

ಬೆಂಗಳೂರು: ಜಾಗತಿಕವಾಗಿ ಸಲಿಂಗಿಗಳ ವಿವಾಹ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿಯಲ್ಲಿದೆ. ಅದರಲ್ಲೂ ಭಾರತದಲ್ಲಿ ಕಳೆದ ವರ್ಷ ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟ ಕೂಡ ನಡೆಯಿತು. ದೇಶದಲ್ಲಿ ಸಲಿಂಗಿಗಳ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಬೇಕು ಎಂದು ದೊಡ್ಡ ಮಟ್ಟದ ಹೋರಾಟ ಸಂಭವಿಸಿದ ಬೆನ್ನಲ್ಲೇ ಈ ವಿಷಯ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿತ್ತು. ಇದು ಸಂಸತ್ ವ್ಯಾಪ್ತಿಗೆ ಸಂಬಂಧಿಸಿದ ವಿಷಯವಾಗಿದ್ದು, ಕೋರ್ಟ್‌ಗೆ ಹಸ್ತಕ್ಷೇಪ ಮಾಡುವ ಅಧಿಕಾರ ಇಲ್ಲ ಎಂಬ ಕೇಂದ್ರ ಸರ್ಕಾರದ ವಾದವನ್ನು ಸುಪ್ರೀಂಕೋರ್ಟ್ ಒಪ್ಪಿಕೊಂಡಿತು.
ಸಲಿಂಗ ವಿವಾಹಕ್ಕೆ ಕಾನೂನಿನಲ್ಲಿ ಮಾನ್ಯತೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತು. ಸಲಿಂಗ ವಿವಾಹಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಮಹತ್ವದ ತೀರ್ಪು ನೀಡಿದ ಸುಪ್ರೀಂ, ಈ ವಿವಾಹಕ್ಕೆ ಕಾನೂನಿನಲ್ಲಿ ಮಾನ್ಯತೆ ಇಲ್ಲ ಎಂಬ ವಿಚಾರವನ್ನೂ ಸ್ಪಷ್ಟಪಡಿಸಿತು.
ಇದೀಗ ಭಾರತದಲ್ಲಿ ಸಲಿಂಗ ವಿವಾಹಕ್ಕೆ ಮಾನ್ಯತೆ ಇಲ್ಲ. ಆದರೆ, ಉಳಿದ ಯಾವ ದೇಶಗಳಲ್ಲಿ ಇದು ಕಾನೂನುಬದ್ಧವಾಗಿದೆ ಎಂಬುದರ ಪಟ್ಟಿ ಇಲ್ಲಿದೆ ಗಮನಿಸಿ. ಈ ವಿವರವನ್ನು 'ವರ್ಲ್ಡ್ ಆಫ್ ಸ್ಟಾಟಸ್ಟಿಕ್ಸ್' ಹಾಗೂ 'ಡೇಟಾ ಸ್ಟಾಟಸ್ಟಿಕ' ಪ್ರಕಟಿಸಿದೆ.
ಇದನ್ನೂ ಓದಿ: ಫೆ. 13ರಿಂದ ಆಶಾ ಕಾರ್ಯಕರ್ತೆಯರಿಂದ ವಿಧಾನಸೌಧ ಚಲೋ
1. ಅಂಡೋರಾ
2. ನೆದರ್ಲ್ಯಾಂಡ್ಸ್
3. ಸ್ವಿಜರ್ಲ್ಯಾಂಡ್
4. ಸ್ಲೊವೇನಿಯಾ
5. ಕ್ಯೂಬಾ
6. ಬೆಲ್ಜಿಯಂ
7. ಫಿನ್ಲ್ಯಾಂಡ್
8. ಐರ್ಲೆಂಡ್
9. ಅಮೆರಿಕಾ
10. ಕೆನಡಾ
11. ಸ್ಪೇನ್
12. ಆಸ್ಟ್ರಿಯಾ
13. ಈಕ್ವೆಡಾರ್
14. ತೈವಾನ್
15. ದಕ್ಷಿಣ ಆಫ್ರಿಕಾ
16. ಆಸ್ಟ್ರೇಲಿಯಾ
17. ಮಾಲ್ಟಾ
18. ಜರ್ಮನಿ
19. ಕೊಲಂಬಿಯಾ
20. ಗ್ರೀನ್ಲ್ಯಾಂಡ್
21. ನಾರ್ವೆ
22. ಸ್ವೀಡನ್
23. ಕೋಸ್ಟಾ ರಿಕಾ
24. ಚಿಲಿ
25. ಲಕ್ಸೆಂಬರ್ಗ್
26. ಅರ್ಜೆಂಟೀನಾ
27. ಐಸ್ಲ್ಯಾಂಡ್
28. ಪೋರ್ಚುಗಲ್
29. ಡೆನ್ಮಾರ್ಕ್
30. ಬ್ರೆಜಿಲ್
31. ಯುಕೆ
32. ಫ್ರಾನ್ಸ್
33. ನ್ಯೂಜಿಲೆಂಡ್
34. ಉರುಗ್ವೆ