ಅಜಾಗರೂಕ ಲಾರಿ ಚಾಲಕನಿಗೆ ಜೈಲು ಶಿಕ್ಷೆ

Published on

ರಾಣೆಬೆನ್ನೂರ: ಅಜಾಗರೂಕತೆಯಿಂದ ಲಾರಿ ಚಲಾಯಿಸಿಕೊಂಡು ಬಂದು ಬೈಕ್ ಸವಾರನಿಗೆ ಡಿಕ್ಕಿಪಡಿಸಿ ಆತ ಮೃತಪಡಲು ಕಾರಣೀಭೂತನಾಗಿದ್ದ ಲಾರಿ ಚಾಲಕನೊಬ್ಬನಿಗೆ 13 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ 3,000 ರೂ. ದಂಡ ವಿಧಿಸಿ ಇಲ್ಲಿನ ಪ್ರಧಾನ ದಿವಾಣಿ ನ್ಯಾಯಾಲಯ ಮತ್ತು 1ನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯ ಶುಕ್ರವಾರ ಆದೇಶ ನೀಡಿದೆ.
ಲಿಂಗದಹಳ್ಳಿ ಗ್ರಾಮದ ಹನುಮಂತಪ್ಪ ಮಂಜಪ್ಪ ಬಾರ್ಕಿ ಶಿಕ್ಷೆಗೀಡಾದ ಲಾರಿ ಚಾಲಕ. ಹನುಮಂತಪ್ಪ ಜನವರಿ 1, 2018ರಂದು ರಾಣೆಬೆನ್ನೂರಿನ ಮಾಗೋಡ ಕ್ರಾಸ್ ಬಳಿ ಅಶೋಕ ಲೈಲ್ಯಾಂಡ್ ಲಾರಿ ಚಲಾಯಿಸಿಕೊಂಡು ಹೊರಟಿದ್ದ. ವೇಗ ಮತ್ತು ನಿರ್ಲಕ್ಷೃದಿಂದ ಚಲಾಯಿಸಿಕೊಂಡು ಹೋಗಿ ಬೈಕ್‌ಗೆ ಡಿಕ್ಕಿಪಡಿಸಿದ್ದ. ತೀವ್ರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಪ್ರಭುಸ್ವಾಮಿ ಮಠದ ಚಿಕಿತ್ಸೆಗೆ ಸ್ಪಧಮಸಿದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಕುರಿತು ರಾಣೆಬೆನ್ನೂರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಶಹರ ವೃತ್ತ ಸಿಪಿಐ ಮಂಜುನಾಥ ನಲವಾಗಿಲು ತನಿಖೆ ನಡೆಸಿ ಕೋರ್ಟ್‌ಗೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಪ್ರಧಾನ ದಿವಾಣಿ ನ್ಯಾಯಾಲಯ ಮತ್ತು 1ನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಅನಿತಾ ಓ.ಎ. ಅವರು ಅಪರಾಧಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಸಂತೋಷಕುಮಾರ ಎಸ್.ಎಂ. ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net