

ಯಾದಗಿರಿ: ಶಾರ್ಟ್ ಸರ್ಕ್ಯೂಟ್ನಿಂದ ದಂಪತಿ ಬೆಂಕಿಗೆ ಆಹುತಿಯಾಗಿರುವ ಘಟನೆ ಗುರಮಠಕಲ್ ತಾಲೂಕಿನ ಸೈದಾಪುರ ಪಟ್ಟಣದಲ್ಲಿ ಇಂದು ಬೆಳ್ಳಂ ಬೆಳಗ್ಗೆ ನಡೆದಿದೆ. ಬಟ್ಟೆ ಅಂಗಡಿಗೆ ಹತ್ತಿಕೊಂಡ ಬೆಂಕಿ ಮನೆಗೂ ವ್ಯಾಪಿಸಿದೆ. ಕೋಣೆಯೊಳಗೆ ಮಲಗಿದ್ದ ಕೆ.ಬಿ.ರಾಘವೇಂದ್ರ (40), ಪತ್ನಿ ಶಿಲ್ಪಾ ರಾಘವೇಂದ್ರ (35) ಶಾರ್ಟ್ ಸರ್ಕ್ಯೂಟ್ನಿಂದ ಮೃತಪಟ್ಟವರು. ಇದನ್ನೂ ಓದಿ: ಈ ಮರದ ಭದ್ರತೆಗೆ ಇದುವರೆಗೂ ಖರ್ಚಾಗಿದ್ದು 64 ಲಕ್ಷ ರೂ.!
ಘಟನೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗುತ್ತಿದ್ದು, ಇಂದು ಬೆಳಗ್ಗೆ ನಸುಕಿನ ಜಾವ 3 ಗಂಟೆಗೆ ನಡೆದಿದೆ. ಸ್ಥಳೀಯರು ಬೆಂಕಿ ಕಂಡು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಬಟ್ಟೆ ಅಂಗಡಿ ಅಕ್ಕಪಕ್ಕ ಬೆಂಕಿ ವ್ಯಾಪಿಸುತ್ತಿರುವ ಹಿನ್ನೆಲೆ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದು, ಅಧಿಕಾರಿಗಳು ರಾಯಚೂರನಿಂದ ಅಗ್ನಿಶಾಮಕ ದಳ ವಾಹನ ಕರೆತಂದಿದ್ದಾರೆ.
ಈ ಘಟನೆಗೆ ಸರಕಾರವೇ ಕಾರಣವೆಂದು ಸ್ಥಳೀಯರು ಆರೋಪಿಸಿದ್ದು, ಸೈದಾಪುರನಲ್ಲಿ ಅಗ್ನಿಶಾಮಕ ಠಾಣೆ ಮಾಡದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೈದಾಪುರ ಪಟ್ಟಣದ ಜನರು ಸುಮಾರು ವರ್ಷಗಳಿಂದ ಅಗ್ನಿ ಶಾಮಕ ಠಾಣೆ ಸ್ಥಾಪನೆಗೆ ಬೇಡಿಕೆ ಇಟ್ಟಿದ್ದಾರೆ. ಈ ಭಾಗದಲ್ಲಿ ಎಲ್ಲೇ ಅಗ್ನಿ ಅವಘಡ ಸಂಭವಿಸಿದರೂ ದೂರದ ಯದಗಿರಿ ಜಿಲ್ಲಾ ಕೇಂದ್ರ, ಅಥವಾ ಗುರುಮಠಕಲ್ನಿಂದ ಅಗ್ನಿಶಾಮಕ ವಾಹನ ಕರೆತರುವುದ ಅನಿವಾರ್ಯವಾಗಿದೆ. ಇದನ್ನೂ ಓದಿ: ಇಂದಿನಿಂದ 3 ದಿನ ಗುಡುಗು ಸಹಿತ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ