

ಬೆಂಗಳೂರು: ಪ್ರತಿಷ್ಠಿತ ಲೈಜಾಲ್ ಹಾಗೂ ಹಾರ್ಪಿಕ್‌ಗಳ ನಕಲಿ ಉತ್ಪನ್ನ ತಯಾರಿಕಾ ಗೋಡೌನ್ ಮೇಲೆ ಸಿಸಿಬಿ ಮತ್ತು ಜೀವನ್ ಭೀಮಾನಗರ ಠಾಣೆ ಪೊಲೀಸರು ದಾಳಿ ನಡೆಸಿ ಲಕ್ಷಾಂತರ ರೂ. ಮೌಲ್ಯದ ನಕಲಿ ಉತ್ಪನ್ನಗಳನ್ನು ಜಪ್ತಿ ಮಾಡಿದ್ದಾರೆ.
ಈ ಸಂಬಂಧ ಅನಿಲ್ ಪಟೇಲ್ ಮತ್ತು ಅನಂತ್ ಪಟೇಲ್ ಎಂಬವರನ್ನು ಬಂಧಿಸಲಾಗಿದೆ. ಆರೋಪಿಗಳು ನಗರದ ಹೊರವಲಯದ ಅವಲಹಳ್ಳಿಯಲ್ಲಿ ಪ್ರತಿಷ್ಠಿ ಕಂಪನಿಗಳ ಸ್ವಚ್ಚತಾ ಉತ್ಪನ್ನಗಳನ್ನು ನಕಲಿಯಾಗಿ ತಯಾರಿಸಿ, ಅವುಗಳಿಗೆ ಅಸಲಿ ಕಂಪನಿಯ ಸ್ಟಿಕರ್‌ಗಳನ್ನು ಅಂಟಿಸುತ್ತಿದ್ದರು. ದಾಳಿ ವೇಳೆ ಲಕ್ಷಾಂತರ ರೂ. ಮೌಲ್ಯದ ನಕಲಿ ಲೈಜಾಲ್, ಹಾರ್ಪಿಕ್, ವಿಮ್ ಲಿಕ್ವೀಡ್‌ಗಳು ಹಾಗೂ ೨ ಗೂಡ್ಸ್ ವಾಹನಗಳು, ತಯಾರಿಕಾ ಉಪಕರಣಗಳು ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೀವನ್ ಭೀಮಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.