ನನ್ನ ಮೇಲೆ ಅವಿಶ್ವಾಸ ತನ್ನಿ ಎಂದ ಸಭಾಪತಿ!

horatti
Published on

ಬೆಂಗಳೂರು:
ನೋಡ್ರಿ ನಾನು ನಿರ್ಣಯ ಕೊಟ್ಟಿದ್ದೇನೆ. ಸದನ ನಡೆಸಲು ಅವಕಾಶ ಮಾಡಿಕೊಡಿ. ನಿಮಗೆ ಬೇಡ ಅಂದ್ರೆ ನಿನ್ನ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಿ ನಾನು ಹೋಗುತ್ತೇನೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರು ತೀವ್ರ ಬೇಸರ ಹೊರ ಹಾಕಿದರು.
ನಿಮ್ಮಿಷ್ಟಕ್ಕೆ ತಕ್ಕಂತೆ ನೀವೆ ಮಾತನಾಡ್ತೀರಲ್ರಿ? ಏನಿದು ಗಲಾಟೆ, ವಾಗ್ವಾದ? ಮೇಲ್ಗಡೆ ವಿದ್ಯಾರ್ಥಿಗಳಿದ್ದಾರೆ. ಹೊರಗೆ ಜನರು ನೋಡ್ತಿದ್ದಾರೆ. ಅತಿಯಾದರೆ ನಾನು ಸರಿ ಇರಲ್ಲ ಎಂದು ಎಚ್ಚರಿಕೆ ನೀಡಿದರು.
ನಾನು ಸದನವನ್ನ ನಡೆಸಬೇಕೋ ಬೇಡವೋ? ಹೇ ರವಿಕುಮಾರ್ ನಿನ್ನದು ಅತಿಯಾಯ್ತು, ಏನ್ ಧಿಮಾಕು ಮಾಡ್ತಿಯ? ಆಯ್ತು ಶಂಕ ಹೊಡಿರಿ ಎಂದು ಗರಂ ಆದರು.
ನೀವು ನಮಗೆ ನಿಯಮ ಎಂದು ಹೇಳ್ತೀರಿ. ಧರಣಿ ನಡೆಸುವಾಗ ಮತ್ತೆ ವಾಪಸ್ ಕುರ್ಚಿಗೆ ಬಂದು ಮಾತನಾಡುತ್ತೀದ್ದೀರಲ್ಲ? ಇದು ಯಾವ ನಿಯಮದಲ್ಲಿದೆ? ಎಂದು ಸಿ.ಟಿ.ರವಿಗೂ ದಬಾಯಿಸಿದರು.
ಆಡಳಿತ ಪಕ್ಷದ ಪ್ರಕಾಶ್ ರಾಥೋಡ್ ಮಾತನಾಡಲು ಪದೇ ಪದೇ ಎದ್ದು ನಿಲ್ಲುತ್ತಿದ್ದ ಸಂದರ್ಭದಲ್ಲಿಯೂ ಹೇ.. ನೀ ಸುಮ್ನ ಕೂತ್ಕೊ ಎಂದು ದಬಾಯಿಸಿದರು.
ವಾಗ್ದಾದ ಮುಂದುವರಿದಿದ್ದ ಸಂದರ್ಭದಲ್ಲಿ ಯಾವುದು ಕಡತಕ್ಕೆ ಹೋಗಬಾರದು ಎಂದು ಸಭಾಪತಿ ಸೂಚನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net