ಪಾಕಿಸ್ತಾನದಲ್ಲಿ ಹಿಂದೂ, ಕ್ರೈಸ್ತರಿಗೆ ಅನ್ಯಾಯ: ಯುಎಸ್‌ಸಿಐಆರ್‌ಎಫ್‌ನಿಂದ ಪಾಕ್‌ಗೆ ಮುಖಭಂಗ

pak
Published on

ಕರಾಚಿ: ಹಿಂದೂ ಮತ್ತು ಕ್ರೈಸ್ತರಿಗೆ ಪಾಕಿಸ್ತಾನದಲ್ಲಿ ಆಹಾರ ಸಾಮಗ್ರಿಗಳನ್ನು ನೀಡದೇ ತಾರತಮ್ಯ ಮಾಡುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ (ಯುಎಸ್‌ಸಿಐಆರ್‌ಎಫ್‌), ಈ ಸುದ್ದಿ ಅತ್ಯಂತ ಖೇದಕರ ಹಾಗೂ ಖಂಡನೀಯ ಎಂದು ಕಿಡಿ ಕಾರಿದೆ. ಈ ಹೇಳೀಕೆಯಿಂದ ಧರ್ಮಗಳ ನಡುವೆ ಭೇದಭಾವ ತೋರಿಸುತ್ತಿರುವ ಪಾಕಿಸ್ತಾನಕ್ಕೆ ತೀವ್ರ ಮುಗುಜರ ಉಂಟಾಗಿದೆ.

‘ಕರೊನಾ ಸೋಂಕು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇಂಥ ಸಮುದಾಯದಲ್ಲಿ ಪಾಕಿಸ್ತಾನನದಲ್ಲಿರುವ ಅಲ್ಪಸಂಖ್ಯಾತ ಸಮುದಾಯಗಳು ಹಸಿವಿನ ವಿರುದ್ಧ ಹೋರಾಡುತ್ತಿವೆ. ಅವರ ಕುಟುಂಬಗಳನ್ನು ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿಡಲು ಪ್ರತಿಯೊಂದು ಸರ್ಕಾರದ ಕರ್ತವ್ಯ. ಅದನ್ನು ಬಿಟ್ಟು ಈ ರೀತಿ ಧರ್ಮಧರ್ಮಗಳ ನಡುವೆ ಭೇದಭಾವ ಎಸಗುವುದು ಖಂಡನೀಯ ಎಂದು ಯುಎಸ್‌ಸಿಐಆರ್‌ಎಫ್‌ ಆಯುಕ್ತ ಅನುರಿಮಾ ಭಾರ್ಗವ ಹೇಳಿದ್ದಾರೆ,

“ಪ್ರಧಾನಿ ಇಮ್ರಾನ್ ಖಾನ್ ಅವರು ಅಂತಾರಾಷ್ಟ್ರೀಯ ಸಮುದಾಯಕ್ಕೆ ನೀಡಿದ ಇತ್ತೀಚಿನ ಭಾಷಣದಲ್ಲಿ, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸರ್ಕಾರಗಳು ಎದುರಿಸುತ್ತಿರುವ ಸವಾಲು ಹಾಗೂ ಜನರು ಹಸಿವಿನಿಂದ ಸಾಯುತ್ತಿರುವ ಬಗ್ಗೆ ಉಲ್ಲೇಖಿಸಿದ್ದಾರೆ. ಪ್ರತಿಯೊಬ್ಬ ಪ್ರಜೆಯನ್ನು ರಕ್ಷಿಸುವುದು ಮತ್ತು ಕರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ತಾವು ಪ್ರಯತ್ನಿಸುವುದಾಗಿ ಹೇಳಿದ್ದಾರೆ. ಇದನ್ನು ಅವರು ಎತ್ತಿಹಿಡಿಯಬೇಕಿದೆ. ಇದು ಇತರ ದೇಶಗಳಿಗೂ ಮಾದರಿಯಾಗಬೇಕಿದೆ. ಧಾರ್ಮಿಕ ಅಲ್ಪಸಂಖ್ಯಾತರಿಗೂ ಸರಿಯಾದ ಅನುಕೂಲ ಕಲ್ಪಿಸಿಕೊಡುವ ಅಗತ್ಯವಿದೆ, ಇಲ್ಲದಿದ್ದರೆ, ಧಾರ್ಮಿಕ ತಾರತಮ್ಯ ಮಾಡುವುದು ಸರಿಯಲ್ಲ. ಈ ರೀತಿ ಮಾಡಿದರೆ ಅಂತರ್‌ಕೋಮು ಕಲಹ ಸೃಷ್ಟಿಯಾಗಿ ಬಿಕ್ಕಟ್ಟು ಇನ್ನಷ್ಟು ಉಲ್ಬಣಿಸಬಹುದು’ ಎಂದಿದ್ದಾರೆ.

ಪಾಕಿಸ್ತಾನದಲ್ಲಿ ಹಿಂದೂಗಳು ದೇಶದ ಜನಸಂಖ್ಯೆಯ ಶೇಕಡಾ 4ರಷ್ಟಿದ್ದಾರೆ. ಈ ಸಮುದಾಯವು ಸರ್ಕಾರದಿಂದ ಅತಿಯಾದ ತಾರತಮ್ಯಕ್ಕೆ ಒಳಗಾಗುತ್ತಿದೆ. ಜತೆಗೆ ಕ್ರೈಸ್ತ ಸಮುದಾಯದವರಿಗೂ ಅನ್ಯಾಯ ಮಾಡಲಾಗುತ್ತಿದೆ. ಅನೇಕವೇಳೆ ಮೂಲಭೂತ ಸೌಕರ್ಯಗಳಿಂದಲೂ ವಂಚಿತ ಮಾಡಲಾಗುತ್ತಿದೆ ಎಂಬ ಬಗ್ಗೆ ವರದಿಯಾಗಿರುವುದನ್ನು ಉಲ್ಲೇಖಿಸಿರುವ ಯುಎಸ್‌ಸಿಐಆರ್‌ಎಫ್‌, ಇದನ್ನು ತುಂಬಾ ಗಂಭೀರವಾಗಿ ಪರಿಗಣಿಸಿದೆ. (ಏಜನ್ಸೀಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net