ಜಾಗತಿಕವಾಗಿ ದಾಖಲೆ ಪ್ರಮಾಣದ ಏರಿಕೆ

Corona
Published on

ನವದೆಹಲಿ: ಜಾಗತಿಕವಾಗಿ ಕರೊನಾ ಸೋಂಕಿನ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದ್ದು, ಗುರುವಾರ ಒಂದೇ ದಿನ 3.14 ಲಕ್ಷಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಇದುವರೆಗಿನ ಏಕದಿನ ಏರಿಕೆಯಲ್ಲಿ ಇದು ಗರಿಷ್ಠ ದಾಖಲೆಯಾಗಿದೆ.

ಭಾರತದಲ್ಲಿ 96,500 ಪ್ರಕರಣಗಳು ಹೆಚ್ಚಾಗಿದ್ದರೆ, ಅಮೆರಿಕದಲ್ಲಿ 46,300, ಬ್ರೆಜಿಲ್​ನಲ್ಲಿ 36 ಸಾವಿರದಷ್ಟು ಪ್ರಕರಣ ದೃಢವಾಗಿದೆ. ಭಾರತದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 52 ಲಕ್ಷಕ್ಕೂ ಅಧಿಕವಾಗಿದೆ. 24 ಗಂಟೆಗಳಲ್ಲಿ 1,175 ಜನರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 84 ಸಾವಿರ ಮೀರಿದೆ. ಇದುವರೆಗೆ 41 ಲಕ್ಷಕ್ಕೂ ಅಧಿಕ ಮಂದಿ ಗುಣಮುಖರಾಗಿದ್ದು, ಈ ಪ್ರಮಾಣ ಶೇ. 78.86ಕ್ಕೆ ಏರಿಕೆಯಾಗಿದೆ. ಜಾಗತಿಕ ಪ್ರಕರಣಗಳಲ್ಲಿ ಭಾರತ ಶೇ. 16ರಷ್ಟು ಪಾಲನ್ನು ಹೊಂದಿದೆ. ಹಾಗಿದ್ದರೂ ದೇಶದ ಜನಸಂಖ್ಯೆಗೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆ ಅತ್ಯಂತ ಕಡಿಮೆಯಿದೆ. ಮರಣ ಪ್ರಮಾಣ ಶೇ. 1.6ರಷ್ಟಿದ್ದು, ಪಾಸಿಟಿವಿಟಿ ಪ್ರಮಾಣ ಶೇ. 8.5ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ದುಬೈನಲ್ಲಿ ಏರ್ ಇಂಡಿಯಾ ವಿಮಾನಕ್ಕೆ ನಿರ್ಬಂಧ: ಅರಬ್ ಸಂಯುಕ್ತ ಸಂಸ್ಥಾನಕ್ಕೆ ತೆರಳುವ ಭಾರತದ ಏರ್ ಇಂಡಿಯಾ ಎಕ್ಸ್​ಪ್ರೆಸ್ ವಿಮಾನಗಳನ್ನು ಅಕ್ಟೋಬರ್ 2ರವರೆಗೆ ನಿರ್ಬಂಧಿಸಿರುವುದಾಗಿ ಅಲ್ಲಿನ ವಿಮಾನಯಾನ ಸಚಿವಾಲಯ ತಿಳಿಸಿದೆ.

ಚೀನಾದಲ್ಲಿ ಬ್ಯಾಕ್ಟೀರಿಯಾ

ಕರೊನಾ ಸೋಂಕು ಮೊದಲು ಕಾಣಿಸಿಕೊಂಡ ಚೀನಾದಲ್ಲಿ ಬ್ಯಾಕ್ಟೀರಿಯಾ ಸಂಬಂಧಿತ ಮತ್ತೊಂದು ಕಾಯಿಲೆ ಕಾಣಿಸಿಕೊಂಡಿದೆ. ಸರ್ಕಾರಿ ಲ್ಯಾಬೋರೇಟರಿಯೊಂದರಲ್ಲಿ ಪ್ರಾಣಿಗಳ ಔಷಧ ತಯಾರಿಸುವ ವೇಳೆ ಹೊರ ಹೊಮ್ಮಿದ ಬ್ಯಾಕ್ಟೀರಿ ಯಾದಿಂದ ಬ್ರೂಸೆಲೋಸಿಸ್ ಕಾಯಿಲೆ ಉಂಟಾಗಿದೆ.

ಇಸ್ರೇಲ್​ನಲ್ಲಿ ಮತ್ತೊಮ್ಮೆ ಲಾಕ್​ಡೌನ್

ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಲಾಕ್​ಡೌನ್ ಮಾಡಿರುವುದಾಗಿ ಇಸ್ರೇಲ್​ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ. ಶುಕ್ರವಾರದಿಂದ ಮೂರು ವಾರಗಳ ಲಾಕ್​ಡೌನ್ ಜಾರಿಯಲ್ಲಿರಲಿದೆ. ದೇಶದಲ್ಲಿ ಈವರೆಗೆ 1.77 ಲಕ್ಷ ಪ್ರಕರಣ ಪತ್ತೆ ಯಾಗಿದ್ದು, 46,500 ಸಕ್ರಿಯ ಪ್ರಕರಣಗಳಿವೆ. 1,170 ಜನರು ಮೃತರಾಗಿದ್ದಾರೆ.

ಮರಣ ಪ್ರಮಾಣ ಕಡಿಮೆಯೇಕೆ?

  • ಭಾರತ ಮತ್ತು ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಕರೊನಾ ಮರಣ ಪ್ರಮಾಣ ಕಡಿಮೆಯಾಗಿರುವುದಕ್ಕೆ ಕಾರಣವನ್ನು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ತಜ್ಞರು ಪತ್ತೆ ಮಾಡಿದ್ದಾರೆ. ಸಾಮಾನ್ಯವಾಗಿ ದಕ್ಷಿಣ ಏಷ್ಯಾದ ಜನರಲ್ಲಿ ಆನುವಂಶಿಕವಾಗಿ ಬಂದಿ ರುವ ಗುಣದಿಂದಲೇ ಮರಣ ಪ್ರಮಾಣ ಕಡಿಮೆಯಾಗಿದೆ. ಎಂದು ಪ್ರೊ.ಜ್ಞಾನೇಶ್ವರ ಚುಬೆ ನೇತೃತ್ವದ ತಂಡ ತಿಳಿಸಿದೆ.
  • ಉತ್ತರ ವಲಯ: ಉತ್ತರ ಪ್ರದೇಶ, ದೆಹಲಿ, ಹರಿಯಾಣ, ಜಮ್ಮು-ಕಾಶ್ಮೀರ, ಉತ್ತರಾ ಖಂಡ, ಹಿಮಾಚಲ ಪ್ರದೇಶ, ಚಂಡೀಗಢ, ಲಡಾಖ್
  • ದಕ್ಷಿಣ ವಲಯ: ಆಂಧ್ರ ಪ್ರದೇಶ, ತಮಿಳು ನಾಡು, ಕರ್ನಾಟಕ, ಕೇರಳ, ತೆಲಂಗಾಣ, ಪದುಚೆರಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ
  • ಪಶ್ಚಿಮ ವಲಯ: ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಗೋವಾ, ದಾದ್ರ ಮತ್ತು ನಗರ ಹವೇಲಿ, ದಮನ್ ಮತ್ತು ದಿಯು
  • ಪೂರ್ವ ವಲಯ: ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ, ಅಸ್ಸಾಂ, ಸಿಕ್ಕಿಂ, ಮಣಿಪುರ, ತ್ರಿಪುರಾ, ಮಿಜೋರಾಂ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮೇಗಾಲಯ, ಒಡಿಶಾ
  • ಮಧ್ಯ ವಲಯ: ಮಧ್ಯಪ್ರದೇಶ, ಛತ್ತೀಸ್​ಗಢ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net