

ರಾಣೆಬೆನ್ನೂರ: ನೆಹರು ಯುವ ಕೇಂದ್ರ ಹಾಗೂ ನಗರದ ಆರ್.ಟಿ.ಇ.ಎಸ್. ಮಹಾವಿದ್ಯಾಲಯದ ಎನ್.ಎಸ್.ಎಸ್.ಘಟಕದ ಸಹಯೋಗದಲ್ಲಿ ಸ್ವಚ್ಛತೆ ಯೇ ಸೇವೆ ಕಾರ್ಯಕ್ರಮದ ಅಂಗವಾಗಿ ಇಲ್ಲಿಯ ನ್ಯಾಯಾಲಯದ ಸುತ್ತ-ಮುತ್ತಲಿನ ಆವರಣ ಸ್ವಚ್ಛಗೊಳಿಸಲಾಯಿತು.
ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಭುಕ್ಯಾ ಸಂಜೀವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಎನ್ಎಸ್ಎಸ್ ಸಂಯೋಜಕ ಡಾ. ಸರಸ್ವತಿ ಬಮ್ಮನಾಳ, ಹೇಮಗಿರಿ ಅಂಗಡಿ ಹಾಗೂ ಕಾಲೇಜ್ನ ವಿದ್ಯಾಥಿರ್ಗಳು ಮತ್ತಿತರರು ಪಾಲ್ಗೊಂಡಿದ್ದರು.