

ಲಂಡನ್: ಪೋರ್ಕ್ ಕರಿ ತಿನ್ನಬೇಕು ಎಂಬ ಆಸೆಯಿಂದ ಆ ಜೋಡಿ ಚೀನೀಸ್ ರೆಸ್ಟೋರೆಂಟ್ಗೆ ಕರೆ ಮಾಡಿ ಆರ್ಡರ್ ಮಾಡಿತ್ತು. ಕೆಲವೇ ನಿಮಿಷಗಳಲ್ಲಿ ಮನೆ ಬಾಗಿಲಿಗೆ ಪೋರ್ಕ್ ಕರಿಯ ಪ್ಯಾಕ್ ಕೂಡ ಬಂತು. ಖುಷಿಯಿಂದ ಊಟಕ್ಕೆ ಕುಳಿತ ಆ ಜೋಡಿಗೆ ಪೋರ್ಕ್ ಕರಿ ಆಘಾತವನ್ನೇ ನೀಡಿತು. ಪೋರ್ಕ್ ಕರಿಯನ್ನು ಪ್ಯಾಕ್ನಿಂದ ಕಪ್ಗೆ ಸುರಿದಾಗ ಅಲ್ಲಿ ಕಾಣಿಸಿದ್ದು ಮನುಷ್ಯನ ಹಲ್ಲು!
ಕೂಡಲೇ ರೆಸ್ಟೋರೆಂಟ್ಗೆ ಕರೆ ಮಾಡಿದ ಜೋಡಿ, ಸ್ಥಳೀಯ ಆಹಾರ ಅಧಿಕಾರಿಗಳಿಗೂ ದೂರು ನೀಡಿದರು. ಪೋರ್ಕ್ ಕರಿಯಲ್ಲಿದ್ದ ಮನುಷ್ಯನ ಹಲ್ಲು ಎಲ್ಲರ ಕುತೂಹಲದ ಕೇಂದ್ರ ಬಿಂದುವಾಗಿತ್ತು. ಕೂಡಲೇ ಅಧಿಕಾರಿಗಳು ರೆಸ್ಟೋರೆಂಟ್ಗೆ ತೆರಳಿದರು. ಅಲ್ಲಿ ಎಲ್ಲವನ್ನೂ ಪರಿಶೀಲಿಸಿದರು. ಆಹಾರ ಸುರಕ್ಷತೆಯ ಎಲ್ಲ ನಿಯಮಗಳನ್ನೂ ರೆಸ್ಟೋರೆಂಟ್ ಪಾಲಿಸುತ್ತಿರುವುದು ಕಂಡುಬಂತು. ಪೋರ್ಕ್ ಕರಿಯಲ್ಲಿ ಹಲ್ಲು ಹೇಗೆ ಬಂತು ಎಂಬ ಪ್ರಶ್ನೆಗೆ ಉತ್ತರ ಕಂಡು ಹುಡುಕುವ ಪ್ರಯತ್ನ ಮುಂದುವರಿಯಿತು.
ರೆಸ್ಟೋರೆಂಟ್ನ ಎಲ್ಲ ಸಿಬ್ಬಂದಿಗಳ ಹಲ್ಲುಗಳಿವೆಯೇ ಎಂದೂ ಪರಿಶೀಲಿಸಲಾಯಿತು. ಯಾರ ಹಲ್ಲೂ ಬಿದ್ದು ಹೋಗಿಲ್ಲ ಎಂಬುದು ಖಾತ್ರಿಯಾಯಿತು. ಡಿಎನ್ಎ ಟೆಸ್ಟ್ಗೂ ಸಿಬ್ಬಂದಿ ರೆಡಿಯಾದ್ರು.ರೆಸ್ಟೋರೆಂಟ್ ತಪ್ಪೆಸಗಿರುವುದೂ ಸಾಬೀತಾಗಲಿಲ್ಲ. ಹೀಗಾಗಿ ಅದರ ರೇಟಿಂಗ್ 4/5 ಹಾಗೆಯೇ ಉಳಿಯಿತು. ಆದಾಗ್ಯೂ, ರೆಸ್ಟೋರೆಂಟ್ನವರು ಜೋಡಿಗೆ ಮತ್ತೆ ಉಚಿತವಾಗಿ ಪೋರ್ಕ್ ಕರಿ ಮತ್ತು ಹಣ ಮರುಪಾವತಿ ಮಾಡಲು ಮುಂದಾಗಿತ್ತು. ಆದರೆ ಆ ಜೋಡಿ ಅದನ್ನು ನಿರಾಕರಿಸಿತು. ಅಂದ ಹಾಗೆ, ಈ ಜೋಡಿ ಹೆಸರು ಸ್ಟೀಫನ್ ಮೆಕ್ಡೊನಾಗ್ ಮತ್ತು ಡೇವಿಡ್ ಬರ್ರೋವ್ಸ್. ರೆಸ್ಟೋರೆಂಟ್ ಹೆಸರು ನ್ಯೂಟೌನ್ ಕ್ಯಾನ್ಟೋಸ್ಸ್ ಟೇಕ್ಅವೇ. ಕೊನೆಗೂ ಹಲ್ಲು ಯಾರದ್ದು ಎಂಬ ಪ್ರಶ್ನೆಗೆ ಉತ್ತರ ಸಿಗಲಿಲ್ಲ. ಆ ಹಲ್ಲು ಯಕ್ಷ ಪ್ರಶ್ನೆಯಾಗಿಯೇ ಉಳಿಯಿತು! (ಏಜೆನ್ಸೀಸ್)