ದೇಶಾದ್ಯಂತ ಲಾಕ್​ಡೌನ್ 3.0 ಜಾರಿ: ಹಸಿರು, ಕಿತ್ತಳೆ ವಲಯದಲ್ಲಿ ನಿರ್ಬಂಧ ಸಡಿಲಿಕೆ

Lockdown
Published on

ನವದೆಹಲಿ: ಕೋವಿಡ್-19 ಸೋಂಕು ವ್ಯಾಪಕವಾಗಿರುವ ಕಾರಣ ಲಾಕ್​ಡೌನ್ ವಿಸ್ತರಣೆ ಮಾಡಿರುವ ಕೇಂದ್ರ ಸರ್ಕಾರದ ಆದೇಶ ಸೋಮವಾರದಿಂದ ಜಾರಿಗೆ ಬಂದಿದೆ. ಸೋಂಕು ವ್ಯಾಪಕವಾಗಿರುವ ಕೆಂಪು ವಲಯದಲ್ಲಿ ನಿರ್ಬಂಧ ನಿಯಮ ಮುಂದುವರಿಯಲಿದೆ. ಸೋಂಕು ಸಾಧಾರಣವಾಗಿರುವ ಮತ್ತು ಶಂಕಿತ ಪ್ರಕರಣಗಳಿರುವ ಕಿತ್ತಳೆ ವಲಯದಲ್ಲಿ ನಿರ್ಬಂಧ ಸಡಿಲಗೊಳಿಸಿದೆ. ಇಂದಿನಿಂದ ಮೇ 17ರವರೆಗೆ ಯಾವುದಕ್ಕೆ ವಿನಾಯಿತಿ ಮತ್ತು ಯಾವುದಕ್ಕೆ ನಿರ್ಬಂಧವಿದೆ ಎಂಬ ಕೇಂದ್ರದ ಮಾರ್ಗಸೂಚಿ ಸಂಕ್ಷಿಪ್ತ ನೋಟ ಇಲ್ಲಿದೆ.

ಯಾವುದಕ್ಕೆ ಸಂಪೂರ್ಣ ನಿಷೇಧ?

  • ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನಯಾನ
  • ಅಂತರರಾಜ್ಯ ಸಾರ್ವಜನಿಕ ಸಾರಿಗೆ ಸೇವೆ
  • ರೈಲು ಮತ್ತು ಮೆಟ್ರೊ ರೈಲು ಸೇವೆ
  • ಅಂತರರಾಜ್ಯ ಖಾಸಗಿ ವಾಹನಗಳ ಓಡಾಟ
  • ಶೈಕ್ಷಣಿಕ ಸಂಸ್ಥೆಗಳು, ತರಬೇತಿ ಕೇಂದ್ರ, ಕೋಚಿಂಗ್ ಸೆಂಟರ್
  • ಹೋಟೆಲ್, ಲಾಡ್ಜ್, ರೆಸಾರ್ಟ್, ಹೋಂ ಸ್ಟೆ
  • ಸಿನಿಮಾ ಮಂದಿರ, ಶಾಪಿಂಗ್ ಮಾಲ್, ಜಿಮ್ ಕ್ರೀಡಾ ಸಂಕೀರ್ಣ, ಈಜುಕೊಳ, ಮನರಂಜನಾ ಸ್ಥಳ, ರಂಗಮಂದಿರ, ಬಾರ್, ಸಭಾಂಗಣಗಳು
  • ಸಾಮಾಜಿಕ, ರಾಜಕೀಯ, ಕ್ರೀಡಾ, ಮನರಂಜನಾ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ವಿುಕ ಕಾರ್ಯಕ್ರಮ ಮತ್ತು ಮೆರವಣಿಗೆ
  • ಎಲ್ಲ ಧರ್ಮಗಳ ಪ್ರಾರ್ಥನಾ ಮಂದಿರ/ ಪೂಜಾ ಸ್ಥಳ
  • ಸಂಜೆ 7ರಿಂದ ಬೆಳಗ್ಗೆ 7ರವರೆಗೆ ಜನರ ಅನಗತ್ಯ ಓಡಾಟ.
  • 65 ವರ್ಷ ಮೇಲ್ಪಟ್ಟವರು, ದೀರ್ಘಕಾಲೀನ ಅಸ್ವಸ್ಥರು, ಗರ್ಭಿಣಿಯರು, 10 ವರ್ಷದೊಳಗಿನ ಮಕ್ಕಳು ಅನಗತ್ಯವಾಗಿ ಮನೆಯಿಂದ ಹೊರಬರುವಂತಿಲ್ಲ.

ಕೆಂಪು ವಲಯದಲ್ಲಿ ಏನಿರಲ್ಲ?

  • ಆಟೊ, ಕ್ಯಾಬ್, ಸಾರ್ವಜನಿಕ ಸಾರಿಗೆ
  • ಅಂತರ್ ಜಿಲ್ಲಾ ಮತ್ತು ಜಿಲ್ಲೆಯೊಳಗಿನ ಸಾರ್ವಜನಿಕ ಸಾರಿಗೆ
  • ಕ್ಷೌರದಂಗಡಿ, ಮಸಾಜ್ ಸೆಂಟರ್

ಹಸಿರು ವಲಯ

  • ಜಿಲ್ಲೆಯೊಳಗೆ ಸಾರ್ವಜನಿಕ ಬಸ್ ಸಂಚಾರಕ್ಕೆ ಅನುಮತಿ. ಶೇ. 50 ಮಾತ್ರ ಆಸೀನಕ್ಕೆ ಅವಕಾಶ. ನಿಂತುಕೊಂಡು ಪಯಣಕ್ಕೆ ಅವಕಾಶ ಇಲ್ಲ.
  • ಬಸ್ ಡಿಪೊದಲ್ಲಿ ಶೇ. 50 ಸಿಬ್ಬಂದಿ ಕಾರ್ಯನಿರ್ವಹಣೆ

ಹಸಿರು ವಲಯ: ಕರೊನಾ ಸೋಂಕಿತ ಪ್ರಕರಣಗಳು ಇಲ್ಲದ ಜಿಲ್ಲೆ ಅಥವಾ 21 ದಿನಗಳಿಂದ ಪಾಸಿಟಿವ್ ಪ್ರಕರಣ ವರದಿಯಾಗದ ಜಿಲ್ಲೆ

ಕಿತ್ತಳೆ ವಲಯ: ಹಸಿರು ಮತ್ತು ಕೆಂಪು ವಲಯಗಳಲ್ಲಿ ಗುರುತಿಸದ ಜಿಲ್ಲೆಗಳು

ಕೆಂಪು ವಲಯ: ಅತಧಿಕ ಸಕ್ರಿಯ ಪ್ರರಕಣ, ಹೊಸ ಪ್ರಕರಣ ಇರುವ ಜಿಲ್ಲೆಗಳು

ಕಂಟೇನ್​ವೆುಂಟ್ ಹೊರತುಪಡಿಸಿ ಉಳಿದೆಡೆ ಏನೇನು ವಿನಾಯಿತಿ?

  • ಗ್ರಾಮೀಣ ಭಾಗದಲ್ಲಿ ಎಲ್ಲ ಉದ್ದಿಮೆಗಳಿಗೆ ಅವಕಾಶ
  • ನಗರ ಪ್ರದೇಶದಲ್ಲಿ ಸೀಮಿತ ನಿರ್ಮಾಣ ಕಾಮಗಾರಿ, ನವೀಕರಿಸಬಹುದಾದ ಇಂಧನ ಮೂಲದಲ್ಲಿನ ಕಾಮಗಾರಿ. ಗ್ರಾಮೀಣ ಭಾಗದಲ್ಲಿ ಎಲ್ಲ ರೀತಿ ನಿರ್ಮಾಣ ಕಾಮಗಾರಿ ನಡೆಸಬಹುದು
  • ಖಾಸಗಿ ಕಚೇರಿಗಳು ಶೇ. 33 ನೌಕರರ ಸಹಿತ ಕಾರ್ಯನಿರ್ವಹಿಸಬಹುದು
  • ವೈಯಕ್ತಿಕ ಕಾರು ಮತ್ತು ಕ್ಯಾಬ್ ಸೇವೆ (ಚಾಲಕ, ಹಿಂಬದಿಯಲ್ಲಿ ಇಬ್ಬರು ಮಾತ್ರ ಕೂರಬಹುದು). ದ್ವಿಚಕ್ರ ವಾಹನದಲ್ಲಿ ಸವಾರರೊಬ್ಬರು ಪಯಣಿಸಬಹುದು.
  • ಮದ್ಯ ಮಾರಾಟ ಮಳಿಗೆ

ಕಂಟೇನ್​ವೆುಂಟ್ ಪ್ರದೇಶದಲ್ಲಿ ಏನಿರುತ್ತೆ?

  • ಅವಶ್ಯಕ ವಸ್ತುಗಳ ಸರಬರಾಜು, ವೈದ್ಯಕೀಯ ಸೇವೆಗೆ ಮಾತ್ರ ಅವಕಾಶ
  • ಸಂಚಾರ ಮಾರ್ಗದ ಎರಡೂ ಬದಿಯಲ್ಲಿ ಕಡ್ಡಾಯ ತಪಾಸಣೆ. ಪರಿಶೀಲನೆ ನಡೆಸದೆ ಯಾರೂ ಓಡಾಡುವಂತಿಲ್ಲ
  • ಎಲ್ಲ ನಾಗರಿಕರಿಗೂ ಆರೋಗ್ಯ ಸೇತು ಆಪ್ ಡೌನ್​ಲೋಡ್ ಕಡ್ಡಾಯ
  • ಆಸ್ಪತ್ರೆ/ನರ್ಸಿಂಗ್ ಹೋಮ್​ಆರೋಗ್ಯ ಕೇಂದ್ರ, ಔಷಧ ಅಂಗಡಿಗೂ ನಿರ್ಬಂಧ.

ಕಿತ್ತಳೆ ವಲಯ

  • ಅಂತರ್ ಜಿಲ್ಲಾ-ಜಿಲ್ಲೆಯೊಳಗೆ ಸಾರ್ವಜನಿಕ ಬಸ್ ಸೇವೆ ಇಲ್ಲ
  • ಪಾಸ್ ಹೊಂದಿದವರು ಚತುಷ್ಚಕ್ರ ವಾಹನಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಜಿಲ್ಲೆಯೊಳಗೆ ಪ್ರಯಾಣ ಮಾಡಬಹುದು

ವಿನಾಯಿತಿ ಏನು?

  • ಅಗತ್ಯ ವಸ್ತುಗಳ ಸರಕು ಸಾಗಣೆ, ಏರ್ ಆಂಬುಲೆನ್ಸ್, ತುರ್ತು ಸೇವಾ, ರಕ್ಷಣಾ ಸಿಬ್ಬಂದಿ ವಿಮಾನಯಾನ
  • ರಕ್ಷಣೆ, ಪೊಲೀಸ್, ಆರೋಗ್ಯ, ಕಾರಾಗೃಹ, ಗೃಹರಕ್ಷಕ ದಳ, ಅಗ್ನಿ ಶಾಮಕ ದಳ, ವಿದ್ಯುತ್, ಉಗ್ರಾಣ, ಬ್ಯಾಂಕ್, ಅಂಚೆ ಕಚೇರಿ, ತುರ್ತು ಸೇವಾ ಕಚೇರಿಗಳು
  • ವಿಶೇಷ ಅನುಮತಿ ಪಡೆದ ಬಸ್ ಸಂಚಾರ
  • ಅಂತರರಾಜ್ಯ ಸರಕು ಸಾಗಣೆ ವಾಹನ
  • ತುರ್ತಸೇವೆ, ರಕ್ಷಣೆ ಮತ್ತು ಅನುಮತಿ ಪಡೆದ ಅನಾರೋಗ್ಯ ಪೀಡಿತರ ಸಂಚಾರ
  • ಆನ್​ಲೈನ್, ಅಂಚೆ ಮೂಲಕ ಶಿಕ್ಷಣ
  • ಆಸ್ಪತ್ರೆ, ಆರೋಗ್ಯ ಕೇಂದ್ರ, ಔಷಧ ಮಳಿಗೆ
  • ತುರ್ತ ಸೇವೆ ಸಿಬ್ಬಂದಿ, ಪೊಲೀಸ್, ರಕ್ಷಣಾ ಸಿಬ್ಬಂದಿ, ಈಗಾಗಲೇ ಪ್ರವಾಸಿಗರು ಇರುವ, ಕ್ವಾರಂಟೈನ್ ಕೇಂದ್ರಗಳಾಗಿ ಮಾರ್ಪಟ್ಟ ಹೋಟೆಲ್, ರೆಸ್ಟೋರಂಟ್, ಲಾಡ್ಜ್, ಹೋಂ ಸ್ಟೆಗಳು
  • ಹೋಟೆಲ್​ಗಳಿಂದ ಆಹಾರ ಪಾರ್ಸೆಲ್ ಸೌಲಭ್ಯ .
  • ಹಾಲು, ಹಣ್ಣು, ತರಕಾರಿ, ದಿನಸಿ ಇನ್ನಿತರ ಅತ್ಯವಶ್ಯಕ ಅಂಗಡಿಗಳು
  • ವಿಶೇಷ ಪಾಸ್ ಇರುವ ವಾಹನಗಳ ಸಂಚಾರ.
  • ಔಷಧ, ವೈದ್ಯಕೀಯ ಪರಿಕರಗಳ ಉತ್ಪಾದನಾ ಘಟಕ
  • ಆಹಾರ ಸಂಸ್ಕರಣಾ, ಅಗತ್ಯ ವಸ್ತು ತಯಾರಿಕಾ ಘಟಕ
  • ಇ-ಕಾಮರ್ಸ್ ಕಂಪನಿಗಳಿಗೆ ಅತ್ಯಾವಶ್ಯಕ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶ
  • ಮದುವೆ ಸಮಾರಂಭದಲ್ಲಿ 50 ಜನರಿಗೆ, ಅಂತ್ಯಕ್ರಿಯೆ ಸಂದರ್ಭದಲ್ಲಿ 20 ಜನರಿಗೆ ಮಾತ್ರ ಅವಕಾಶ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net