

ಪಟನಾ: ಭಾರತದ ಮೊದಲ ಕೊವಿಡ್-19 ಲಸಿಕೆ 'ಕೊವಾಕ್ಸಿನ್' ನ ಮಾನವರ ಮೇಲಿನ ಪ್ರಯೋಗ ಕಾರ್ಯ ಬಿಹಾರದ ಪಟನಾ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್-ಅಖಿಲ ಭಾರತೀಯ ವೈದ್ಯಕೀಯ ಸಂಸ್ಥೆ) ನಲ್ಲಿ ಪ್ರಾರಂಭವಾಗಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಹಭಾಗಿತ್ವದಲ್ಲಿ ಹೈದರಾಬಾದ್ನ ಭಾರತ್ ಬಯೋಟೆಕ್ ಕಂಪನಿಯು ಈ ಕೊವಾಕ್ಸಿನ್ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ.
ಪುಣೆಯ ಏಮ್ಸ್ ಈ ಲಸಿಕೆಯನ್ನು ಮನುಷ್ಯರ ಮೇಲೆ ಪ್ರಯೋಗ ಮಾಡಲು ಆರಂಭಿಸಿದೆ. ಮೊದಲ ಹಂತದಲ್ಲಿ 10 ಮಂದಿ ಸ್ವಯಂಸೇವಕರನ್ನು ಆಸ್ಪತ್ರೆ ಪ್ರಯೋಗಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಈ 10 ಜನರಿಗೆ ಸದ್ಯ ಮೊದಲ ಪ್ರಮಾಣದ ಲಸಿಕೆಯನ್ನು ನೀಡಲಾಗುತ್ತಿದೆ. ಹಾಗೇ ಇನ್ನೂ 14 ದಿನಗಳ ಬಳಿಕ ಅವರಿಗೆ ಎರಡನೇ ಡೋಸ್ ಲಸಿಕೆ ಕೊಡಲಾಗುತ್ತದೆ. ಇದನ್ನೂ ಓದಿ: ಅನಾಥವಾಗಿರುವ ಕಾರಿನ ಹತ್ತಿರ ಹೋಗೋ ಧೈರ್ಯ ಯಾರಿಗೂ ಇಲ್ಲ, ಕಾರಣ ನಂಬರ್ ಪ್ಲೇಟ್…!
ನಿಗದಿಪಡಿಸಿದ ಅವಧಿ ಪೂರ್ಣಗೊಂಡ ನಂತರ, ಲಸಿಕೆ ಪಡೆದ ಸ್ವಯಂ ಸೇವಕರನ್ನು ತಪಾಸಣೆಗೆ ಒಳಪಡಿಸಲಾಗುವುದು. ಅದು ಹೇಗೆ? ಎಷ್ಟು ಪರಿಣಾಮ ಬೀರಿದೆ ಎಂಬುದನ್ನು ಪರೀಕ್ಷಿಸಲಾಗುವುದು ಎಂದು ಏಮ್ಸ್ ತಿಳಿಸಿದೆ.
ಕೊವಾಕ್ಸಿನ್ ಕ್ಲಿನಿಕಲ್ ಟ್ರಯಲ್ಗಾಗಿ ಐಸಿಎಂಆರ್ ಆಯ್ಕೆ ಮಾಡಿದ 12 ಸ್ಥಳಗಳಲ್ಲಿ ಪುಣೆಯ ಏಮ್ಸ್ ಕೂಡ ಒಂದು. ಲಸಿಕೆಯ ಪ್ರಯೋಗಕ್ಕೆ 22-50ವರ್ಷದವರೆಗಿನ ಆರೋಗ್ಯವಂತರನ್ನೇ ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ಈ ಹಿಂದೆ ಪಟನಾ ಏಮ್ಸ್ನ ಸೂಪರಿಟೆಂಡಂಟ್ ಡಾ. ಸಿ.ಎಂ.ಸಿಂಗ್ ಹೇಳಿದ್ದರು. (ಏಜೆನ್ಸೀಸ್)