ಕರೊನಾ ವೈರಸ್​ ಸೋಂಕು ಹರಡುವುದನ್ನು ತಪ್ಪಿಸಲು ಮೂರು ಮಾರ್ಗಗಳ ರೈಲು ಸಂಚಾರ ತಾತ್ಕಾಲಿಕ ಸ್ಥಗಿತ

indian railway mar 20
Published on

ನವದೆಹಲಿ: ರಾಷ್ಟ್ರದಲ್ಲಿ ತೀವ್ರವಾಗಿ ಹರಡುತ್ತಿರುವ ಕರೊನಾ ವೈರಸ್​ ಸೋಂಕು ನಿಯಂತ್ರಿಸಲು ರೈಲ್ವೆ ಮಂಡಳಿ ದೆಹಲಿಯಿಂದ ಮೂರು ಸ್ಥಳಗಳಿಗೆ ಸಂಚರಿಸುತ್ತಿದ್ದ ರೈಲು ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ದೆಹಲಿ ಸರಾಯ್​ ರೋಹಿಲಾ- ಪಠಾಣ್​ಕೋಟ್​ ಮಾರ್ಗದ ರೈಲು ಸಂಚಾರ ಮಾರ್ಚ್​ 18ರಿಂದ 30ರವರೆಗೆ ಸ್ಥಗಿತಗೊಂಡಿದೆ.

ನವದೆಹಲಿ- ಫಿರೋಜ್​ಪುರ್​ ಕಂಟೋನ್ಮೆಂಟ್​ ಮಾರ್ಗ ಮಾರ್ಚ್​ 20ರಿಂದ 29ರವರೆಗೆ ಹಾಗೂ ಜಬಲಾಪುರ್​-ಅಟಾರಿ ಮಾರ್ಗದಲ್ಲಿ ಮಾರ್ಚ್​ 21ರಿಂದ ಏ.1ರವರೆಗೆ ಸಂಚಾರ ರದ್ದುಗೊಳಿಸಿದೆ. ಈ ಅವಧಿಯಲ್ಲಿ ಈ ನಿಲ್ದಾಣಗಳ ನಡುವೆ ಯಾವುದೇ ರೈಲುಗಳು ಸಂಚರಿಸುವುದಿಲ್ಲ.

ರೈಲು ನಿಲ್ದಾಣಗಳಿಗೆ ಸಾರ್ವಜನಿಕರು ಬರುವುದನ್ನು ತಪ್ಪಿಸಲು ಪ್ಲಾಟ್​ಫಾರ್ಮ್​ ಟಿಕೆಟ್​ಗಳ ದರವನ್ನು ತಾತ್ಕಾಲಿಕವಾಗಿ 10 ರೂಪಾಯಿಯಿಂದ 450 ರೂಪಾಯಿವರೆಗೆ ಏರಿಕೆ ಮಾಡಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net