ಮೇಲ್ಮನೆಯಲ್ಲಿ ಗೋವಿಂದಾ.. ಗೋವಿಂದಾ...

Published on

ಬೆಂಗಳೂರು:
ಮೇಲ್ಮನೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪ್ರತಿಭಟನೆಯುದ್ದಕ್ಕೂ ಗೋವಿಂದಾ... ಗೋವಿಂದಾ... ೋಷಣೆ ಮೊಳಗಿಸಿತು.
ಮೂಡಾ ಸೈಟ್ ಗೋವಿಂದಾ.. 187 ಕೋಟಿ ಗೋವಿಂದಾ... ದಲಿತರ ದುಡ್ಡು ಗೋವಿಂದಾ.. ಎಂದಿದ್ದಲ್ಲದೆ, ಸಮಾಜವಾದ- ಮಜಾವಾದ, ರೀ ಡೂ ಯಾರಪ್ಪ- ಸಿದ್ದರಾಮಪ್ಪ, ದಲಿತರ ಹೆಸರು ಹೇಳ್ತಾರೆ, ಹಣವನ್ನೆಲ್ಲ ನುಂಗ್ತಾರೆ ಎಂದೆಲ್ಲ ೋಷಣೆ ಕೂಗಿದರು.
ಈ ನಡುವೆ ಪ್ರತಿಭಟನೆ ಸಂದರ್ಭದಲ್ಲಿ ಎದ್ದು ನಿಂತಿದ್ದ ಜೆಡಿಎಸ್‌ನ ಭೋಜೇಗೌಡ ಅವರಿಗೆ ಸಿಎಂ ಸಿದ್ದರಾಮಯ್ಯ ಅವರು ಕೈ ಸನ್ನೆ ಮಾಡಿ ಕೂರಿಸಿದರು.
ಬೋಜೇಗೌಡರ ಜೊತೆ ಪ್ರೀತಿಯಿಂದ ಮಾತನಾಡುತ್ತೇನೆ ಎಂದು ಸಿಎಂ ಸಮಾಜಾಯಿಷಿ ನೀಡಿದರು. ಬಿಜೆಪಿ ಮತ್ತು ಜೆಡಿಎಸ್‌ನವರು ಎಷ್ಟೇ ಅಬ್ಬರ ೋಷಣೆ ಕೂಗಿದರೂ, ಒಂದಿಷ್ಟು ವಿಚಲಿತರಾಗದ ಸಿದ್ದರಾಮಯ್ಯ ಅವರು ಅಧಿವೇಶನ ಮುಂದೂಡುವ ತನಕ ಕುಳಿತೇ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net