ಮಾರಕ ವೈರಸ್​ ಕೊರೊನಾ ಹರಡುವ ಭೀತಿ ಹಿನ್ನೆಲೆ; ಸಾಗರ ತಾಲೂಕು ನರಸೀಪುರ ನಾಟಿ ಔಷಧ ವಿತರಣೆ ತಾತ್ಕಾಲಿಕ ಸ್ಥಗಿತ

NARASIPURA
Published on

ಆನಂದಪುರ (ಶಿವಮೊಗ್ಗ ಜಿಲ್ಲೆ): ಸಾಗರ ತಾಲೂಕು ನರಸೀಪುರದ ಖ್ಯಾತ ನಾಟಿ ವೈದ್ಯರು ವಿತರಿಸುವ ಗಿಡಮೂಲಿಕೆ ಔಷಧ ವಿತರಣೆಯನ್ನು ಶನಿವಾರದಿಂದ ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಜಿಲ್ಲಾ ವೈದ್ಯಕೀಯ ಅಧಿಕಾರಿಗಳ ಸೂಚನೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ನಾಟಿ ವೈದ್ಯರ ಕುಟುಂಬದ ನಾರಾಯಣಮೂರ್ತಿ ತಿಳಿಸಿದ್ದಾರೆ.

ಕ್ಯಾನ್ಸರ್, ಕಿಡ್ನಿ, ಚರ್ಮರೋಗ ಇತ್ಯಾದಿಗಳಿಗೆ ನರಸೀಪುರದಲ್ಲಿ ಕಳೆದ 40 ವರ್ಷಗಳಿಂದ ನಾಟಿ ಔಷಧ ನೀಡಲಾಗುತ್ತಿದೆ. ಇತ್ತೀಚೆಗೆ 7-8 ವರ್ಷಗಳಿಂದ ರಾಜ್ಯ ಮಾತ್ರವಲ್ಲದೆ ಹಾಗೂ ಹೊರ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರಗಳಿಂದಲೂ ಜನರು ಔಷಧ ಪಡೆಯಲು ಆಗಮಿಸುತ್ತಿರುತ್ತಾರೆ.

ಶನಿವಾರ, ಭಾನುವಾರ, ಬುಧವಾರ, ಗುರುವಾರ ಇಲ್ಲಿ ಸಾವಿರಕ್ಕೂ ಹೆಚ್ಚು ಜನರು ಬರುತ್ತಾರೆ. ಹೀಗಾಗಿ ಕೊರೊನಾ ವೈರಸ್ ಹರಡುವ ಹಿನ್ನೆಲೆಯಲ್ಲ್ಲಿ ಮುಂಜಾಗ್ರತಾ ಕ್ರಮವಾಗಿ ಔಷಧ ವಿತರಣೆ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net