

Sonu Sood:ಬಾಲಿವುಡ್ ನಟ ಸೋನುಸುದ್ ವಿರುದ್ಧ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಲೂಧಿಯಾನ ಕೋರ್ಟ್ ಬಂಧನದ ವಾರಂಟ್ ಹೊರಡಿಸಿದೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.
ಮೋಹಿತ್ ಶುಕ್ಲಾ ಎಂಬ ವ್ಯಕ್ತಿಗೆ ನಕಲಿ ಕ್ರಿಪ್ಟೋ (ರಿಜಿಕಾ) ಕರೆನ್ಸಿ ಹೂಡಿಕೆ ಮಾಡುವಂತೆ ನಟ ಸೋನುಸೂದ್ ಆಮಿಷವೊಡ್ಡಿದ್ದಾರೆ ಎಂದು ಆರೋಪಿಸಿ ಲುಧಿಯಾನ ಮೂಲದ ವಕೀಲ ರಾಜೇಶ್ ಖನ್ನಾ ಅವರು ಪ್ರಕರಣ ದಾಖಲಿಸಿದ್ದಾರೆ. ಸೋನು ಸೂದ್ ಅವರನ್ನು (ಸಾಕ್ಷ್ಯನುಡಿಯಲು) ನ್ಯಾಯಾಲಯಕ್ಕೆ ಕರೆಯಲಾಯಿತು. ಆದರೆ, ಅವರು ನ್ಯಾಯಾಲಯಕ್ಕೆ ಹಾಜರಾಗದಿದ್ದ ಹಿನ್ನೆಲೆ, ಬಂಧನದ ವಾರಂಟ್ ಹೊರಡಿಸಲಾಗಿದೆ.
ಇಲ್ಲಿಯವರೆಗೆ ನಟನಾಗಲಿ ಅಥವಾ ಅವರ ತಂಡವಾಗಲಿ ಪ್ರಕರಣ ಅಥವಾ ಬಂಧನ ವಾರಂಟ್ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.(ಏಜೆನ್ಸೀಸ್)