

ಹಾಸನ: ಮನೆಯಲ್ಲೇ ಕ್ವಾರಂಟೈನ್ಗೆ ಒಳಗಾಗಿದ್ದ ವ್ಯಕ್ತಿಯೊಬ್ಬ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಶ್ರವಣಬೆಳಗೊಳ ಸಮೀಪ ಇರುವ ಮಂಚೇನಹಳ್ಳಿ ಗ್ರಾಮದ 35 ವರ್ಷದ ವ್ಯಕ್ತಿಗೆ ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ.
ಈತ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ. ಯುಗಾದಿ ಹಬ್ಬಕ್ಕಾಗಿ ಮಂಚೇನಹಳ್ಳಿಗೆ ಬಂದಿದ್ದ. ಈ ವೇಳೆ ಈತನ ಕೈಗೆ ಮುದ್ರೆ ಹಾಕಿ ಕ್ವಾರಂಟೈನ್ನಲ್ಲಿ ಇರುವಂತೆ ಸೂಚಿಸಲಾಗಿತ್ತು. ಅಲ್ಲದೆ ಈತ ಮೂತ್ರಪಿಂಡ ಸಮಸ್ಯೆಯಿಂದ ಕೂಡ ಬಳಲುತ್ತಿದ್ದ. ಮನೆಯವರನ್ನು ಪೊಲೀಸರು ಖಾಲಿ ಮಾಡಿಸಿದ್ದರು. ವೈದ್ಯರು ಬರುವವರೆಗೆ ಆತನೊಂದಿಗೆ ಸಂಪರ್ಕಕ್ಕೆ ಯಾರನ್ನು ಬಿಡುತ್ತಿರಲಿಲ್ಲ. ಹೀಗಾಗಿ ಆತ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. (ದಿಗ್ವಿಜಯ ನ್ಯೂಸ್)