ಹೆಚ್ಚಳವಾಗತ್ತೆ. ಆದ್ದರಿಂದ ಇವರ ಬಗ್ಗೆ ಎಚ್ಚರ ವಹಿಸಿರಿ ಎಂದು ವಿವರಿಸಿದ್ದಾರೆ. ಮತ್ತೊಂದೆಡೆ ಅಪೌಷ್ಠಿಕತೆಯಿಂದ ಬಳಲುವ ಮಕ್ಕಳಿಗೆ ಸೋಂಕು ತಗುಲುವ ಅಪಾಯ ಹೆಚ್ಚಾಗಿರುತ್ತದೆ ಎಂದಿರುವ ಅವರು, ಮಕ್ಕಳಿಗೆ ಸಮತೋಲನಯುತ ಆಹಾರ ಸಿಗುವಂತೆ ಎಚ್ಚರ ವಹಿಸಬೇಕು ಎಂದಿದ್ದಾರೆ.

    ಇದರ ಜೊತೆ ಟೈಪ್ 1 ಡಯಾಬಿಟಿಸ್ ‌ಇರುವ ಮಕ್ಕಳಲ್ಲೂ ಕರೊನಾ ತೀವ್ರತೆ ಹೆಚ್ಚು ಕಂಡುಬಂದಿದೆ. ಆದ್ದರಿಂದ ಟೈಪ್ 1 ಡಯಾಬಿಟಿಸ್ ಇರುವ ಮಕ್ಕಳ ಬಗ್ಗೆಯೂ ಎಚ್ಚರ ಇರಬೇಕು. ಜೊತೆಗೆ ಕಿಡ್ನಿ ಸಮಸ್ಯೆ, ರಕ್ತಕ್ಕೆ ಸಂಬಂಧಿಸಿದ ಖಾಯಿಲೆ ಮುಂತಾದ ಬೇರೆ ಕೋಮಾರ್ಬಿಡಿಟೀಸ್​ ಇರುವ ಮಕ್ಕಳ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಡಾ. ಶ್ರೀಕಂಠ ಎಚ್ಚರಿಸಿದ್ದಾರೆ.

    ‘ಭಾರತದ ಎಲ್ಲ ವಯಸ್ಕರಿಗೆ ಲಸಿಕೆ ನೀಡಲು ಬೇಕು, 188 ಕೋಟಿ ಡೋಸ್​’

    ಗಡಿಗ್ರಾಮಗಳ ಕನ್ನಡ ಹೆಸರು ಬದಲಾಯಿಸೋ ಪ್ರಕ್ರಿಯೆ ಕೈಬಿಡಿಸಿ: ಲಿಂಬಾವಳಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts