

ನವದೆಹಲಿ: 2008 ರ ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ ತಹವ್ವೂರ್ ಹುಸೇನ್ ರಾಣಾ ತನ್ನ ಕುಟುಂಬ ಸದಸ್ಯರೊಂದಿಗೆ ಮಾತನಾಡಲು ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಇಂದು (ಆ.07) ಅನುಮತಿ ನೀಡಿದೆ. ವಿಶೇಷ ನ್ಯಾಯಾಧೀಶ ಚಂದರ್ ಜೀತ್ ಸಿಂಗ್ ಅವರು ರಾಣಾ ಅವರ ಕುಟುಂಬದೊಂದಿಗೆ ಮಾತನಾಡಲು ಅವಕಾಶ ನೀಡಿ ಆದೇಶ ಹೊರಡಿಸಿದ್ದಾರೆ.
ರಾಣಾ ಅವರನ್ನು ಬಂಧಿಸಲಾಗಿರುವ ನವದೆಹಲಿಯ ತಿಹಾರ್ ಜೈಲಿನ ಅಧಿಕಾರಿಗಳು, ಭದ್ರತಾ ಕಾಳಜಿಯ ಕಾರಣದಿಂದಾಗಿ ಅವರ ಮನವಿಯನ್ನು ಈ ಹಿಂದೆ ವಿರೋಧಿಸಿದ್ದರು. ತನ್ನ ಕಾನೂನು ನೆರವು ವಕೀಲರನ್ನು ಬದಲಾಯಿಸಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವ ಮೊದಲು ತನ್ನ ಕುಟುಂಬದೊಂದಿಗೆ ಸಮಾಲೋಚಿಸಬೇಕು ಎಂದು ರಾಣಾ ನ್ಯಾಯಾಲಯಕ್ಕೆ ತಿಳಿಸಿದ್ದರು. ಈ ಹಿನ್ನೆಲೆ ಒಂದು ಬಾರಿ ಫೋನ್ ಕರೆ ಮಾಡುವಂತೆ ವಿನಂತಿಸಿದ್ದರು. ರಾಣಾ ತನ್ನ ಕುಟುಂಬದೊಂದಿಗೆ ಮಾತನಾಡಲು ಅನುಮತಿ ಕೋರಿದ್ದು ಇದೇ ಮೊದಲೇನಲ್ಲ. ಈ ಹಿಂದೆಯೂ ಇದೇ ರೀತಿಯ ಮನವಿಯನ್ನು ಅಂಗೀಕರಿಸಲಾಗಿದ್ದು, ಅವರಿಗೆ ಒಂದು ಬಾರಿ ಫೋನ್ ಕರೆ ಮಾಡಲು ಅವಕಾಶ ನೀಡಲಾಗಿತ್ತು.
(ಏಜೆನ್ಸೀಸ್)
ಇದೀಗ 2008 ರ ನವೆಂಬರ್ 26 ರ ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ ಮತ್ತು ಸಂಚುಕೋರ ತಹವ್ವೂರ್ ರಾಣಾಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯವು ತನ್ನ ಕುಟುಂಬದೊಂದಿಗೆ ನಿಯಮಿತವಾಗಿ ಮಾತನಾಡಲು ಅವಕಾಶ ನೀಡಿದೆ. ರಾಣಾ ತನ್ನ ಕುಟುಂಬದೊಂದಿಗೆ ನಿಯಮಿತವಾಗಿ ಮಾತನಾಡಲು ಅವಕಾಶ ಕೋರಿ ಸಲ್ಲಿಸಲಾದ ಅರ್ಜಿಗೆ ಪ್ರತಿಕ್ರಿಯಿಸಲು ನ್ಯಾಯಾಲಯವು ಈ ಹಿಂದೆ NIA ಗೆ ಸಮಯ ನೀಡಿತ್ತು. ನ್ಯಾಯಾಧೀಶ ಚಂದರ್ ಜೀತ್ ಸಿಂಗ್ ಅವರು ಜುಲೈ 25 ರೊಳಗೆ ಉತ್ತರ ಸಲ್ಲಿಸುವಂತೆ NIA ಗೆ ಸೂಚಿಸಿದರು. ಈ ಪ್ರಕರಣದಲ್ಲಿ ನ್ಯಾಯಾಲಯವು ಆಗಸ್ಟ್ 7 ರಂದು ತನ್ನ ತೀರ್ಪು ಪ್ರಕಟಿಸಬೇಕಿತ್ತು. ಅದರಂತೆ ಇಂದು ರಾಣಾಗೆ ಫೋನ್ನಲ್ಲಿ ಮಾತನಾಡಲು ಅನುಮತಿ ನೀಡಲಾಗಿದೆ.