ಎಷ್ಟೇ ಔಷಧಗಳನ್ನು ಸೇವಿಸಿದ್ರೂ ಕೆಮ್ಮು ಕಡಿಮೆಯಾಗದಿದ್ದರೆ ಈ ಸಲಹೆಗಳನ್ನು ಅನುಸರಿಸಿ...

cough
Published on

ಬೆಂಗಳೂರು: ಮಳೆಗಾಲದಲ್ಲಿ ಶೀತ, ಕೆಮ್ಮು ಮತ್ತು ಜ್ವರದಂತಹ ಸಮಸ್ಯೆಗಳು ಸಾಮಾನ್ಯವಾಗಿದೆ. ಅನೇಕ ಜನರು ವಿಶೇಷವಾಗಿ ಚಳಿಗಾಲದಲ್ಲಿ ಕೆಮ್ಮು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪರಿಹಾರಕ್ಕಾಗಿ ಔಷಧಗಳು ಮತ್ತು ಟಾನಿಕ್ಗಳನ್ನು ಬಳಸಲಾಗುತ್ತದೆ. ಆದರೆ ಸಮಸ್ಯೆಯ ತೀವ್ರತೆ ಕಡಿಮೆಯಾಗುವುದಿಲ್ಲ. ತಾತ್ಕಾಲಿಕವಾಗಿ ಕಡಿಮೆಯಾಗುವಂತೆ ಕಾಣುತ್ತದೆ.

ಅನೇಕ ಜನರು ಹಗಲಿನ ಬದಲು ರಾತ್ರಿಯಲ್ಲಿ ನಿರಂತರ ಕೆಮ್ಮಿನಿಂದ ಬಳಲುತ್ತಿದ್ದಾರೆ. ಕೆಲವರಿಗೆ ಎಷ್ಟೇ ಔಷಧಿ ತಿಂದರೂ ಕೆಮ್ಮು ಕಡಿಮೆಯಾಗುವುದಿಲ್ಲ. ನೀವು ಕೂಡ ಇದೇ ಸಮಸ್ಯೆಯಿಂದ ಬಳಲುತ್ತಿದ್ದೀರಾ.. ಆದರೆ ಒಮ್ಮೆ ಈ ಟಿಪ್ಸ್ ಟ್ರೈ ಮಾಡಿ...

ನಿರಂತರ ಕೆಮ್ಮಿನಿಂದ ಬಳಲುತ್ತಿರುವವರಿಗೆ ಈ ಸಲಹೆ ಚೆನ್ನಾಗಿ ಕೆಲಸ ಮಾಡುತ್ತದೆ. ತುಳಸಿ ಎಲೆಗಳನ್ನು ನೀರಿಗೆ ಹಾಕಿ ಕುದಿಸಿ ನಂತರ ಕುದಿಸಿದ ತುಳಸಿ ನೀರನ್ನು ಸ್ವಲ್ಪ ತಣ್ಣಗಾಗಿಸಿ ಸೇವಿಸಿದರೆ ಕೆಮ್ಮು ನಿವಾರಣೆಯಾಗುತ್ತದೆ.

ಒಣ ಕೆಮ್ಮಿನಿಂದ ಬಳಲುತ್ತಿರುವವರಿಗೆ ಪ್ರತಿದಿನ ಎರಡು ಬಾರಿ ಅರ್ಧ ಟೀ ಚಮಚ ಅರಿಶಿನದೊಂದಿಗೆ ಒಂದು ಲೋಟ ಹಾಲು ಕುಡಿಯಬೇಕು ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ಅರ್ಧ ಟೀ ಚಮಚ ಸೋಂಪು ಕಾಳಿನ ಪುಡಿಯನ್ನು ಒಂದು ಚಮಚ ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಿದರೆ ಕೆಮ್ಮು ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ.

ಒಂದು ಚಮಚ ಜೇನುತುಪ್ಪದಲ್ಲಿ 1 ಚಮಚ ಶುಂಠಿ ರಸ ಮತ್ತು 1 ಚಮಚ ದಾಳಿಂಬೆ ರಸವನ್ನು ಮಿಶ್ರಣ ಮಾಡಿ ಸೇವಿಸಿ. ಇದನ್ನು ದಿನಕ್ಕೆ 2 ಅಥವಾ 3 ಬಾರಿ ಮಾಡಿದರೆ ತುಂಬಾ ಒಳ್ಳೆಯ ಫಲಿತಾಂಶವನ್ನು ಕಾಣಬಹುದು ಎಂದು ಹೇಳಲಾಗುತ್ತದೆ.

Cough Syrup

ಎರಡು ಮೆಣಸಿನ ಕಾಳುಗಳನ್ನು ಬಾಯಿಗೆ ಹಾಕಿಕೊಂಡು ಜಗಿಯುತ್ತಾ ರಸವನ್ನು ನುಂಗಬೇಕು. ಎರಡು ಮೂರು ದಿನ ಹೀಗೆ ಮಾಡಿದರೆ ಕೆಮ್ಮು ನಿವಾರಣೆಯಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net