ಮಂಗಳೂರಿನಲ್ಲಿ ಮತ್ತೆ ನಾಲ್ವರಿಗೆ ಕರೊನಾ ವೈರಸ್​: ರಾಜ್ಯದಲ್ಲಿ ಹೆಚ್ಚಾಗುತ್ತಿದೆ ಸೋಂಕಿತರ ಸಂಖ್ಯೆ

coronavirus-new
Published on

ಮಂಗಳೂರು: ಕರೊನಾ ವೈರಸ್​ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಇಂದು ಮಂಗಳೂರಿನಲ್ಲಿ ನಾಲ್ವರಿಗೆ ಕರೊನಾ ವೈರಸ್​ ಇರುವುದು ದೃಢಪಟ್ಟಿದ್ದು ರಾಜ್ಯದಲ್ಲಿ ವೈರಸ್​ ಪೀಡಿತರ ಸಂಖ್ಯೆ 42ಕ್ಕೆ ಏರಿದೆ.

ಮಂಗಳೂರಿನಲ್ಲಿ ಓರ್ವನಿಗೆ ಕರೊನಾ ದೃಢಪಟ್ಟಿತ್ತು. ಇದೀಗ ನಾಲ್ಕು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡು ಸಂಖ್ಯೆ ಐದಕ್ಕೆ ಏರಿದೆ.

ಸದ್ಯ ಕರೊನಾ ವೈರಸ್​ ಸೋಂಕು ಕಾಣಿಸಿಕೊಂಡಿರುವ ನಾಲ್ಕೂ ಜನ ಕೇರಳ ರಾಜ್ಯದವರು ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ತಿಳಿಸಿದೆ. ಹಾಗೇ, ಮಾ.20ರ ಸಂಜೆ 5.30ರ Spice Jet(SG 60) ಹಾಗೂ ಮಾ.19ರಂದು ಮುಂಜಾನೆ 5ಗಂಟೆಯ ಏರ್​ ಇಂಡಿಯಾ ವಿಮಾನದಲ್ಲಿ ಮಂಗಳೂರಿಗೆ ಆಗಮಿಸಿದ ಪ್ರಯಾಣಿಕರು ಕಡ್ಡಾಯವಾಗಿ 14 ದಿನ ಗೃಹ ನಿಗಾವಣೆಯಲ್ಲಿ (ಹೋಂ ಕ್ವಾರಂಟೈನ್​) ಇರಬೇಕು ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net