ಒಂದೇ ಬ್ಯಾಗ್​ ಬೆಲೆ 42 ಕೋಟಿ ರೂಪಾಯಿ! ಪ್ರಪಂಚದ ಅತ್ಯಂತ ದುಬಾರಿ ಬ್ಯಾಗ್​ಗಳು ಹೇಗಿವೆ ನೋಡಿ..

bag
Published on

ಬೆಂಗಳೂರು: ಎಲ್ಲಾದರೂ ಹೊರಗೆ ಹೋಗಬೇಕಾದರೆ ನಿಮ್ಮ ಹಣವನ್ನು ಜೋಪಾನವಾಗಿಟ್ಟುಕೊಳ್ಳಲು ಬ್ಯಾಗ್ ಬಳಸುತ್ತೀರಲ್ಲವೇ? ಆದರೆ ಈ ಬ್ಯಾಗ್​ಗಳನ್ನು ಕೊಂಡುಕೊಂಡರೆ ಹಣದ ಬದಲು ಬ್ಯಾಗ್​ ಅನ್ನು ಜೋಪಾನ ಮಾಡಿಟ್ಟುಕೊಳ್ಳಲೇ ನೀವು ಪರದಾಡಬೇಕಾದೀತು. ಏಕೆಂದರೆ ಇವುಗಳ ಬೆಲೆ ಹತ್ತಾರು ಕೋಟಿ ರೂಪಾಯಿ!

ಪರ್ವ ಮಿಯಾ ಬ್ಯಾಗ್​
ಪರ್ವ ಮಿಯಾ ಬ್ಯಾಗ್​

ಸದ್ಯ ಇಡೀ ದೇಶದಲ್ಲಿ ಇರುವ ಅತ್ಯಂತ ದುಬಾರಿ ಬ್ಯಾಗ್ ಎಂದರೆ ಅದು ಪರ್ವ ಮಿಯಾ ಬ್ಯಾಗ್​. ಸಮುದ್ರಕ್ಕೆ ಪ್ಲಾಸ್ಟಿಕ್ ಎಸೆದು ಕಲುಷಿತಗೊಳಿಸುತ್ತಿರುವ ಜನರಿಗೆ ಒಂದು ಎಚ್ಚರಿಕೆ ಗಂಟೆ ನೀಡುವ ಸಲುವಾಗಿ ಈ ಬ್ಯಾಗ್​ ಅನ್ನು ತಯಾರಿಸಲಾಗಿದೆ. 2020ರ ನವೆಂಬರ್​ನಲ್ಲಿ ಈ ಬ್ಯಾಗ್ ತಯಾರಿಸಲಾಗಿದ್ದು, ಇದರ ಬೆಲೆ ಬರೋಬ್ಬರಿ 52 ಕೋಟಿ ರೂಪಾಯಿ. ಸಮುದ್ರದ ನೀರಿನಂತೆ ನೀಲಿ ಬಣ್ಣದಲ್ಲಿ ಬ್ಯಾಗ್ ತಯಾರಿಸಲಾಗಿದ್ದು, ಅದರಲ್ಲಿ ಒಂದಿಷ್ಟು ಚಿಟ್ಟೆಗಳ ಡಿಸೈನ್ ಮಾಡಲಾಗಿದೆ. ಅದರಲ್ಲಿ ಮೂರು ಚಿಟ್ಟೆಗಳಲ್ಲಿ ಡೈಮಂಡ್ ಹಾಕಲಾಗಿದ್ದರೆ, ಮೂರರಲ್ಲಿ ನೀಲಮಣಿ ಬಳಸಿದ್ದರೆ ಇನ್ನುಳಿದವಲ್ಲಿ ಪರೈಬಾ ಟೂರ್‌ಮ್ಯಾಲಿನ್‌ಗಳನ್ನು ಬಳಸಲಾಗಿದೆ. ಕೇವಲ ಮೂರು ಪರ್ವ ಮಿಯಾ ಬ್ಯಾಗ್​ಗಳನ್ನು ತಯಾರಿಸಲಾಗಿದೆ.

ಮೌವಾಡ್ 1001 ನೈಟ್ಸ್ ಡೈಮಂಡ್ ಪರ್ಸ
ಮೌವಾಡ್ 1001 ನೈಟ್ಸ್ ಡೈಮಂಡ್ ಪರ್ಸ

ಈ ಪರ್ವ ಮಿಯಾ ಬ್ಯಾಗ್ ಬರುವವರೆಗೆ ವಿಶ್ವದಲ್ಲಿ ಅತ್ಯಂತ ದುಬಾರಿ ಬ್ಯಾಗ್ ಆಗಿ ಗುರುತಿಸಿಕೊಂಡಿದ್ದು ಮೌವಾಡ್ 1001 ನೈಟ್ಸ್ ಡೈಮಂಡ್ ಪರ್ಸ. ಇದರ ಬೆಲೆ 28.35 ಕೋಟಿ ರೂಪಾಯಿ. ಈ ಪರ್ಸ್​ನಲ್ಲಿ ಒಟ್ಟು 4,517 ಡೈಮಂಡ್ ಬಳಸಲಾಗಿದೆ. ಅದರಲ್ಲಿ 105 ಹಳದಿ ಬಣ್ಣ, 56 ಗುಲಾಬಿ ಬಣ್ಣ ಹಾಗೂ 4,356 ಡೈಮಂಡ್ ಬಣ್ಣರಹಿತವಾಗಿದೆ.

ಹರ್ಮೆಸ್ ಕೆಲ್ಲಿ ರೋಸ್ ಗೋಲ್ಡ್ ಬ್ಯಾಗ್
ಹರ್ಮೆಸ್ ಕೆಲ್ಲಿ ರೋಸ್ ಗೋಲ್ಡ್ ಬ್ಯಾಗ್

ಹರ್ಮೆಸ್ ಕೆಲ್ಲಿ ರೋಸ್ ಗೋಲ್ಡ್ ಬ್ಯಾಗ್ ಕೂಡ ಅತ್ಯಂತ ದುಬಾರಿ ಬ್ಯಾಗ್​ಗಳ ಪಟ್ಟಿಯಲ್ಲಿರುವ ಬ್ಯಾಗ್ ಆಗಿದೆ. ಇದರ ಬೆಲೆ ಸುಮಾರು 14.92 ಕೋಟಿ ರೂಪಾಯಿ. ಇದರಲ್ಲಿ 1160 ಡೈಮಂಡ್ ಬಳಕೆ ಮಾಡಲಾಗಿದೆ. ಅಂದ ಹಾಗೆ ಈ ಬ್ಯಾಗ್​ನ ಕೇವಲ 12 ಪೀಸ್​ಗಳನ್ನು ತಯಾರಿಸಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net