ತಬ್ಲಿಘಿ ಜಮಾತ್ ಮುಖ್ಯಸ್ಥ ಮೌಲನಾ ಸಾದ್ ವಿರುದ್ಧ ಪ್ರಕರಣ ದಾಖಲು

Moulana (1)
Published on

ನವದೆಹಲಿ: ತಬ್ಲಿಘಿ ಜಮಾತ್ ಮುಖ್ಯಸ್ಥ ಮೌಲನಾ ಸಾದ್ ವಿರುದ್ಧ ಉದ್ದೇಶಪೂರ್ವಕವಲ್ಲದ ಕೊಲೆ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದಾರೆ. ಸಾದ್ ಸೇರಿ 16 ಜನರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ.

ತಬ್ಲಿಘಿ ಜಮಾತ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 1,890 ಮಂದಿ ವಿರುದ್ಧ ಲುಕ್​ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ 9 ಸಾವಿರ ಜನರು ಭಾಗವಹಿಸಿದ್ದರು. ಇವರ ಸಂಪರ್ಕಕ್ಕೆ ಬಂದ ಸುಮಾರು 25 ಸಾವಿರ ಜನರನ್ನು ಮುಜಾಂಗ್ರತಾ ಕ್ರಮವಾಗಿ ಕ್ವಾರಂಟೈನ್​ಗೆ ಕಳುಹಿಸಲಾಗಿದೆ ಮತ್ತು ತಬ್ಲಿಘಿ ಜಮಾತ್ ಕೇಂದ್ರ ಕಚೇರಿಯಲ್ಲಿದ್ದ 2,300ಕ್ಕೂ ಹೆಚ್ಚು ಜನರನ್ನು ಸ್ಥಳಾಂತರ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 300 ವಿದೇಶಿಯರಲ್ಲಿ ಕೆಲವರಿಗೆ ಕೊರನಾ ಸೋಂಕು ಇತ್ತು. ಹೀಗಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಸೋಂಕು ಪಸರಿಸಿತು.

ಲಾಕ್​ಡೌನ್ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಸಾದ್ ವಿರುದ್ಧ ಮಾರ್ಚ್ 31ರಂದು ಎಫ್​ಐಆರ್ ದಾಖಲಾಗಿತ್ತು ಈಗ ಇದನ್ನು ಐಪಿಸಿ 304ನೇ ಸಕ್ಷನ್ ಅನ್ವಯ ಉದ್ದೇಶವಲ್ಲದ ಕೊಲೆ ಎಂದು ಪರಿವರ್ತಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net