

ಬೆಂಗಳೂರು: ಕರ್ನಾಟಕದಲ್ಲಿ ಕರೊನಾ ಭೀಕರತೆ ಹೆಚ್ಚಾಗುತ್ತಿದೆ. ಪುಟ್ಟ ಮಗುವಿನಿಂದ ಹಿಡಿದು, ವೃದ್ಧರವರೆಗೆ ಸೋಂಕು ತಗುಲಿತ್ತಿದೆ.
ಸರ್ಕಾರ ವಿದೇಶದಿಂದ ಬಂದವರಿಗೆಲ್ಲ ಕಡ್ಡಾಯವಾಗಿ ಹೋಂ ಕ್ವಾರಂಟೈನ್ ವಿಧಿಸಿದೆ. 14ದಿನ ಮನೆ ಬಿಟ್ಟು ಹೊರಗೆ ಬರಲೇಬೇಡಿ ಎಂದು ಆದೇಶ ನೀಡಿದೆ. ಹಾಗೇ ಯಾರಲ್ಲಾದರೂ ಕರೊನಾ ದೃಢಪಟ್ಟರೆ, ಅವರ ಸಂಪರ್ಕಕ್ಕೆ ಬಂದವರನ್ನೆಲ್ಲ ಟ್ರ್ಯಾಕ್ ಮಾಡುತ್ತಿದೆ.
ಸದ್ಯ ರಾಜ್ಯಾದ್ಯಂತ ಯಾವ ಯಾವ ಏರಿಯಾದಲ್ಲಿ ಎಷ್ಟು ಮಂದಿ ಈ ಹೋಂ ಕ್ವಾರಂಟೈನ್ನಲ್ಲಿ ಇದ್ದಾರೆ ಎಂಬುದನ್ನು https://www.quarantime.in/ ವೆಬ್ಸೈಟ್ ಮೂಲಕ ತಿಳಿದುಕೊಳ್ಳಬಹುದು. ಆದರೆ ಇದಕ್ಕೆ ಆಯಾ ಪ್ರದೇಶದ ಪಿನ್ಕೋಡ್ ಗೊತ್ತಿರಬೇಕು. ಉಳಿದ ಪ್ರದೇಶಗಳು ಬಿಡಿ ನಿಮ್ಮ ಏರಿಯಾದ ಪಿನ್ಕೋಡ್ ಹಾಕಿ ಪರಿಶೀಲನೆ ಮಾಡಿಕೊಳ್ಳಿ.
https://www.quarantime.in/ ಮೇಲೆ ಕ್ಲಿಕ್ ಮಾಡುತ್ತಿದ್ದಂತೆ, ನಿಮ್ಮ ಏರಿಯಾದ ಪಿನ್ಕೋಡ್ ನಮೂದಿಸಿ ಎಂದು ಬಿಳಿಬಣ್ಣದ ಬಾರ್ ಕಾಣಿಸುತ್ತದೆ. ಅದರ ಮೇಲೆ ಪಿನ್ಕೋಡ್ ಟೈಪ್ ಮಾಡಿ. ಹಾಗೇ ಅದರ ಮುಂದೆ ಇರುವ ಹಸಿರು ಮಾರ್ಕ್ ಮೇಲೆ ಕ್ಲಿಕ್ ಮಾಡಿ. ಆಗ ಅಲ್ಲೇ ಕೆಳಗಡೆ ನಿಮ್ಮ ಏರಿಯಾದಲ್ಲಿ ಕ್ವಾರಂಟೈನ್ನಲ್ಲಿ ಇರುವವರ ಸಂಖ್ಯೆ ಕೆಂಪುಬಣ್ಣದಲ್ಲಿ ಗೋಚರಿಸುತ್ತದೆ.
ಮತ್ತೆ ಹೆಚ್ಚಿನ ಮಾಹಿತಿ (More Details) ಮೇಲೆ ಕ್ಲಿಕ್ ಮಾಡಿದರೆ ಕ್ವಾರಂಟೈನ್ನಲ್ಲಿ ಇರುವವರ ಪ್ರಯಾಣದ ಹಿಸ್ಟರಿ, ಎಷ್ಟುದಿನದಿಂದ ಇದ್ದಾರೆ ಎಂಬಿತ್ಯಾದಿ ವಿವರವೂ ಗೋಚರಿಸುತ್ತದೆ.
ಕರ್ನಾಟಕದ ಸರ್ಕಾರ ಸರ್ವೇ ಮಾಡಿದಾಗ ದೊರೆತ ಸಂಖ್ಯೆಗಳನ್ನು ಆಧರಿಸಿ ಈ ಟ್ರ್ಯಾಕ್ ವೆಬ್ಸೈಟ್ ರೂಪಿಸಲಾಗಿದೆ ಎನ್ನಲಾಗಿದೆ.
ನೀವೂ ನಿಮ್ಮ ಏರಿಯಾದ ಪಿನ್ ಕೋಡ್ ಹಾಕಿ..ಎಷ್ಟು ಜನರು ಇದ್ದಾರೆ ಎಂಬುದನ್ನು ನೋಡಿ. ಮುಂಜಾಗ್ರತೆ ವಹಿಸಿ. ಹಾಗೇ..ಯುವಕಮಂಡಳ, ಆಶಾಕಾರ್ಯಕರ್ತೆಯರ ಮೂಲಕ ನಿಮ್ಮ ಸುತ್ತಮುತ್ತ ಇರುವ ಜನರಿಗೂ ಜಾಗೃತಿ ಮೂಡಿಸಿ.