ಮೇಲ್ಮನೆಯಲ್ಲಿ ಎನ್.ರವಿಕುಮಾರ್ ಪ್ರಶ್ನೆ; ಪಡಿತರ ಅಕ್ಕಿಗೂ, ಶಾಲೆಗೆೆ ನೀಡುವ ಅಕ್ಕಿಗೂ 5 ರೂ ವ್ಯತ್ಯಾಸ ಏಕೆ?

N-Ravikumar-MLA-Twitter-620x391
Published on

ಬೆಂಗಳೂರು:
ಆಹಾರ ಇಲಾಖೆಯ ನ್ಯಾಯ ಬೆಲೆ ಅಂಗಡಿಯಲ್ಲಿ ವಿತರಿಸುವ ಒಂದು ಕೆ ಜಿ ಅಕ್ಕಿ 34.60 ರೂ ನಲ್ಲಿ ಖರೀದಿಸುತ್ತಿದ್ದರೆ, ಶಿಕ್ಷಣ ಇಲಾಖೆಯಲ್ಲಿ ಅಕ್ಷರ ದಾಸೋಹ ಅಕ್ಕಿ 29.30 ರೂ ರೂಗೆ ಖರೀದಿಯಾಗುತ್ತಿದ್ದು, 5 ರೂ ವ್ಯತ್ಯಾಸ ಏಕೆ ಎಂದು ಮೇಲ್ಮನೆಯಲ್ಲಿ ಬಿಜೆಪಿ ಎನ್.ರವಿಕುಮಾರ್ ಪ್ರಶ್ನಿಸಿದರು.
ಶಾಲೆಯಲ್ಲಿ ಕೊಡ್ತಿರುವ ಅಕ್ಕಿ ಕಳಪೆ ಮಟ್ಟದ್ದಾ? ಮಕ್ಕಳ ಆರೋಗ್ಯ ಕೆಡುವಂತ ಅಕ್ಕಿ ಕೊಡ್ತಿದ್ದೀರಾ? ಎಂದು ಕೇಳಿದರು.
ಇದಕ್ಕೆ ಉತ್ತರಿಸಿದ ಆಹಾರ ಸಚಿವ ಮುನಿಯಪ್ಪ, ನಾವು ಕೇಂದ್ರ ಸರ್ಕಾರಕ್ಕೆ ಅಕ್ಕಿ ಕೊಡುವಂತೆ ಮನವಿ ಮಾಡಿದ್ವಿ ಆದರೆ ಅವರು ಕೊಟ್ಟಿಲ್ಲ. ಕೇಂದ್ರ ಸಂಸ್ಥೆಗಳು ನಿಗದಿ ಮಾಡಿದ ದರವನ್ನ ನಾವು ಕೊಡ್ತಿದ್ದೇವೆ. ನಾಫೆಡ್‌ನವರು ನಿಗದಿ ಪಡಿಸಿದ ಬೆಲೆ ಕೊಡ್ತಿದ್ದೇವೆ ಎಂದರು.
ಚರ್ಚೆ ನಡುವೆ ಮಧ್ಯ ಪ್ರವೇಶ ಮಾಡಿದ ಶಿಕ್ಷಣ ಸಚಿವ ಮಧುಬಂಗಾರಪ್ಪ, ರವಿಕುಮಾರ್ ಅವರು ಸದನಕ್ಕೆ ತಪ್ಪು ಮಾಹಿತಿ ಕೊಡ್ತಿದ್ದಾರೆ. ನಾವು ಮಕ್ಕಳಿಗೆ ಗುಣಮಟ್ಟದ ಅಕ್ಕಿ ಕೊಡ್ತಿದ್ದೇವೆ ಎಂದರು.
ಕೇಂದ್ರ ಸರ್ಕಾರ 40 ರೂಗೆ ಖರೀದಿಸಿ, 12 ರೂ ಬಿಟ್ಟು ಬೊಕ್ಕಸಕ್ಕೆ ಲಾಸ್ ಮಾಡ್ತಿದೆ ಎನ್ನುವ ಮಾತಿಗೆ ಬಿಜೆಪಿ ರವಿಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು.
ವಿಷಯ ಅದಲ್ಲ ವಿಷಯಾಂತರ ಮಾಡಬೇಡಿ ಎಂದು ರವಿಕುಮಾರ್ ಮಾತಿಗೆ ಕಾಂಗ್ರೆಸ್ ಸದಸ್ಯರ ತೀವ್ರ ಆಕ್ಷೇಪಪಡಿಸಿದಾಗ ವಾಗ್ವಾದ ನಡೆಯಿತು.
ಈ ವೇಳೆ ಎದ್ದುನಿಂತ ಸಭಾಪತಿ ಹೊರಟ್ಟಿ ಅವರು, ಈ ಬಗ್ಗೆ ಪ್ರತ್ಯೇಕ ಚರ್ಚೆಗೆ ಅವಕಾಶಕ್ಕೆ ಅರ್ಜಿ ಕೊಡಿ ಈ ವಿಷಯ ಬೇರೆ ನಿಯಮದಲ್ಲಿ ಚರ್ಚೆಗೆ ಕೊಡ್ತೀನಿ ಎಂದು ರೂಲಿಂಗ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net