ಚಲಿಸುತ್ತಿರುವ ವಿಮಾನದಲ್ಲೇ ಮದುವೆಯಾದ ಜೋಡಿ! ಇದಕ್ಕೆ ಕಾರಣ ಇಲ್ಲಿದೆ

Air Marriage
Published on

ನ್ಯೂಯಾರ್ಕ್​: ಬಹು ದಿನದ ಆಸೆಯಂತೆ ಜೋಡಿಯೊಂದು ತಮ್ಮ ಮದುವೆಯನ್ನು ವಿಮಾನದಲ್ಲಿ ಮಾಡಿಕೊಳ್ಳುವ ಮೂಲಕ ಮದುವೆ ಬಗ್ಗೆ ಇಟ್ಟುಕೊಂಡಿದ್ದ ಕನಸನ್ನು ನನಸಾಗಿಸಿಕೊಂಡಿದ್ದಾರೆ.

ಹೌದು... ಅಮೆರಿಕದ ಒಕ್ಲಾಹೊಂ ನಗರದ ಈ ಜೋಡಿ ಚಲಿಸುತ್ತಿರುವ ವಿಮಾನದಲ್ಲಿ ವಿವಾಹ ಬಂಧನಕ್ಕೊಳಗಾಗಿದ್ದಾರೆ. ವಿಮಾನದಲ್ಲೇ ಮದುವೆಯಾಗಲು ಕಾರಣವೂ ಇದೆ. ಅದೇನೆಂದರೆ, ಪಾಮ್​ ಪ್ಯಾಟರ್​ಸನ್​ ಮತ್ತು ಜೆರಿಮಿ ಸಾಲ್ಡಾ ಇಬ್ಬರು ಹಲವು ದಿನಗಳಿಂದ ಪ್ರೀತಿಸುತ್ತಿದ್ದರು. ಪಾಮ್​ ತನ್ನ ಗೆಳತಿ ಆಸೆಯಂತೆ ತಮ್ಮಿಬ್ಬರ ಮದುವೆ ದಿನವನ್ನು ಶಾಶ್ವತವಾಗಿ ನೆನಪಿನಲ್ಲಿಟ್ಟುಕೊಳ್ಳುವಂತೆ ಇರಬೇಕು ಎಂದು ಹೇಳಿದ್ದನ್ನು ನಿಜವಾಗಿಯೂ ವಿಮಾನದಲ್ಲಿ ಮದುವೆಯಾಗುವ ಮೂಲಕ ಉಡುಗೊರೆ ನೀಡಿದ್ದಾರೆ.

ಮದುವೆಯಾಗುವ ಬಗ್ಗೆ ಈಕೆಗೆ ತಿಳಿದಿರಲಿಲ್ಲ. ಈ ಮುಂಚೆಯೇ ಟಿಕೆಟ್​ ಬುಕ್​ ಮಾಡಿ, ಅಧಿಕಾರಿಗಳಿಂದ ಅನುಮತಿ ಪಡೆಯಲಾಗಿತ್ತು. ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗಲೇ ತಾನು ಇಲ್ಲೇ ಮದುವೆಯಾಗುತ್ತಿರುವುದಾಗಿ ಹೇಳಿದಾಗ ಆಕೆಗೆ ತುಂಬಾ ಸಂತೋಷವಾಯಿತು. ಹಾಗೆ ಆಕೆಯ ಕನಸನ್ನು ಈಡೇರಿಸಿದಂತಾಯಿತು ಎಂದು ಪಾಮ್​ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net