

ಕನಕಪುರ : ದೇಶ ಸ್ವತಂತ್ರವಾಗಿ 75 ವರ್ಷ ಕಳೆದರೂ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಆಶಯಗಳು ಈಡೇರದ ಕಾರಣ ಡಾ. ಅಂಬೇಡ್ಕರ್ ಅವರ ಸಂವಿಧಾನದ ತತ್ವ ಸಿದ್ಧಾಂತಗಳನ್ನು ಸವಾಜಕ್ಕೆ ತಿಳಿಸಿಕೊಡಬೇಕಾದ ಅವಶ್ಯಕತೆಯಿದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಅಶೋಕ- ವಿಜಯದಶಮಿ ಆಚರಣಾ ಸಮಿತಿ ಭಾನುವಾರ ಹಮ್ಮಿಕೊಂಡಿದ್ದ ನಮ್ಮ ನಡಿಗೆ ಬುದ್ಧನೆಡೆಗೆ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದಲ್ಲಿ ಕುಲ ಕಸುಬಿನ ಆಧಾರದ ಮೇಲೆ 6 ಸಾವಿರ ಜಾತಿಗಳಿದ್ದು, 3.33 ಲಕ್ಷ ಉಪಜಾತಿಗಳಾಗಿವೆ. ಜಾತಿಯನ್ನೇ ಅಸ್ತ್ರವನ್ನಾಗಿಸಿಕೊಂಡು ಒಡೆದು ಆಳುವ ಗುಲಾಮಗಿರಿಯಲ್ಲಿ ನಾವಿದ್ದೇವೆ.
ರಾಜಮಹಾರಾಜರ ಆಳ್ವಿಕೆಯ ನಂತರ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಲ್ಲಿದ್ದರೂ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗಗಳು ಸ್ವೇಚ್ಛಾಚಾರವನ್ನು ಪ್ರದರ್ಶಿಸುತ್ತಿವೆ. ಹಾಗಾಗಿ ದೇಶದ ನ್ಯಾಯಾಂಗ ಆಡಳಿತ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಯಾಗಬೇಕು. ಇದರಿಂದ ದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.
ಪ್ರಜಾ ಪರಿವರ್ತನಾ ವೇದಿಕೆ ಅಧ್ಯಕ್ಷ ಬಿ.ಗೋಪಾಲ್ ವಾತನಾಡಿದರು. ನಗರದ ಅಯ್ಯಪ್ಪಸ್ವಾಮಿ ದೇವಾಲಯದಿಂದ ಎಂ.ಜಿ. ರಸ್ತೆ ಮೂಲಕ ಅಂಬೇಡ್ಕರ್ ಭವನದವರೆಗೆ ಗೌತಮಬುದ್ಧ ಹಾಗೂ ಅಂಬೇಡ್ಕರ್ ಭಾವಚಿತ್ರಗಳ ಮೆರವಣಿಗೆ ನಡೆಯಿತು.
ಅಶೋಕ-ವಿಜಯದಶಮಿ ಆಚರಣಾ ಸಮಿತಿಯ ಜೆ.ಎಂ.ಶಿವಲಿಂಗಯ್ಯ, ಎಂ.ಸಿ.ನಾಗರಾಜು, ಬಿ.ಶಿವಣ್ಣ, ಟಿ.ಸಿ. ವೆಂಕಟೇಶ್, ತಾಪಂ ವಾಜಿ ಸದಸ್ಯೆ, ಶಿಲ್ಪಾ ಶಿವಾನಂದ್, ಕೆ.ಕಾಳಯ್ಯ, ಏಳಗಳ್ಳಿ ಶಿವು, ಬೊಮ್ಮನಹಳ್ಳಿ ಸುರೇಶ್, ಹಾರೋಹಳ್ಳಿ ಎಚ್.ವಿ.ನಂದಕುವಾರ್, ವಕೀಲ ಸಿದ್ದರಾಜು, ನಗರ ನವೀನ್, ಮೆಳೆಕೋಟೆ ಶಿವಣ್ಣ, ಗ್ರಾಪಂ ಸದಸ್ಯ ಅಶ್ವಥ್, ಹುಣಸನಹಳ್ಳಿ ರಮೇಶ್, ಚಿಕ್ಕಸ್ವಾಮಿ ಹಲವರು ಭಾಗವಹಿಸಿದ್ದರು.
ಹಸಿವಿಗಾಗಿ ಅಕ್ಷರವಲ್ಲ... ಅರಿವಿಗಾಗಿ ಅಕ್ಷರ... : ಮೈಸೂರಿನ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ವಾತನಾಡಿ, ಹಿಂದುಳಿದ ಸಮುದಾಯದವರು ಹಸಿವಿಗಾಗಿ ಅಕ್ಷರ ಕಲಿಯುತ್ತಿದ್ದಾರೆ. ಅರಿವಿಗಾಗಿ ಅಕ್ಷರ ಕಲಿಯದ ಕಾರಣ ಹಿಂದುಳಿಯುವಂತಾಗಿದೆ. ಬಾಬಾ ಸಾಹೇಬರು ಭಾರತಕ್ಕೆ ಸಂವಿಧಾನದ ಮೂಲಕ ಸ್ವಾತಂತ್ರ ತಂದುಕೊಟ್ಟಿದ್ದರೂ ಅಸ್ಪೃಶ್ಯತೆ, ಶೋಷಣೆಗಳು ಇನ್ನೂ ನಿರ್ಮೂಲನೆಯಾಗದಿರಲು ವೈಯಕ್ತಿಕ ಆಸೆ, ಆಕಾಂಕ್ಷೆಗಳೇ ಕಾರಣ. ಬೇಡುವುದನ್ನು ಬಿಟ್ಟು ಜಾಗೃತರಾಗಿ ಸ್ವಂತಿಕೆಯಿಂದ ಬದುಕುವ ಅವಕಾಶ ಕಲ್ಪಿಸಿಕೊಳ್ಳಬೇಕು ಎಂದು ಹೇಳಿದರು.
ಬುದ್ಧ, ಬಸವಣ್ಣನವರ ಆಶಯದಂತೆಯೇ ಪ್ರಜಾಪ್ರಭುತ್ವದ ಬುನಾದಿ ಹಾಗೂ ಜಾತ್ಯತೀತ ಕಲ್ಪನೆಯ ಸವಾಜ ನಿರ್ವಾಣವಾಗಬೇಕೆಂಬ ನಿಟ್ಟಿನಲ್ಲಿ ಅಂಬೇಡ್ಕರ್ ಅವರು ಬುದ್ಧನ ವಾರ್ಗದಲ್ಲಿ ನಡೆದು ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಇಂದಿನ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಬ್ರಿಟಿಷ್ ವಾದರಿ ರಾಜಕಾರಣ ಎಂದು ಅಭಿಪ್ರಾಯಪಟ್ಟ ಅವರು, ದೇಶದ ಪ್ರಜಾಪ್ರಭುತ್ವಕ್ಕೆ ಅಂಬೇಡ್ಕರ್ ಭದ್ರಬುನಾದಿ ಹಾಕಿಕೊಟ್ಟಿದ್ದಾರೆ ಎಂದರು.