ಹೊಸ ಸಂಘ ನೋಂದಣಿಗೆ ಕೋರ್ಟ್ ಅನುಮತಿ ಕಡ್ಡಾಯ: ಹೈಕೋರ್ಟ್ ಸ್ಪಷ್ಟನೆ

highcourt
Published on

 ಬೆಂಗಳೂರು:  ನ್ಯಾಯಾಲಯ ಅನುಮತಿ ನೀಡದ ಹೊರತಾಗಿ ಹೊಸ ಸಂಘ ನೋಂದಣಿ ಅಥವಾ ಮಾನ್ಯತೆಗೆ ಕೋರಿ ಸಲ್ಲಿಕೆಯಾಗಿರುವ ಮತ್ತು ಆಗುವ ಅರ್ಜಿಗಳನ್ನು ಕರ್ನಾಟಕ ರಾಜ್ಯ ವಕೀಲರ ಪರಿಷತ್ (ಕೆಎಸ್‌ಬಿಸಿ) ಪರಿಗಣಿಸಕೂಡದು ಎಂದು ಹೈಕೋರ್ಟ್ ನುಡಿದಿದೆ.

ಹೈಕೋರ್ಟ್ ಬಾರ್ ಅಸೋಸಿಯೇಷನ್ ಎಂಬ ಹೆಸರಿನಡಿ ಎಎಬಿಯ ಮಾಜಿ ಪದಾಧಿಕಾರಿಗಳು ಹೊಸ ಸಂಘ ನೋಂದಣಿ ಕೋರಿ ಕೆಎಸ್‌ಬಿಸಿಗೆ ಅರ್ಜಿ ಸಲ್ಲಿಸಿದ್ದರು.

ಈ ಬಗ್ಗೆ ಆಕ್ಷೇಪಿಸಿ ಹೊಸದಾಗಿ ಯಾವುದೇ ಸಂಘ ನೋಂದಣಿಗೆ ಅನುಮತಿಸದಂತೆ ಕೆಎಸ್‌ಬಿಸಿಗೆ ನಿರ್ದೇಶಿಸಬೇಕು ಎಂದು ಕೋರಿ ಬೆಂಗಳೂರು ವಕೀಲರ ಸಂಘದಿಂದ ಸಲ್ಲಿಕೆಯಾದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ ಶ್ಯಾಮ್‌ಪ್ರಸಾದ್ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಅಲ್ಲದೆ, ವಕೀಲರ ಕಲ್ಯಾಣ ನಿಧಿ ಕಾಯ್ದೆಯ ಸೆಕ್ಷನ್ 13ರ ಅಡಿ ಹೊಸ ಸಂಘದ ನೋಂದಣಿಗೆ ಸಂಬಂಧಿಸಿ ಕೆಎಸ್‌ಬಿಸಿಗೆ ಯಾವುದೇ ಅರ್ಜಿ ಸಲ್ಲಿಕೆಯಾದರೂ ನ್ಯಾಯಾಲಯದ ಅನುಮತಿ ಇಲ್ಲದೇ ನೋಂದಣಿ ಅಥವಾ ಮಾನ್ಯತೆ ನೀಡಬಾರದು. ಕೆಎಸ್‌ಬಿಸಿ ಹಾಲಿ ಅಧ್ಯಕ್ಷರು ನಾಮನಿರ್ದೇಶಿತರಾಗಿದ್ದು, ನೀತಿಯ ವಿಚಾರದಲ್ಲಿ ಯಾವುದೇ ಕ್ರಮಕೈಗೊಳ್ಳಬಾರದು ಎಂದು ಹೈಕೋರ್ಟ್ ನಿರ್ದೇಶಿಸಿದೆ.

ಅಲ್ಲದೇ, ಪ್ರತಿವಾದಿಗಳಿಗೆ ತುರ್ತು ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಯನ್ನು ಆ .30ಕ್ಕೆ ಮುಂದೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net