

ಹಾವೇರಿ: ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಉಸ್ತುವಾರಿಯಲ್ಲಿರುವ ಹಾವೇರಿ ಜಿಲ್ಲೆಯಲ್ಲಿ ಕರೊನಾ ವಾರಿಯರ್ಸ್ಗೆ ನೀಡಿರುವ ವಾಹನಗಳು ಪದೇ, ಪದೇ ಕೆಟ್ಟು ನಿಲ್ಲುತ್ತಿವೆ.
ಕರೊನಾ ವೈರಸ್ ಹಾವಳಿ ಹತ್ತಿಕ್ಕಲ್ಲು ದುಡಿಯುತ್ತಿರುವ ಪೊಲೀಸರಿಗೆ ನೀಡಿರುವ ವಾಹನಗಳು 2 ದಿನಗಳಿಂದ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ದಾರಿ ಮಧ್ಯದಲ್ಲಿ ಪದೇ, ಪದೇ ಕೆಟ್ಟು ನಿಲ್ಲುತ್ತಿವೆ. ವೈರಸ್ ಸೋಂಕು ತಡೆಯುವ ಸೇವೆ ಮಾಡುವ ಬದಲು ವಾರಿಯರ್ಸ್ಗಳು ವಾಹನ ತಳ್ಳುವುದರಲ್ಲಿ ನಿರತರಾಗಿದ್ದಾರೆ.
ಶುಕ್ರವಾರ ರಾತ್ರಿ ಸರ್ಕಲ್ ಇನ್‌ಸ್ಪೆಕ್ಟರ್ (ಸಿಪಿಐ) ಅವರ ವಾಹನ ಕೆಟ್ಟು ನಿಂತ ಪರಿಣಾಮ ಪೊಲೀಸರು ನೂಕಿಕೊಂಡು ಹೋಗಿದ್ದರು. ನಂತರ ಶನಿವಾರ ಬೆಳಗ್ಗೆ ಡಿವೈಎಸ್ಪಿ ಅವರ ವಾಹನ ಕೂಡ ದಾರಿ ಮಧ್ಯೆ ಕೆಟ್ಟುನಿಂತಿತ್ತು. ಇದನ್ನು ಕೂಡ ಸಿಬ್ಬಂದಿ ತಳ್ಳಿಕೊಂಡು ಹೋಗಿದ್ದರು.
ಪೊಲೀಸ್ ಸಿಬ್ಬಂದಿ ವಾಹನವನ್ನು ತಳ್ಳುತ್ತಿರುವ ದೃಶ್ಯದ ವಿಡಿಯೋ ವೈರಲ್ ಆಗಿದೆ.