

ಸ್ಪೇನ್: ವಿಶ್ವಾದ್ಯಂತ ಆತಂಕಕ್ಕೆ ಕಾರಣವಾಗಿರುವ ಮಾರಕ ವೈರಸ್ ಗುಣಪಡಿಸಲು ಇಲ್ಲಿ ಹೊಸ ದಾರಿಯೊಂದು ಸಿಕ್ಕಿದೆ.
ಸ್ಪೇನ್ ದೇಶದ ಮಿಗುಯೆಲ್ ಏಂಜಲ್ ಬೆನಿಟ್ಜ್ ಎಂಬುವವರಿಗೆ ಕಳೆದ ತಿಂಗಳು ಕೊರೊನಾ ಸೋಂಕು ದೃಡಪಟ್ಟಿತ್ತು. ಆದರೆ ನಾನೀಗ ಸಂಪೂರ್ಣವಾಗಿ ಗುಣಮುಖವಾಗಿದ್ದೇನೆ. ಅದಕ್ಕೆ ನಮ್ಮ ವೈದ್ಯರೇ ಕಾರಣ ಎಂದು ಅವರು ತಿಳಿಸಿದ್ದಾರೆ.
ಈ 62 ವರ್ಷದ ಕೊರೊನಾ ಪೀಡಿತಗೆ ಕೊಟ್ಟ ಔಷಧ ಎಚ್ಐವಿಗೆ ಗುಣಪಡಿಸಲು ನೀಡುವಂತದ್ದು. ಇದನ್ನು ಎಚ್ಐವಿ ಪೀಡಿತರಿಗೆ ಕಳೆದ ದಶಕದಿಂದ ಕೊಡಲಾಗುತ್ತಿದೆ.
ಶ್ವಾಸಕೋಶದಲ್ಲಿ ವೇಗವಾಗಿ ಹರಡುವ ಕೊರೊನಾ ವೈರಸ್, ಅಲ್ಲಿನ ಕೋಶಗಳನ್ನು ಕೊಂದು ನ್ಯುಮೋನಿಯಾಕ್ಕೆ ಕಾರಣವಾದಾಗ ಜೀವಕ್ಕೆ ಮಾರಕವಾಗುತ್ತದೆ.
ಇಲ್ಲಿನ ಆಸ್ಪತ್ರೆಯೊಂದು ವಾರದಿಂದ ಪ್ರಯೋಗಾತ್ಮಕವಾಗಿ ಕೊರೊನಾ ವೈರಸ್‌ಗೆ ಚಿಕಿತ್ಸೆ ನೀಡುತ್ತಿದೆ. ಸ್ಪೇನ್ನಲ್ಲಿ 171 ಮಂದಿಗೆ ಕೊರೊನಾ ದೃಢವಾಗಿದೆ. ಇಲ್ಲಿನ ಆಸ್ಪತ್ರೆಯ ಹಿರಿಯ ವೈದ್ಯ ಸ್ಯಾಂಟಿಗೊ ಮೊರೆನೊ ಅಭಿಪ್ರಾಯವೆಂದರೆ "ಕೊರೊನಾ ಎಚ್ಐವಿಯಂತಹದ್ದೇ ಕಾಯಿಲೆ".
ಎಚ್ಐವಿ ಗುಣಪಡಿಸಲು ಬಳಸುವ ಔಷಧದ ಸಂಯೋಜನೆಯನ್ನೇ ನಾವು ಕೊರೊನಾ ವಿರುದ್ಧದ ಬಳಸಿದ್ದೇವೆ. ನಾವು ಇಲ್ಲಿಯವರೆಗೆ ಪಡೆದ ಫಲಿತಾಂಶಗಳು ಉತ್ತೇಜನಕಾರಿಯಾಗಿವೆ. ಪ್ರಸ್ತುತ ಗುಣಪಡಿಸಲಾಗದ ಕೊರೊನಾ ವೈರಸ್‌ಗೆ ಚಿಕಿತ್ಸೆ ನೀಡುವಲ್ಲಿ ಈಗ ಅಸ್ತಿತ್ವದಲ್ಲಿರುವ ಔಷಧಗಳು ಬಹು ಮುಖ್ಯ ಪಾತ್ರವಹಿಸಬಹುದು ಎಂದು ಇಂಗ್ಲೆಂಡ್‌ನ ಮುಖ್ಯ ವೈದ್ಯಕೀಯ ಅಧಿಕಾರಿ ಸೂಚಿಸಿದ್ದರಿಂದ ನಾವು ಈ ಪ್ರಯೋಗ ಮಾಡಿದೆವು ಎನ್ನುತ್ತಾರೆ ಹಿರಿಯ ವೈದ್ಯ ಸ್ಯಾಂಟಿಗೊ ಮೊರೆನೊ ಅವರು. (ಏಜೆನ್ಸೀಸ್)