ಮದುವೆಯಾಗಿ 3 ವರ್ಷಗಳ ನಂತರ ದಂಪತಿಗಳಿಗೆ ತಿಳಿಯಿತು ಆ ಸತ್ಯ, ಮುಂದೇನಾಯ್ತು?

couple
Published on

ಅಮೆರಿಕ: ಮದುವೆಯಾದ ಮೇಲೆ ನಾವಿಬ್ಬರೂ ಸೋದರ ಸಂಬಂಧಿಗಳಾಗಬೇಕು ಎನ್ನುವ ವಿಷಯ ದಂಪತಿಗಳಿಗೆ ತಿಳಿದುಬರುವ ಅನಿರೀಕ್ಷಿತ, ಅಪರೂಪದ ಘಟನೆಗಳು... ಆಗಾಗ ಅಲ್ಲಲ್ಲಿ ಕಂಡುಬರುತ್ತವೆ. ಇದೀಗ ಮೂರು ವರ್ಷಗಳ ನಂತರ ಯುವ ದಂಪತಿಗಳಿಗೂ ಇಂತಹುದೇ ಪ್ರಸಂಗ ಎದುರಾಗಿದೆ. ಪರೀಕ್ಷೆಯ ನಂತರ ನಾವಿಬ್ಬರೂ ಸೋದರಸಂಬಂಧಿಗಳು ಎನ್ನುವ ವಿಚಾರ ಅವರಿಗೆ ತಿಳಿದಿದೆ.

ಯುಎಸ್ಎಯ ಉತಾಹ್‌ನ ದಂಪತಿಗಳಾದ ಟೈಲೀ ಮತ್ತು ನಿಕ್ ವಾಟರ್ಸ್ ಸ್ವತಃ ಈ ಸುದ್ದಿ ತಿಳಿದು ಬೆರಗಾಗಿದ್ದಾರೆ. ಇಬ್ಬರೂ ಈ ಒಂದು ವಿಷಯವನ್ನು ಟಿಕ್‌ಟಾಕ್​​​ನಲ್ಲಿ ಬಹಿರಂಗಪಡಿಸಿ, ತಮ್ಮ ಸಂಬಂಧದ ಬಗ್ಗೆ ತಿಳಿಸಿದ್ದಾರೆ. ಇಬ್ಬರೂ ಒಟ್ಟಿಗೆ ಕುಳಿತು ವಿಡಿಯೋ ಬಿಡುಗಡೆ ಮಾಡಿದ್ದು, "ಮದುವೆಯಾಗಿ 3 ವರ್ಷಗಳ ನಂತರ ನಾವು ಸೋದರಸಂಬಂಧಿಗಳೆಂದು ಗೊತ್ತಾಯ್ತು" ಎಂದು ತಿಳಿಸಿದ್ದಾರೆ. ಈ ವಿಚಾರ ಬಹಿರಂಗಪಡಿಸುವಾಗ ಪರಸ್ಪರ ಲಿಪ್-ಲಾಕ್ ಮಾಡುವುದನ್ನು ಕಾಣಬಹುದು.

ಆದರೂ ಈ ಅನಿರೀಕ್ಷಿತ ಘಟನೆಯ ಹೊರತಾಗಿಯೂ ಇಬ್ಬರೂ ತಮ್ಮ ಮದುವೆಯ ಬಗ್ಗೆ ಯಾವುದೇ ತಕರಾರು ಹೊಂದಿಲ್ಲ. ಬೇರ್ಪಡುವ ಬದಲು ಇಬ್ಬರೂ ತಮ್ಮ ಸಂಬಂಧಕ್ಕೆ ಬದ್ಧರಾಗಲು ನಿರ್ಧರಿಸಿದ್ದಾರೆ. ಮತ್ತೊಂದು ವಿಡಿಯೋದಲ್ಲಿ, ಅವರು ಜನ್ಮದಿನದ ಕುರಿತಾಗಿಯೂ ಬಹಿರಂಗಪಡಿಸಿದರು. ಆದರೆ ಈ ವಿಚಾರ ಹೇಗೆ ತಿಳಿಯಿತು ಎಂಬ ಬಗ್ಗೆ ದಂಪತಿಗಳು ಗುಟ್ಟು ಬಿಟ್ಟುಕೊಟ್ಟಿಲ್ಲ.

ಇವರ ಕಥೆ ಕೇಳಿದ ಮೇಲೆ ಇತರ ಸಾಮಾಜಿಕ ಮಾಧ್ಯಮ ಬಳಕೆದಾರರು ಮದುವೆಯಾದ ನಂತರ ಇದೇ ರೀತಿಯ ಪರಿಸ್ಥಿತಿ ಎದುರಾದ ಬಗ್ಗೆ ಅನೇಕರು ತಮ್ಮ ಕಥೆಗಳನ್ನು ಹಂಚಿಕೊಂಡರು.

ಇದಕ್ಕೂ ಮೊದಲು, ಈ ವರ್ಷ ಯುಎಸ್ಎಯ ಕೊಲೊರಾಡೋದ ದಂಪತಿಗಳಿಗೆ 17 ವರ್ಷಗಳ ನಂತರ ತಾವಿಬ್ಬರೂ ಸೋದರಸಂಬಂಧಿ ಎಂಬ ವಿಚಾರ ತಿಳಿಯಿತು. ಅಷ್ಟರೊಳಗೆ ಅವರು ಮೂರು ಮಕ್ಕಳಿಗೆ ಪೋಷಕರಾಗಿದ್ದರು. ಸೆಲಿನಾ ಮತ್ತು ಜೋಸೆಫ್ ಕ್ವಿನೋನ್ಸ್ ಡಿಎನ್ಎ ಪರೀಕ್ಷೆಯ ಮೂಲಕ ಈ ವಿಚಾರ ರಿವೀಲ್ ಆಯಿತು ಎಂದು ತಿಳಿಸಿದರು. ತದನಂತರ ಇಬ್ಬರೂ ಬೇರಾಗಲೂ ನಿರ್ಧರಿಸಿದರೂ ತಮ್ಮ ಮೂರು ಮಕ್ಕಳ ಯೋಗಕ್ಷೇಮಕ್ಕಾಗಿ ಒಟ್ಟಿಗೆ ಇರಲು ನಿರ್ಧರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net