ಮಂಗಳೂರಿನಲ್ಲಿ 10 ತಿಂಗಳ ಮಗುವಿಗೂ ಕರೊನಾ ವೈರಸ್​ ಸೋಂಕು; ಸಂಪೂರ್ಣ ಗ್ರಾಮಕ್ಕೇ ದಿಗ್ಬಂಧನ ಹಾಕಿದ ಜಿಲ್ಲಾಡಳಿತ

Suspected Coronavirus 15 march 20
Published on

ಮಂಗಳೂರು: ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದಲ್ಲಿ 10 ತಿಂಗಳ ಗಂಡುಮಗುವಿಗೆ ಕರೊನಾ ಸೋಂಕು ತಗುಲಿದೆ.

ಈ ಮಗು ತೀವ್ರ ಜ್ವರ ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿತ್ತು. ಮಾ.23ರಂದು ಅದನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಾಗೇ 24ರಂದು ಅದರ ಗಂಟಲಿನ ದ್ರವದ ಮಾದರಿಯನ್ನು ಕರೊನಾ ತಪಾಸಣೆಗೆ ಕಳಿಸಲಾಗಿತ್ತು. ಇದೀಗ ವರದಿಯಲ್ಲಿ ಪಾಸಿಟಿವ್​ ಬಂದಿದೆ.

ಮಗುವಿನ ಆರೋಗ್ಯ ಸ್ಥಿರವಾಗಿದ್ದು, ಅದರ ಪಾಲಕರು, ಹತ್ತಿರದ ಸಂಬಂಧಿಗಳನ್ನು ತೀವ್ರ ನಿಗಾದಲ್ಲಿ ಇಡಲಾಗಿದೆ. ಇಡೀ ಸಜಿಪನಡು ಗ್ರಾಮವನ್ನು ಕ್ವಾರೆಂಟೈನ್​ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಈ ಗ್ರಾಮಕ್ಕೆ ಪ್ರವೇಶ ಹಾಗೂ ನಿರ್ಗಮನವನ್ನು ನಿರ್ಬಂಧಿಸಲಾಗಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net