ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಕ್ಷಣಗಣನೆ: ಹೇಗಿದೆ ತಯಾರಿ? ಇಲ್ಲಿದೆ ಸಂಪೂರ್ಣ ಮಾಹಿತಿ…

free bus
Published on

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಮಹತ್ವದ ಘೋಷಣೆಯಾಗಿರೋ ಶಕ್ತಿ ಯೋಜನೆಯಡಿ ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನಾಳೆ ಸಿಎಂ ಸಿದ್ದರಾಮಯ್ಯನವರು ಬೆಂಗಳೂರಿನಲ್ಲಿ ಬೆಳಿಗ್ಗೆ 11 ಗಂಟೆಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಕೇಂದ್ರ, ರಾಜ್ಯ ಸಚಿವರು ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ಈ ಮಹಾಂತ್ವಕಾಂಕ್ಷೆ ಯೋಜನೆಗೆ ಚಾಲನೆ ನೀಡಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಈಗಾಗಲೇ ನಾಲ್ಕು ನಿಗಮಗಳು ಭರ್ಜರಿ ತಯಾರಿಯನ್ನು ನಡೆಸಿವೆ.

ಈ ನಿಗಮಗಳ ಅಂದಾಜಿನ ಪ್ರಕಾರ ಉಚಿತ ಫಲಾನುಭವಿಗಳ ಸಂಖ್ಯೆ ತಿಂಗಳಿಗೆ ಒಂದು ಕೋಟಿ ದಾಟಲಿದೆ. ಈ ನಾಲ್ಕು ನಿಗಮಗಳ ಸಂಪೂರ್ಣ ಉಚಿತ ಪ್ರಯಾಣದ ಬಸ್​ಗಳ ವಿವರ ಇಲ್ಲಿದೆ.

ಕೆಎಸ್​ಆರ್​ಟಿಸಿ
• ಕೆಎಸ್​ಆರ್​ಟಿಸಿ ನಿಗಮದಲ್ಲಿ ಚಲಾವಣೆಯಲ್ಲಿರುವ ಒಟ್ಟು ಬಸ್‌ಗಳ ಸಂಖ್ಯೆ- 7482
• ಮಹಿಳೆಯರು ಉಚಿತ ಪ್ರಯಾಣ ಮಾಡಬಹುದಾದ ಬಸ್‌ಗಳ ಸಂಖ್ಯೆ- 6239

ಬಿಎಂಟಿಸಿ
• ಬಿಎಂಟಿಸಿ ನಿಗಮದಲ್ಲಿ ಚಲಾವಣೆಯಲ್ಲಿರುವ ಒಟ್ಟು ಬಸ್‌ಗಳ ಸಂಖ್ಯೆ- 5547
• ಮಹಿಳೆಯರು ಉಚಿತ ಪ್ರಯಾಣ ಮಾಡಬಹುದಾದ ಬಸ್‌ಗಳ ಸಂಖ್ಯೆ- 5102

NWKRTC
• ನಿಗಮದಲ್ಲಿ ಚಲಾವಣೆಯಲ್ಲಿರುವ ಒಟ್ಟು ಬಸ್‌ಗಳ ಸಂಖ್ಯೆ- 4542
• ಮಹಿಳೆಯರು ಉಚಿತ ಪ್ರಯಾಣ ಮಾಡಬಹುದಾದ ಬಸ್‌ಗಳ ಸಂಖ್ಯೆ- 3986

KKRTC
• ನಿಗಮದಲ್ಲಿ ಚಲಾವಣೆಯಲ್ಲಿರುವ ಒಟ್ಟು ಬಸ್‌ಗಳ ಸಂಖ್ಯೆ- 4106
• ಮಹಿಳೆಯರು ಉಚಿತ ಪ್ರಯಾಣ ಮಾಡಬಹುದಾದ ಬಸ್‌ಗಳ ಸಂಖ್ಯೆ-3376

ಇನ್ನು, ನಾಲ್ಕು ನಿಗಮಗಳಲ್ಲಿ ಮಹಿಳೆಯರು ಪ್ರಯಾಣಿಸಬಹುದಾದ ಒಟ್ಟು ಬಸ್‌ಗಳ ಸಂಖ್ಯೆ 18,703 ಆಗಿದ್ದು, ಬಿಎಂಟಿಸಿ ಹೊರತುಪಡಿಸಿ ಉಳಿದ ನಿಗಮಗಳ ಬಸ್‌ಗಳಲ್ಲಿ ಪುರುಷರಿಗೆ 50%ರಷ್ಟು ಮೀಸಲಾತಿಯನ್ನು ನೀಡಲಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಬಸ್​ನಲ್ಲಿ ಪುರುಷರಿಗೆ ಮೀಸಲಾತಿ ಕೊಟ್ಟ ರಾಜ್ಯ ಎಂಬ ಹೆಗ್ಗಳಿಕೆಗೆ ಕರುನಾಡು ಪಾತ್ರವಾಗಲಿದೆ.

ಒಂದೊಮ್ಮೆ 50ರಷ್ಟು ಪುರುಷ ಪ್ರಯಾಣಿಕರು ಇಲ್ಲದಿದ್ದರೆ ಖಾಲಿ ಇರುವ ಸೀಟುಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ಪ್ರತಿನಿತ್ಯ 3,44,025 ಮಹಿಳಾ ಪ್ರಯಾಣಿಕರಂತೆ ಪ್ರತಿ ತಿಂಗಳು ಸುಮಾರು 1,02,00,750 ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ನಿರೀಕ್ಷೆಯಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net