ಜಿಂದಾಲ್​ ಬೆನ್ನಲ್ಲೇ ಮತ್ತೊಂದು ಪ್ರತಿಷ್ಠಿತ ಕಂಪನಿಗೂ ವಕ್ಕರಿಸಿದ ಕರೊನಾ!

coronaaa
Published on

ರಾಮನಗರ: ಜಿಂದಾಲ್​ ಕಾರ್ಖಾನೆಯ ಉದ್ಯೋಗಿಗಳು ಮತ್ತು ಕುಟುಂಬಸ್ಥರಲ್ಲಿ ನಡುಕು ಹುಟ್ಟಿಸಿರುವ ಕರೊನಾ ಸೋಂಕು ಈಗ ಮತ್ತೊಂದು ಪ್ರತಿಷ್ಠಿತ ಕಂಪನಿಗೂ ವಕ್ರದೃಷ್ಟಿ ಬೀರಿದ್ದು, ಆತಂಕದ ಕಾರ್ಮೋಡ ಕವಿದಿದೆ.

ರಾಜಧಾನಿ ಬೆಂಗಳೂರಿನ ಕೂಗಳತೆ ದೂರದಲ್ಲಿರುವ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಟಯೋಟ ಕಿರ್ಲೋಸ್ಕರ್​ ಮೋಟಾರ್ಸ್ ಕಂಪನಿಯ ಇಬ್ಬರಲ್ಲಿ ಕರೊನಾ ಪಾಸಿಟಿವ್​ ದೃಢಪಟ್ಟಿದೆ.

ಟಯೋಟ ಕಿರ್ಲೋಸ್ಕರ್ ಕಂಪನಿಯ ಉದ್ಯೋಗಿಗಳಾದ ಪಾಂಡವಪುರ ಮೂಲದ ವ್ಯಕ್ತಿ ಹಾಗೂ ಬೆಂಗಳೂರಿನ ಹೆಬ್ಬಗೋಡಿ ಮೂಲದ ಯುವಕನಿಗೆ ಕರೊನಾ ಇರುವುದು ದೃಢಪಟ್ಟ ಬೆನ್ನಲ್ಲೇ ಇಂದು ಕಂಪನಿಯನ್ನು ಸೀಲ್​ಡೌನ್​ ಮಾಡಲಾಗಿದೆ.

ಹೆಬ್ಬಗೋಡಿ ಮೂಲದ ಯುವಕ ನಿನ್ನೆ(ಮಂಗಳವಾರ) ಕಂಪನಿಯಲ್ಲಿ ಕೆಲಸ ಮಾಡಿದ್ದ. ಇವನ ಕೆಲಸ ಮಾಡಿದ ಸಿಬ್ಬಂದಿಗೂ ಕ್ವಾರಂಟೈನ್​ ಮಾಡಲಾಗುತ್ತಿದೆ. ನಿನ್ನೆ ಕೂಡ ಸಾಕಷ್ಟು ಸಿಬ್ಬಂದಿ ಸೋಂಕಿತ ಯುವಕನ ಸಂಪರ್ಕದಲ್ಲಿದ್ದರು ಎಂದು ತಿಳಿದು ಬಂದಿದ್ದು, ಅವರಲ್ಲೀಗ ಸೋಂಕಿನ ಭೀತಿ ಆವರಿಸಿದೆ.

ಅಧಿಕಾರಿಗಳು ಸೋಂಕಿತರ ಟ್ರಾವೆಲ್ ಹಿಸ್ಟರಿಯ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಕೋವಿಡ್​19 ಸೋಂಕಿತರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net