ಈ ಮೂರು ರಾಜ್ಯಗಳಿಗೆ ಅಲ್ಲು ಅರ್ಜುನ್ ಕೊಟ್ಟ ದೇಣಿಗೆ ಎಷ್ಟು?

Allu Arjun
Published on

ಹೈದರಾಬಾದ್‌: ಕರೊನಾ ಹಿನ್ನೆಲೆಯಲ್ಲಿ ಟಾಲಿವುಡ್ ಸಿನಿಮಾರಂಗದಿಂದ ಒಬ್ಬರಿಂದ ಒಬ್ಬರು ಪ್ರೇರಿತಗೊಂಡು ದೇಣಿಗೆ ನೀಡುವಲ್ಲಿ ಮುಂದೆ ಬರುತ್ತಿದ್ದಾರೆ. ಈಗಾಗಲೇ ಪವನ್ ಕಲ್ಯಾಣ್, ರಾಮ್‌ಚರಣ್ ತೇಜ, ಚಿರಂಜೀವಿ ದೊಡ್ಡ ಮೊತ್ತವನ್ನೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೀಡಿದ್ದಾರೆ. ಈಗ ಅಲ್ಲು ಅರ್ಜುನ್ ಸರದಿ. ಕರೊನಾ ಕರಾಳತೆ ಅರಿತಿರುವ ಅವರು ಬರೋಬ್ಬರಿ 1ಕೋಟಿ 25 ಲಕ್ಷ ಹಣವನ್ನು ನೀಡುವುದಾಗಿ ಹೇಳಿಕೊಂಡಿದ್ದಾರೆ. ಬರೀ ಆಂಧ್ರ ಮತ್ತು ತೆಲಂಗಾಣಕ್ಕಷ್ಟೇ ಅಲ್ಲದೆ, ಕೇರಳಕ್ಕೂ ನೆರವಿನ ಹಸ್ತ ಚಾಚಿದ್ದಾರೆ. ಕರೊನಾ ವೈರಸ್ ಇಡೀ ವಿಶ್ವವನ್ನೇ ಆವರಿಸಿದೆ. ನಮ್ಮ ನಿತ್ಯದ ಜೀವನವನ್ನೇ ಬದಲಾಯಿಸಿದೆ. ಇಂಥ ಸಂದರ್ಭದಲ್ಲಿ ವೈದ್ಯರು, ಪೊಲೀಸ್ ಇಲಾಖೆ, ಸೇನೆ ಸೇರಿ ಹಲವು ಕ್ಷೇತ್ರದವರು ತಮ್ಮ ಕೈಲಾದ ಮಟ್ಟಿಗೆ ಸೇವೆಯಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ನನ್ನ ಕೈಲಾದ ಮಟ್ಟಿಗೆ ದೇಣಿಗೆ ನೀಡಲು ಬಯಸಿದ್ದೇನೆ. ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳ ರಾಜ್ಯಗಳಿಗೆ 1 ಕೋಟಿ 25 ಲಕ್ಷ ಹಣ ನೀಡಲಿದ್ದೇನೆ. ಜತೆಗೆ ಆಗಾಗ ಕೈಗಳನ್ನು ಶುಚಿಯಾಗಿಸಿಕೊಳ್ಳಿ ಮತ್ತು ಮನೆಯಲ್ಲಿಯೇ ಇರಿ’ ಎಂದಿದ್ದಾರೆ.

-ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net